ಸತ್ಯ ಬಯಸಿದ ಆಧ್ಯಾತ್ಮಿಕ ಸಾಧಕ ಗಾಂಧೀಜಿ: ಕುಲಕರ್ಣಿ

KannadaprabhaNewsNetwork |  
Published : Oct 13, 2026, 02:45 AM IST
‘ಗಾಂಧಿ ಪಜ್ಜೆದ ಸಾದಿ ಪತೊಂದು’ ತುಳು ಭಾಷಾಂತರ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು  | Kannada Prabha

ಸಾರಾಂಶ

ಮಹಾತ್ಮಾ ಗಾಂಧೀಜಿ ಮೂಲತಃ ಸತ್ಯವನ್ನು ಅನುಸರಿಸಲು ಬಯಸಿದ ಆಧ್ಯಾತ್ಮಿಕ ಸಾಧಕ ಎಂದು ಮಹಾತ್ಮಾ ಗಾಂಧೀಜಿ ಮರಿಮಗ ಶ್ರೀಕೃಷ್ಣ ಗಜಾನನ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಹಾತ್ಮಾ ಗಾಂಧೀಜಿ ಮೂಲತಃ ಸತ್ಯವನ್ನು ಅನುಸರಿಸಲು ಬಯಸಿದ ಆಧ್ಯಾತ್ಮಿಕ ಸಾಧಕ ಎಂದು ಮಹಾತ್ಮಾ ಗಾಂಧೀಜಿ ಮರಿಮಗ ಶ್ರೀಕೃಷ್ಣ ಗಜಾನನ ಕುಲಕರ್ಣಿ ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ತುಳು ಅಧ್ಯಯನ ಪೀಠ ಮಂಗಳೂರು, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಪುತ್ತೂರು, ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ನಡೆದ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಕುಂಬ್ರ ಜತ್ತಪ್ಪರೈಯವರ ಜೀವನದ ಬಗೆಗಿನ ಕೃತಿ ‘ಗಾಂಧಿ ಪಜ್ಜೆದ ಸಾದಿ ಪತ್ತೊಂದು’ ತುಳು ಭಾಷಾಂತರ ಪುಸ್ತಕದ ಲೋಕಾರ್ಪಣೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಗಾಂಧಿ ಮತ್ತು ವಿಶ್ವಶಾಂತಿ’ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.

ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಉದ್ಘಾಟಿಸಿ ದಿಕ್ಚೂಚಿ ಭಾಷಣ ಮಾಡಿ, ಸೇವೆ ಮತ್ತು ತ್ಯಾಗ, ಸತ್ಯ ಮತ್ತು ಅಹಿಂಸೆಯ ತತ್ವಗಳ ಮೇಲೆ ಭಾರತವನ್ನು ಸ್ವಾತಂತ್ರ ಹೋರಾಟಗಾರರು ಕಟ್ಟಿದರು. ಅವರ ಕನಸನ್ನು ನನಸು ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಪುಸ್ತಕ ಲೋಕಾರ್ಪಣೆಗೊಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು.

ಕುಪ್ಪಂ ದ್ರಾವಿಡಿಯನ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಲ್.ಸಿ.ಮಲ್ಲಯ್ಯ, ಮಂಗಳೂರು ಐಜಿಪಿ ಆರ್.ಚೇತನ್, ಮಂಗಳೂರು ವಿವಿ ಎನ್ಎನ್ಎಸ್ ಸಂಯೋಜನಾಧಿಕಾರಿ ಡಾ.ಶೇಷಪ್ಪ ಅಮಿನ್ ಕೆ., ಹಿರಿಯ ಗಾಂಧಿ ಚಿಂತಕ ಪ್ರೊ.ಜಿ. ಶಿವರಾಜ್ ಇದ್ದರು.

ಪುತ್ತೂರಿನ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಕಜೆಮಾರು ಸಂಸ್ಥಾಪಕ ಕೆ.ಪ್ರಮೋದ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯವಂತ ನಾಯಕ್ ಸ್ವಾಗತಿಸಿದರು. ಮಂಗಳೂರು ವಿವಿ ಎನ್‌ಎನ್‌ಎಸ್ ಸಂಯೋಜನಾಧಿಕಾರಿ ಡಾ.ಶೇಷಪ್ಪ ಅಮಿನ್ ಕೆ. ವಂದಿಸಿದರು. ಎಸ್‌ಡಿಎಂ ಕಾಲೇಜಿನ ಎನ್‌ಎಸ್ಎಸ್ ಕಾರ್ಯದರ್ಶಿ ವಾರಿಣಿ ನಾಗರಾಜ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್‌ ಅವ್ಯವಸ್ಥೆ: ಸಿಬ್ಬಂದಿಗೆ ತರಾಟೆ
ಏತ ನೀರಾವರಿ ಯೋಜನೆಗಳಿಗೆ ಸಿಎಂ ಚಾಲನೆ