ಅತ್ಯುನ್ನತ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಿದ ಗಾಂಧೀಜಿ: ಸೋಮಶೇಖರ್

KannadaprabhaNewsNetwork |  
Published : Oct 03, 2024, 01:21 AM IST
2ಕೆಎಂಎನ್ ಡಿ29 | Kannada Prabha

ಸಾರಾಂಶ

ಸತ್ಯಮತ್ತು ಅಹಿಂಸ ಮಾರ್ಗದ ಮೂಲಕ ಭಾರತವನ್ನು ಸ್ವಾತಂತ್ರ್ಯದೆಡೆಗೆ ಮುನ್ನಡೆಸಿದ ಮಹಾತ್ಮ ಗಾಂಧಿಯವರ ಪ್ರತಿಯೊಬ್ಬ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾದಿ ಪೀಳಿಗೆಗೆ ಆದರ್ಶಮಯವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸತ್ಯ, ಅಹಿಂಸೆ ಮತ್ತು ಸರಳತೆ ಮಾರ್ಗದಲ್ಲಿ ಮಹಾತ್ಮಗಾಂಧಿ ಬದುಕಿನ ಸಾಧ್ಯತೆ ತೋರಿಸಿ ತನ್ಮೂಲಕ ಅತ್ಯುನ್ನತ ಆದರ್ಶಗಳ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಿದ್ದಾರೆ ಎಂದು ದ್ವಿತೀಯ ದರ್ಜೆ ತಹಸೀಲ್ದಾರ್ ಸೋಮಶೇಖರ್ ಬುಧವಾರ ಹೇಳಿದರು.

ಶಿವಪುರದ ಸತ್ಯಾಗ್ರಹಸೌಧದಲ್ಲಿ ತಾಲೂಕು ಆಡಳಿತ, ಉಸ್ತುವಾರಿ ಸಮಿತಿ, ಎಚ್.ಕೆ.ವೀರಣ್ಣಗೌಡ ಕಾಲೇಜಿನ ಎನ್ಎಸ್ಎಸ್ ಸಹಯೋಗದಲ್ಲಿ ನಡೆದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸತ್ಯಮತ್ತು ಅಹಿಂಸ ಮಾರ್ಗದ ಮೂಲಕ ಭಾರತವನ್ನು ಸ್ವಾತಂತ್ರ್ಯದೆಡೆಗೆ ಮುನ್ನಡೆಸಿದ ಮಹಾತ್ಮ ಗಾಂಧಿಯವರ ಪ್ರತಿಯೊಬ್ಬ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾದಿ ಪೀಳಿಗೆಗೆ ಆದರ್ಶಮಯವಾಗಿದೆ ಎಂದರು.

ಈ ವೇಳೆ ಸ್ವತಂತ್ರ ಹೋರಾಟಗಾರ ಕೆ.ಟಿ.ಚಂದು, ಎಂ.ಎಚ್.ಚನ್ನೇಗೌಡ ವಿದ್ಯಾನಿಲಯದ ಅಧ್ಯಕ್ಷ ಎಂ.ಸ್ವರೂಪ್ ಚಂದ್, ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ, ಖಚಾಂಚಿ ಜಿ.ಎಸ್.ಶಿವರಾಮ, ನಿರ್ದೇಶಕರಾದ ಮಲ್ಲಿಕಾರ್ಜುನ, ಮುತ್ತುರಾಜ, ಅಂಗ ಸಂಸ್ಥೆಗಳ ಮುಖ್ಯಸ್ಥರು, ಪುರಸಭಾ ಸದಸ್ಯೆ ಸರ್ವ ಮಂಗಳ, ವಕೀಲರ ಸಂಘದ ಅಧ್ಯಕ್ಷ ಶಿವಣ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್.ಸುನಿಲ್ ಕುಮಾರ್ ಮತ್ತು ಶಾಲಾ ಮಕ್ಕಳು ಹಾಜರಿದ್ದರು.

ಆಸರೆ ಸೇವಾ ಟ್ರಸ್ಟ್ ನಲ್ಲಿ ಗಾಂಧಿ ಜಯಂತಿ

ಭಾರತೀನಗರ:ಆಸರೆ ಸೇವಾಟ್ರಸ್ಟ್ ಕಚೇರಿಯಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ರಘುವೆಂಕಟೇಗೌಡ ಮಾತನಾಡಿ, ಗಾಂಧೀಜಿ ತತ್ವಾ ಆದರ್ಶಗಳನ್ನು ಯುವಕರು ಪಾಲಿಸಬೇಕು. ಇದರಿಂದ ದೇಶ ಮತ್ತಷ್ಟು ಅಭಿವೃದ್ದಿಗೊಳ್ಳಲು ಸಾಧ್ಯ. ಗಾಂಧೀಜಿ ವಿಚಾರಧಾರೆ, ತತ್ವಸಿದ್ದಾಂತಗಳು ಅಳವಡಿಸಿಕೊಳ್ಳಬೇಕು. ಸ್ವದೇಶಿ ವಸ್ತುಗಳ ಬಳಕೆ ಬಹಳ ಮುಖ್ಯವಾಗಿದೆ ಎಂದರು.ಈ ವೇಳೆ ಕರಡಕೆರೆ ಯೋಗೇಶ್, ಪುಟ್ಟಣ್ಣ, ಪಾಪಣ್ಣಮ ಕೃಷ್ಣ, ನಂದನ್, ಸುನೀಲ್ ಸೇರಿದಂತೆ ಹಲವರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...