ಗಾಂಧೀಜಿ ಬದುಕೇ ಒಂದು ಸಂದೇಶ: ಶಾಸಕ ಆರಗ

KannadaprabhaNewsNetwork |  
Published : Oct 07, 2026, 04:00 AM IST
ಫೋಟೋ 06 ಟಿಟಿಎಚ್ 01: ತೀರ್ಥಹಳ್ಳಿ ಪಪಂ ವತಿಯಿಂದ ಪಟ್ಟಣದ ಗಾಂಧಿಚೌಕದಲ್ಲಿ ನೂತನವಾಗಿ ಸ್ಥಾಪಿಸಲಾದ ರಾಷ್ಟ್ರ ಲಾಂಛನ ಅಶೋಕ ಸ್ಥಂಭವನ್ನು ಶಾಸಕ ಆರಗ ಜ್ಞಾನೇಂದ್ರ ಉಧ್ಘಾಟಿಸಿ ಮಾತನಾಡಿದರು. ಆರ್.ಎಂ. ಮಂಜುನಾಥಗೌಡ,ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್ ಇದ್ದರು. | Kannada Prabha

ಸಾರಾಂಶ

ಹಾತ್ಮಗಾಂಧಿಯವರ ಬದುಕೇ ಒಂದು ಸಂದೇಶವಾಗಿದ್ದು ಸಮಾಜದಲ್ಲಿ ವಿಕೃತ ಮನಸ್ಸುಗಳು ವೈಭವೀಕರಿಸುತ್ತಿರುವ ಈ ದಿನಗಳಲ್ಲಿ ಮಹಾತ್ಮಗಾಂಧಿಯವರ ವಿಚಾರಧಾರೆಗಳ ಅನುಕರಣೆ ಮತ್ತು ಪಾಲನೆ ಅತ್ಯಂತ ಅಗತ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಮಹಾತ್ಮಗಾಂಧಿಯವರ ಬದುಕೇ ಒಂದು ಸಂದೇಶವಾಗಿದ್ದು ಸಮಾಜದಲ್ಲಿ ವಿಕೃತ ಮನಸ್ಸುಗಳು ವೈಭವೀಕರಿಸುತ್ತಿರುವ ಈ ದಿನಗಳಲ್ಲಿ ಮಹಾತ್ಮಗಾಂಧಿಯವರ ವಿಚಾರಧಾರೆಗಳ ಅನುಕರಣೆ ಮತ್ತು ಪಾಲನೆ ಅತ್ಯಂತ ಅಗತ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಸ್ಥಳೀಯ ಪ.ಪಂ. ವತಿಯಿಂದ ಪಟ್ಟಣದ ಗಾಂಧಿಚೌಕದಲ್ಲಿ ನೂತನವಾಗಿ ನಿರ್ಮಿಸಲಾದ ರಾಷ್ಟ್ರ ಲಾಂಛನ ಅಶೋಕ ಸ್ಥಂಭವನ್ನು ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ, ಭಯೋತ್ಪಾದಕ ಕೃತ್ಯಗಳೂ ಸೇರಿದಂತೆ ವಿಶ್ವದಾದ್ಯಂತ ನಡೆಯುತ್ತಿರುವ ಘಟನಾವಳಿಗಳು ಭಯಬೀಳಿಸುವಂತಾಗಿದೆ. ಹೀಗಾಗಿ ಗಾಂಧಿಯವರಂತೆ ಸರಳತೆಯಿಂದ ಬದುಕಿ ಜನರನ್ನು ಪ್ರೀತಿಸುವ ಮನೋಭಾವ ಅಗತ್ಯ. ಇಂದಿಗೂ ಅವರ ವಿಚಾರಧಾರೆಗಳು ಸ್ವಾಸ್ಥ ಸಮಾಜಕ್ಕೆ ಮಾರ್ಗಸೂಚಿಯಾಗಿದೆ ಎಂದೂ ಹೇಳಿದರು.

