ನವಲಗುಂದ: ಪಟ್ಟಣದ ವಿನಾಯಕಪೇಟನಲ್ಲಿನ ಕೆಂಪು ಕಲ್ಲಿನ ಗಣಪ ಎಂದರೆ ಭಕ್ತರಿಗೆ ಭಕ್ತಿ ಭಾವ ಉಕ್ಕುತ್ತದೆ. ಸೆ. 7ರಂದು ಪ್ರತಿಷ್ಠಾಪನೆಗೊಂಡಿರುವ ಹಾಗೂ ಸೆ. 15ರಂದು ಸಂಜೆ ಅದ್ಧೂರಿ ರಥೋತ್ಸವದೊಂದಿಗೆ ವಿಸರ್ಜನೆ ನೆರವೇರಲಿದೆ.
ಇತಿಹಾಸ:
ಪುಣೆಯ ಪೇಶ್ವೆ ಅವರ ಆಡಳಿತಾವಧಿಯಲ್ಲಿ ನವಲಗುಂದದ ಶಿರಸಂಗಿ ದೇಸಾಯಿ ಸಂಸ್ಥಾನ ಜಾಯಗೊಂಡ ದೊರೆಯ ಉಸ್ತುವಾರಿಯಲ್ಲಿತ್ತು. ಆ ಕಾಲದಲ್ಲಿ ಪೇಶ್ವೆ ಮಹಾರಾಜರು ನವಲಗುಂದಕ್ಕೆ ಭೇಟಿ ನೀಡಿದ್ದರು. 2 ದಿನ ಇಲ್ಲಿಯೇ ತಂಗಿದ್ದ ಅವರು ಗಣೇಶನ ಆರಾಧಕರಾಗಿದ್ದರು. ಮರುದಿನವೇ ಗಣೇಶ ಚತುರ್ಥಿ ಇದ್ದುದರಿಂದ ಪೇಶ್ವೆ ಮಹಾರಾಜರು ನಾವು ಗಣಪತಿ ಪೂಜಿಸಿಯೇ ತೆರಳುತ್ತೇವೆ ಎಂದರು. ಆದರೆ, ಆಗ ಇಲ್ಲಿ ಗಣೇಶ ದೇವಸ್ಥಾನ ಇರಲಿಲ್ಲ. ತಕ್ಷಣ ಜಾಗೃತಗೊಂಡ ಜಾಯಗೊಂಡ ದೊರೆ ಗಣಪತಿ ಮೂರ್ತಿ ತಯಾರಕರನ್ನು ಹುಡುಕಿ ಒಂದೇ ದಿನದಲ್ಲಿ ಗಣಪತಿ ಮೂರ್ತಿ ತಯಾರಿಸುವಂತೆ ಕೋರುತ್ತಾರೆ. ಅದರಂತೆ ಕಲಾವಿದ ಒಂದೇ ಕೆಂಪು ಕಲ್ಲಿನಲ್ಲಿ ಕಮಲ ಆಸನದ ಗಣೇಶನನ್ನು ನಿರ್ಮಿಸಿ ಪೂಜೆಗೆ ಸಿದ್ಧಗೊಳಿಸುತ್ತಾನೆ. ಸಂತುಷ್ಟಗೊಂಡ ಪೇಶ್ವೆ ಮಹಾರಾಜರಂತೂ ಗಣೇಶ ಚತುರ್ಥಿಯನ್ನು ನವಲಗುಂದದಲ್ಲಿಯೇ ಆಚರಿಸುತ್ತಾರೆ. ಗಣೇಶನಿಗೆ ದೇವಸ್ಥಾನ ನಿರ್ಮಾಣ ಮಾಡುವಂತೆ ಹಾಗೂ ಬಂಗಾರದ ಉತ್ಸವ ಮೂರ್ತಿಯನ್ನು ನಿರ್ಮಿಸುವಂತೆ ಜಾಯಗೊಂಡ ದೊರೆಗಳಿಗೆ ಸೂಚಿಸಿ ಪುಣೆಗೆ ತೆರಳುತ್ತಾರೆ ಎಂಬ ಇತಿಹಾಸವಿದೆ.8 ದಿನ ಮೆರವಣಿಗೆ 9ನೇ ದಿನ ರಥೋತ್ಸವ:
ದರ್ಶನ
ಈಗಾಗಲೇ ಎರಡು ದಿನಗಳಿಂದ ಗಣಪತಿ ವಾಹನ ಉತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.ವಿಜಯಮಾಂತೇಶ ಜಿನಗಾ, ಆರ್.ಎಂ.ಡಿ. ಮೋಟರ್ಸ್ ಡೀಲರ್, ಸತೀಶ ಜಿನಗಾ, ಟಿವಿಎಸ್ ಮೋಟರ್ಸ್ ಡೀಲರ್