ಕನ್ನಡ ಪ್ರಭ ವಾರ್ತೆ ಕಮಲಾಪುರತಾಲೂಕಿನ ರೈತರಿಗೆ ಗಂಡೋರಿನಾಲ ಜಲವೇ ಜೀವಾಳ. ಆದರೀಗ ಕಬ್ಬು ಬೆಳೆಯುವ ರೈತರು ಕಾಲುವೆಗಳಿಗೆ ನೀರು ಹರಿಸಬೇಡಿ, ಕಟಾವಿಗೆ ತೊಂದರೆಯಾಗುತ್ತದೆ, ಆದ್ದರಿಂದ ಕೆಲವು ದಿನ ನೀರು ಬಂದು ಮಾಡಿ ಎಂದು ಬೇಡಿಕೆ ಇಟ್ಟಿದ್ದರೆ, ಹಿಂಗಾರು ಬೆಳೆ ಬೆಳೆಯುವ ರೈತರು ತೊಗರಿ ಬೇಳೆ, ಜೋಳಕ್ಕೆ ನೀರು ಅವಶ್ಯಕತೆ ಇದ್ದು ಕಾಲುವೆಗಳಿಗೆ ಹರಿಸಬೇಕೆಂದು ಆಗ್ರಹಿಸಿರುವುದರಿಂದ ಇಬ್ಬರ ನಡುವೆ ತಿಕ್ಕಾಟ ಶುರುವಾಗಿದೆ. ಬೆಳಕೋಟಾ ಗ್ರಾಮದಲ್ಲಿ ಸುಮಾರು ₹240 ಕೋಟಿ ವೆಚ್ಚದಲ್ಲಿ ಜಲಾಶಯ ನಿರ್ಮಿಸಲಾಗಿದೆ. 19524 ಎಕರೆ ವಿಸ್ತೀರ್ಣದ ಜತೆಗೆ 7943 ಡಾಕ್ಟರ್ ಪ್ರದೇಶಕ್ಕೆ ನೀರು ಪೂರೈಸುವ ಗುರಿಯಾಗಿದೆ. ಜಲಾಶಯದ ಎಡದಂಡೆ ಕಾಲುವೆ 89.32 ಕಿಮೀ ಹಾಗೂ ಬಲದಂಡೆ ಕಾಲುವೆ 78ಕಿಮೀ ವಿಸ್ತೀರ್ಣವಾಗಿದೆ. ಸುಮಾರು 99 ಕಿಮೀ ನೀರು ತಲುಪುತ್ತವೆ. ಜಲಾಶಯದ ಒಟ್ಟು ನೀರಿನ ಸಂಗ್ರಹ ಮಟ್ಟ 1.887 ಟಿಎಂಸಿ ಆಗಿದ್ದು, ಜಲಾಶಯವು ದಸ್ತಾಪುರ, ಮಹಾಗಾಂವ ಕಮಲಾಪುರ, ಕುರಿಕೋಟಾ, ನಾಗೂರು, ಹರಕಂಚಿ, ಅಂಕಲಗಿ, ಸೇರಿ ಹಲವು ರೈತರಿಗೆ ನೀರು ಹರಿಸಲಾಗುತ್ತದೆ.
