ರಂಗಭೂಮಿಗೆ ಗದಗ ಪರಿಸರದ ಕೊಡುಗೆ ಅಪಾರ: ಸುಶೀಲೇಂದ್ರ ಜೋಶಿ

KannadaprabhaNewsNetwork |  
Published : Mar 31, 2026, 02:30 AM IST
ಕಾರ್ಯಕ್ರಮದಲ್ಲಿ ಅಭಿನಯರಂಗ ಸಂಸ್ಥೆಯ ಕಲಾವಿದರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಅಭಿನಯರಂಗ ಸಂಸ್ಥೆ ನಾಟಕದ ಜತೆಗೆ ಸಾಹಿತ್ಯ, ಸಂಗೀತ, ಸಂವಾದಗಳ ಮೂಲಕ ವಿವಿಧ ಅಭಿರುಚಿಯ ಜನರನ್ನು ತಲುಪುವ ಕಾರ್ಯವನ್ನು ಮಾಡಿತು. ಅನೇಕ ಕಲಾವಿದರು ನಾಡಿನ ಬೇರೆ ಬೇರೆ ಭಾಗಗಳಲ್ಲಿ ಛಾಪನ್ನು ಮೂಡಿಸಿದ್ದಾರೆ.

ಗದಗ: ರಂಗಭೂಮಿಯ ಬೆಳವಣಿಗೆಗೆ ಗದಗ ಪರಿಸರದ ಕೊಡುಗೆ ಅಪಾರ ಎಂದು ನಟ, ನಿರ್ದೇಶಕ ಸುಶೀಲೇಂದ್ರ ಜೋಶಿ ತಿಳಿಸಿದರು.ನಗರದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಂತಕವಿಗಳು ಉತ್ತರ ಕರ್ನಾಟಕದ ಪ್ರಥಮ ನಾಟಕ ಮಂಡಳಿಯನ್ನು ಸ್ಥಾಪಿಸಿ ಮರಾಠಿ ಪ್ರಾಬಲ್ಯವನ್ನು ಕಡಿಮೆಗೊಳಿಸುವುದರ ಜತೆಗೆ ನಾಟಕವನ್ನು ಬದುಕಿನ ಭಾಗವಾಗಿಸಿದರು. ಅದರ ಮುಂದುವರಿಕೆಯಾಗಿ ಅಭಿನಯರಂಗ ಸಂಸ್ಥೆ ಹವ್ಯಾಸಿ ಕಲಾವಿದರರನ್ನು ಒಗ್ಗೂಡಿಸಿ ನಾಟಕ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು ಎಂದರು.

