ಫರ್ನೀಚರ್, ಗೃಹ ಉಪಯೋಗಿ ವಸ್ತುಗಳು ಒಂದೇ ಸೂರಿನಡಿ ಲಭ್ಯ

KannadaprabhaNewsNetwork |  
Published : Jun 09, 2024, 01:34 AM IST
ಸೋಫಾಗಳು | Kannada Prabha

ಸಾರಾಂಶ

ನಗರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ದಿನಪತ್ರಿಕೆ ಸಹಯೋಗದಲ್ಲಿ ಫರ್ನೀಚರ್ ಲೈಫ್ ಸ್ಟೈಲ್ ಎಕ್ಸ್ ಪೋ ಅದ್ಧೂರಿಯಾಗಿ ಆರಂಭಗೊಂಡಿತು.

ಕನ್ನಡಪ್ರಭ ವಾರ್ತೆ ತುಮಕೂರುನಗರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ದಿನಪತ್ರಿಕೆ ಸಹಯೋಗದಲ್ಲಿ ಫರ್ನೀಚರ್ ಲೈಫ್ ಸ್ಟೈಲ್ ಎಕ್ಸ್ ಪೋ ಅದ್ಧೂರಿಯಾಗಿ ಆರಂಭಗೊಂಡಿತು.ನಗರದ ಗಾಜಿನ ಮನೆ ಆವರಣದಲ್ಲಿ 10 ದಿನಗಳ ಕಾಲ ಎಕ್ಸ್ ಪೋ ನಡೆಯಲಿದ್ದು, ಸುಮಾರು 70 ಕ್ಕೂ ಹೆಚ್ಚು ಸ್ಟಾಲ್‌ಗಳ ಮೂಲಕ ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಎಕ್ಸ್ ಪೋದಲ್ಲಿ ಆಂಟಿಕ್ ಫರ್ನಿಚರ್, ರಾಯಲ್ ಸೋಫಾ, ಹೋಮ್ ಇಂಟಿರಿಯರ್, ಡ್ರೆಸ್ ಮೆರಿಯಲ್ ಹಾಗೂ ಫ್ಯಾಷನ್ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗಲಿವೆ.ಶೇ.70 ರಿಯಾಯಿತಿಯಲ್ಲಿ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.‌

ಟೀಕ್, ರೋಜ್ ವುಡ್, ಲೇದರ್ ಸೋಫಾಗಳು ಸಿಗಲಿದ್ದು, ಕೇರಳ ತಮಿಳುನಾಡು, ರಾಜಸ್ತಾನ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬೆಂಗಳೂರು ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಮಳಿಗೆಗಳು ಬಂದಿವೆ. ಎಕ್ಸ್ ಪೋದಲ್ಲಿ ಉಚಿತ ಪ್ರವೇಶ ಹಾಗೂ ಉಚಿತ ಪಾರ್ಕಿಂಗ್ ವ್ಯವಸ್ಥೆಯಿದ್ದು, ತುಮಕೂರಿನ‌ ಗ್ರಾಹಕರಿಗೆ ಆಕರ್ಷಕ ದರದಲ್ಲಿ ವಸ್ತುಗಳನ್ನ ಮಾರಾಟ ಮಾಡಲಾಗುತ್ತಿದೆ.

ಜೂನ್ 17 ರವರೆಗೆ ಪ್ರತಿ ದಿನ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9.30 ರವರೆಗೆ ಎಕ್ಸ್ ಫೋ ಕಾರ್ಯಕ್ರಮ ನಡೆಯಲಿದ್ದು, ಟೀ ಕುಡ್, ರಬ್ಬರ್ ಹುಡ್, ರೋಸ್ ಹುಡ್ಡ, ಕಾರ್ವಿಂಗ್, ಲೆದರ್ ಸೋಫಾ ಸೇರಿ ಎಲ್ಲಾ ಗೃಹೋಪಯೋಗಿ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.

