ಕನ್ನಡಪ್ರಭ ವಾರ್ತೆ ವಿಜಯಪುರ
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಗಾಂಧೀಜಿ, ಶಾಸ್ತ್ರೀಜಿ ದೇಶಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಅಂತಹ ಮಹಾತ್ಮರ ನೆನಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಡತನದಲ್ಲಿಯೇ ಹುಟ್ಟಿ ಬಡತನಲ್ಲಿಯೇ ಬೆಳೆದು ಕೊನೆಗೆ ಬಡತನದಲ್ಲಿಯೇ ನಿಧನರಾದ ಭಾರತದ ಏಕೈಕ ಅಂದರೆ ಅದು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಎಂದು ಸ್ಮರಿಸಿದರು.
ಬಳಿಕ ನಗರದ ಮಹಾತ್ಮಾ ಗಾಂಧೀಜಿ, ಲಾಲ್‌ಬಹಾದ್ದೂರ್ ಶಾಸ್ತ್ರೀ ವೃತ್ತಕ್ಕೆ ತೆರಳಿ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡ ವಿಜುಗೌಡ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ ಜಾಧವ್, ಮಲ್ಲಿಕಾರ್ಜುನ ಗಡಗಿ, ಸಂಜಯ ಪಾಟೀಲ ಕನಮಡಿ, ಗುರುಲಿಂಗಪ್ಪ ಅಂಗಡಿ, ಕೃಷ್ಣಾ ಗುನ್ಹಾಳಕರ, ವಿಜಯ ಜೋಶಿ, ಜಗದೀಶ ಮುಚ್ಚಂಡಿ, ಆನಂದ ಮುಚ್ಚಂಡಿ, ಪಾಪುಸಿಂಗ್ ರಜಪೂತ, ಲಕ್ಷ್ಮೀ ಕನ್ನೊಳ್ಳಿ, ಮಲ್ಲಮ್ಮ ಜೋಗೂರ ಸೇರಿದಂತೆ ಇತರರು ಉಪಸ್ಥಿತಿತರಿದ್ದರು.