ಅಭಿನಯರಂಗ ಸಂಸ್ಥೆ ನಾಟಕದ ಜತೆಗೆ ಸಾಹಿತ್ಯ, ಸಂಗೀತ, ಸಂವಾದಗಳ ಮೂಲಕ ವಿವಿಧ ಅಭಿರುಚಿಯ ಜನರನ್ನು ತಲುಪುವ ಕಾರ್ಯವನ್ನು ಮಾಡಿತು. ಅನೇಕ ಕಲಾವಿದರು ನಾಡಿನ ಬೇರೆ ಬೇರೆ ಭಾಗಗಳಲ್ಲಿ ಛಾಪನ್ನು ಮೂಡಿಸಿದ್ದಾರೆ. ಇಂದಿನ ಪೀಳಿಗೆ ಅಭಿನಯ ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕೆಂದರು.ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯ ತವರೂರು. ರಂಗ ಚಟುವಟಿಕೆಗಳು ನಿರಂತರವಾಗಿ ಜರುಗುವ ಹಿನ್ನೆಲೆ ಇಲ್ಲಿಯ ಎಲ್ಲ ಕಲಾ ಸಂಘಟನೆಗಳು ಒಗ್ಗೂಡಿ ಕಾರ್ಯ ಮಾಡಬೇಕು. ಮಕ್ಕಳಿಗೆ ರಂಗ ಕಲೆಯನ್ನು ಕಲಿಸಿಕೊಡಬೇಕೆಂದು ತಿಳಿಸಿದರು.ಸಂಸ್ಕೃತಿ ಚಿಂತಕ ಡಾ. ಜಿ.ಬಿ. ಪಾಟೀಲ ಮಾತನಾಡಿದರು. ಈ ವೇಳೆ ಅಭಿನಯ ರಂಗದ ಕಲಾವಿದರಾದ ಅರವಿಂದ ಹುಯಿಲಗೋಳಕರ, ರುದ್ರಣ್ಣ ಗುಳಗುಳಿ, ಎಸ್.ಬಿ. ಗೌಡರ, ಆರ್.ಆರ್. ಜೋಶಿ, ಲಿಂಗರಾಜ ಬಗಲಿ, ಬಿ.ಬಿ. ತೋಟಗೇರ, ಕೆ.ಆರ್. ಗುಡಿಹಾಳ, ಸುಶೀಲೇಂದ್ರ ಜೋಶಿ, ಡಾ. ಜಿ.ಬಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಕೆ.ಎಚ್. ಬೇಲೂರ, ಸುರೇಶ ಕುಂಬಾರ, ಸಿ.ಎಂ. ಮಾರನಬಸರಿ, ಅಶೋಕ ಸತರಡ್ಡಿ, ಡಾ. ಬಿ.ಬಿ. ಹೊಳಗುಂದಿ, ಸತೀಶಕುಮಾರ ಚನ್ನಪ್ಪಗೌಡರ, ಶೈಲಜಾ ಗಿಡ್ನಂದಿ, ರಾಜಶೇಖರ ಕರಡಿ, ಸಿದ್ಧಲಿಂಗೇಶ ಸಜ್ಜನಶೆಟ್ಟರ, ಷಡಕ್ಷರಿ ಮೆಣಸಿನಕಾಯಿ, ಜಿ.ಐ. ಮುಜಾವರ, ರಕ್ಷಿತಾ ಗಿಡ್ನಂದಿ, ಅನಸೂಯಾ ಮಿಟ್ಟಿ, ಅಜಿತ ಘೋರ್ಪಡೆ, ರತ್ನಾ ಪುರಂತರ, ಪಿ.ವಿ. ಇನಾಮದಾರ, ಗಿರೀಶ ಪಂತರ, ವಿಶ್ವನಾಥ ಬೇಂದ್ರೆ, ಬೂದಪ್ಪ ಅಂಗಡಿ, ಬಿ.ವೈ. ಡೊಳ್ಳಿನ, ವೆಂಕಟೇಶ ಗುಡಿ, ಸತೀಶ ಕುಲಕರ್ಣಿ, ರವೀಂದ್ರ ಜೋಶಿ, ಪ್ರಶಾಂತ ಕನಾಜ, ಶಶಿಕಾಂತ ಕೊರ್ಲಹಳ್ಳಿ, ಎಸ್.ಸಿ. ಹಾಳಕೇರಿ, ಎಸ್.ಎ. ದೇಶಪಾಂಡೆ, ಎಸ್.ಎಸ್. ಸರ್ವಿ, ರಾಜೇಶ್ವರಿ ಗುಳಗುಳಿ, ಅಶೋಕ ಸುತಾರ, ಮಲ್ಲೇಶಗೌಡ್ರ ತಿಮ್ಮನಗೌಡ್ರ ಮೊದಲಾದವರು ಇದ್ದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ರಾಹುಲ ಗಿಡ್ನಂದಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವದಂತಿ ನಂಬಬೇಡಿ, ಆರೋಗ್ಯವಾಗಿದ್ದೇನೆ- ಶಾಸಕ ಶಿವಣ್ಣನವರ
ಭಗವಾನ್ ಮಹಾವೀರರು ತತ್ವಗಳು ಜೀವನ ಉನ್ನತೀಗೇರಿಸುವ ಮಾರ್ಗಗಳು