ರಾಷ್ಟ್ರೀಯತೆಯನ್ನು ನೆನಪಿಸುವ ಉದ್ದೇಶದಿಂದ ಹಿರಿಯರು ಸ್ಥಾಪಿಸಿದ್ದ ಈ ಲಾಂಛನ ಊರಿಗೆ ಲ್ಯಾಂಡ್ ಮಾರ್ಕ್‍ನಂತಿದೆ. ಮತ್ತು ಪಟ್ಟಣದ ಕೇಂದ್ರ ಸ್ಥಾನಕ್ಕೆ ಶೋಭೆ ತರುವಂತಿದೆ. ಇದರ ಘನತೆಗೆ ಚ್ಯುತಿಯಾಗದಂತೆ ಶ್ರದ್ಧೆಯಿಂದ ನಿರ್ವಹಿಸುವ ಹೊಣೆಗಾರಿಕೆ ಮುಖ್ಯವಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಪ.ಪಂ. ಅಧ್ಯಕ್ಷ ರತ್ನಾಕರ ಶೆಟ್ಟಿಯವರ ನೇತೃತ್ವದಲ್ಲಿ ನಡೆದಿರುವ ಈ ಕಾರ್ಯ ಪ್ರಶಂಸನೀಯವಾಗಿದೆ ಎಂದರು.

ಗಾಂಧಿ ಭೇಟಿಗೆ 100 ವರ್ಷ!

ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಗಾಂಧಿ ಪಟ್ಟಣಕ್ಕೆ ಭೇಟಿ ನೀಡಿ 100 ವರ್ಷ ತುಂಬುತ್ತಿರುವ ಸಂಧರ್ಭದಲ್ಲಿ ಕೃಷ್ಣ ಶಿಲೆಯಲ್ಲಿ ನಿರ್ಮಿಸಲಾಗಿರುವ ಈ ರಾಷ್ಟ್ರಲಾಂಛನ ಸ್ಥಾಪನೆ ಮಾಡಿರುವುದು ಇತಿಹಾಸ ಮರುಕಳಿಸಿದಂತಾಗಿದೆ. ಈ ಜಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳೂ ನಡೆಯುವಂತಾಗಲಿ ಎಂದರು.

ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗೀತಾ ರಮೇಶ್,ಸದಸ್ಯರಾದ ರಹಮತ್ ಉಲ್ಲಾ ಅಸಾದಿ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಸಂದೇಶ್ ಜವಳಿ, ಸುಶೀಲಾ ಶೆಟ್ಟಿ, ಬಿ.ಗಣಪತಿ, ರಾಘವೇಂದ್ರ ಶೆಟ್ಟಿ ಮಾತನಾಡಿದರು. ಮುಖ್ಯಾಧಿಕಾರಿ ಡಿ.ರಾಜು ಮುಂತಾದವರು ಇದ್ದರು.

--------------------------

ಫೋಟೋ 06 ಟಿಟಿಎಚ್ 01: ತೀರ್ಥಹಳ್ಳಿ ಪಪಂ ವತಿಯಿಂದ ಪಟ್ಟಣದ ಗಾಂಧಿಚೌಕದಲ್ಲಿ ನೂತನವಾಗಿ ಸ್ಥಾಪಿಸಲಾದ ರಾಷ್ಟ್ರ ಲಾಂಛನ ಅಶೋಕ ಸ್ಥಂಭವನ್ನು ಶಾಸಕ ಆರಗ ಜ್ಞಾನೇಂದ್ರ ಉಧ್ಘಾಟಿಸಿ ಮಾತನಾಡಿದರು. ಆರ್.ಎಂ. ಮಂಜುನಾಥಗೌಡ,ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಸೂರು ಮಾದರಿಯಲ್ಲೆ ಶಿವಮೊಗ್ಗ ದಸರಾ ವೈಭವ
ಕಟ್ಟಡ ಕಾರ್ಮಿಕರೇ ದೇಶ ಕಟ್ಟುವ ನಿಜವಾದ ಶಿಲ್ಪಿಗಳು: ಸಂಸದ ಬಿ.ವೈ. ರಾಘವೇಂದ್ರ