ಮನೆಯ ಒಳಾಂಗಣ ಹಾಗೂ ಗಾರ್ಡನ್‌ಗಳಲ್ಲಿ ಬಳಸುವ ಜೂಲಾ ಮಾದರಿಯ ತೂಗುಯ್ಯಾಲೆಗಳು ಕೂಡ ಕೈಗೆಟಕುವ ದರದಲ್ಲಿ ಸಿಗಲಿದೆ. 4 ಜನ, 6 ಹಾಗೂ 8 ಮಂದಿ ಕುಳಿತು ಒಟ್ಟಿಗೆ ಆಹಾರ ಸೇವಿಸುವಂತಹ ಡೈನಿಂಗ್ ಟೇಬಲ್ ಸಹ ಇಲ್ಲಿ ಸಿಗಲಿದೆ. ಇದರ ಜೊತೆಗೆ ಪಿಂಗಾಣಿ ಸಾಮಗ್ರಿ, ಕರ್ಟಿನ್ಸ್, ಬೆಡ್ ಶೀಟ್ಸ್, ಅಂಟಿಕ್ ಆಭರಣ, ಖಾದಿ ಉಡುಪು, ಉತ್ತರ ಭಾರತ ಶೈಲಿ ಡ್ರೆಸ್‌ ಕೂಡ ಅಮಾನಿಕೆರೆಯಲ್ಲಿ ನಡೆಯುತ್ತಿರುವ ಈ ಲೈಫ್ ಸ್ಟೈಲ್ ಎಕ್ಸ್ ಫೋದಲ್ಲಿ ಲಭ್ಯವಾಗಲಿದೆ.ಸೋಫಾ ಸೆಟ್, ಕುಷನ್, ಟೀಪಾಯಿ, ಕುರ್ಚಿ, ಗೋಡೆ ಗಡಿಯಾರ, ನೈಟ್ ಸೆಟ್ಸ್, ಬಾಗಿಲು, ಕಿಟಕಿಗಳಿಗೆ ಬಳಸಬಹುದಾದ ಅಲಂಕಾರಿಕ ಹ್ಯಾಂಗಿಂಗ್ಸ್, ದೀಪದ ಗುಚ್ಛಗಳು, ಪಿಂಗಾಣಿ ಸಾಮಗ್ರಿಗಳು, ಕೈ ಮಗ್ಗದ ಬಟ್ಟೆಗಳು, ಕರಕುಶಲ ವಸ್ತು, ಮಡಿಕೆಯಿಂದ ತಯಾರಿಸಿರುವ ಕಲಾಕೃತಿ, ಸಿರಾಮಿಕ್ ವಸ್ತು, ಕಾಶ್ಮೀರಿ ಶಾಲುಗಳು, ನೆಲಹಾಸು, ಬಣ್ಣದ ಚಿತ್ರಪಟಗಳು, ಆಟಿಕೆಗಳು ಲಭ್ಯ ಇವೆ.

ಈಗಾಗಲೇ ತುಮಕೂರಿನ ಜನತೆ ಉತ್ಸುಕತೆಯಿಂದ ಲೈಫ್ ಸ್ಟೈಲ್ ಎಕ್ಸ್ ಫೋದಲ್ಲಿ ಪಾಲ್ಗೊಳ್ಳುತ್ತಿದ್ದು, ಎಲ್ಲಾ ವರ್ಗದವರಿಗೂ ಇಷ್ಟವಾಗುವ ಉತ್ಪನ್ನಗಳು ಸಿಗಲಿದೆ. ಈ ಕೂಡಲೇ ಎಕ್ಸ್ ಫೋಗೆ ಆಗಮಿಸಿ ಬೇಕಾದ ವಸ್ತುಗಳನ್ನು ಖರೀದಿಸಿ ಮನೆಯನ್ನು ಮತ್ತಷ್ಟು ಸೌಂದರ್ಯಗೊಳಿಸಿಕೊಳ್ಳಬಹುದು ಎಂದು ಎಕ್ಸ್ ಫೋ ಇಂಡಿಯಾ ನಿರ್ದೇಶಕ ಶೇಕ್ ಜಾಕೀರ್ ತಿಳಿಸಿದ್ದಾರೆ.ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಲೈಫ್ ಸ್ಟೈಲ್ ಎಕ್ಸ್ ಫೋಗೆ ಚಾಲನೆ ನೀಡಿದರು. ಸುವರ್ಣ ವಾಹಿನಿ ಎವಿಪಿ ವಿಜಯಕುಮಾರ್, ಎಕ್ಸ್ ಪೋ ಇಂಡಿಯಾ ನಿರ್ದೇಶಕ ಶೇಕ್ ಜಾಕೀರ್ ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...