ಕನ್ನಡಪ್ರಭ ವಾರ್ತೆ ಮಡಿಕೇರಿ
ಬೊಳ್ಳಚೆಟ್ಟಿರ ಮತ್ತು ಗಾಂಡಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಗಾಂಡಗಂಡ 3-0 ಗೋಲು ಅಂತರದಲ್ಲಿ ಗೆಲುವು ಸಾಧಿಸಿತು.
ಬೊಳ್ಳಿಮಾಡ ಮತ್ತು ಬೆರೇರಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 2-0 ಅಂತರದಲ್ಲಿ ಬೆರೇರಾ ತಂಡ ಗೆಲುವು ಸಾಧಿಸಿತು. ತಂಡದ ಆಟಗಾರರಾದ ಸೂರಜ್ ಹಾಗೂ ಮಿತುನ್ ಬೆಳ್ಯಪ್ಪ ತಲಾ 1 ಗೋಲು ಬಾರಿಸಿದರು.ಗುಡ್ಡಂಡ ಮತ್ತು ಕುಂಡ್ಯೋಳಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಕುಂಡ್ಯೋಳಂಡ ತಂಡ 4-0 ಅಂತರದಲ್ಲಿ ಜಯ ಸಾಧಿಸಿದೆ.
ಮುಕ್ಕಾಟಿರ ಮತ್ತು ಚೆಟ್ಟಿರ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಮುಕ್ಕಾಟಿರ ತಂಡ 4-0 ಗೋಲುಗಳ ಅಂತರದಿಂದ ಜಯಗಳಿಸಿತು.ಬೊಳ್ಳೇರಪಂಡ ಮತ್ತು ಪುಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಪುಲಿಯಂಡ ತಂಡ ಗೆಲುವು ಸಾಧಿಸಿತು.
ಕಾಂಗೀರ ಮತ್ತು ಪಾಲಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಗೀರ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.ಸರ್ಕಂಡ ಮತ್ತು ಉದ್ದಿನಾಡಂಡ ತಂಡಗಳ ನಡುವಿನ ಪಂದ್ಯದಲ್ಲಿ 5-1 ಗೋಲುಗಳ ಅಂತರದಲ್ಲಿ ಉದ್ದಿನಾಡಂಡ ತಂಡ ಜಯ ಸಾಧಿಸಿತು.
ಹಂಚೆಟ್ಟಿರ ಮತ್ತು ಮಾಚಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಚಂಗಡ ತಂಡ 3-1 ಗೋಲು ಅಂತರ ಗೆಲುವು ಸಾಧಿಸಿತು.ಓಡಿಯಂಡ ಮತ್ತು ಮೋರ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಓಡಿಯಂಡ ತಂಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಚೋಕಂಡ ಮತ್ತು ಮೂಕಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಚಂಡ ತಂಡ 2-0 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು.ಚೆಯ್ಯಂಡಿರ ಮತ್ತು ತಾಣಚ್ಚಿರ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಚೈಯಂಡ ತಂಡ 3-1 ಅಂತರದಲ್ಲಿ ಗೆಲುವು ಸಾಧಿಸಿತು.