2024 ನವೆಂಬರ ತಿಂಗಳು ಜಲಾಶಯದಲ್ಲಿದ್ದ 1.78 ಟಿಎಂಸಿ ನೀರು ಸಂಗ್ರಹವಿತ್ತು. ಪ್ರಸ್ತುತ ಎಡದಂಡೆ ಕಾಲುವೆಗೆ 90 ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಬಲದಂಡೆ ಕಾಲುವೆಗೆ 5 ಕ್ಯುಸೆಕ್ ನೀರು ಹರಿ ಬಿಡಲಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಈ ಕೆಳಕಂಡ ಗ್ರಾಮದ ರೈತರು ಎಡದಂಡೆ ಕಾಲುವೆಗೆ ಹಾಗೂ ಬಲದಂಡೆ ಕಾಲುವೆಗೆ ಅವಲಂಬನೆಯಾಗಿ ನಿರಂತರವಾಗಿ ಕಬ್ಬು ಬೆಳೆಯುತ್ತಿದ್ದಾರೆ. ಈಗ ಕಬ್ಬು ಕಟಾವು ಹಂತಕ್ಕೆ ಬಂದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.ಆದರೆ ಕಟಾವು ಹಂತದಲ್ಲಿ ಜಲಾಶಯ ನೀರು ಹರಿಸದಂತೆ ಬಂದು ಮಾಡಬೇಕೆಂದು ರೈತರ ಆಗ್ರಹಿಸಿದ್ದಾರೆ.ಏಕೆಂದರೆ ಕಾಲುವೆಗೆ ನೀರು ಹರಿದು ಬರುವುದರಿಂದ ಕಬ್ಬಿನ ಗದ್ದೆಗೆ ನೀರು ಬಂದು ಗದ್ದೆ ತೇವ ಹಿಡಿಯುತ್ತದೆ ಹಾಗೂ ಬೆಳೆದು ನಿಂತಿರುವ ಕಬ್ಬು ಅಡ್ಡ ಬಿದ್ದು ತೂಕ ಕಡಿಮೆಯಾಗಿ ಗದ್ದೆಯಲ್ಲಿ ಲಾರಿಗಳು ಬರಲು ಆಗುವುದಿಲ್ಲ. ಬಂದರೆ ಲಾರಿ ಗದ್ದೆಯಲ್ಲಿ ಸಿಲುಕಿಕೊಂಡು ರೈತರು ನಷ್ಟ ಅನುಭವಿಸುತ್ತಾರೆ. ಕೂಡಲೇ 2 ತಿಂಗಳು ಜಲಾಶಯ ಗೇಟ್ ಬಂದ್ ಮಾಡಿ ರೈತರ ಕಬ್ಬು ಕಾರ್ಖಾನೆ ಕಳಿಸಲು ಅನುಕೂಲ ಮಾಡಿಕೊಡಬೇಕೆಂದು ಅಳಲು ತೋಡಿಕೊಂಡಿದ್ದರು. ಇನ್ನು ಕೆಲ ಹಿಂಗಾರು ಬೆಳೆ ಬೆಳೆಯುವ ರೈತರು ತೊಗರಿ ಬೆಳೆಗೆ ಹಾಗೂ ಜೋಳ ಬೆಳೆಯುವ ರೈತರಿಗೆ ನೀರಿನ ಅವಶ್ಯಕತೆ ಹೆಚ್ಚಾಗಿದ್ದು ಕಾಲುವೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದ್ದಾರೆ.------
ಕೋಟ್ಸುಮಾರು 18 ರಿಂದ 20 ಹಳ್ಳಿಯ ರೈತರಿಗೆ ಗಂಡೋರಿ ಜಲಾಶಯ ಎಡದಂಡೆ ಕಾಲುವೆ ಹಾಗೂ ಬಲದಂಡೆ ಕಾಲುವೆ ನೀರು ಹರಿಸುತ್ತಿರುವುದರಿಂದ ಕಬ್ಬು ಕಾರ್ಖಾನೆಗೆ ಕಳಿಸಲು ಆಗುತ್ತಿಲ್ಲ. ತಾಲೂಕಿನಲ್ಲಿ ದಸ್ತಾಪುರ ಗ್ರಾಮದಿಂದಲೇ ಪ್ರತಿ ವರ್ಷ 5 ಸಾವಿರ ಟನ್ ಕಬ್ಬು ಕಟಾವು ಮಾಡುತ್ತೇವೆ. ಕೂಡಲೇ ಜಲಾಶಯ ಗೆಟ್ ಬಂದ ಮಾಡಿ ರೈತರಿಗೆ ಕಾರ್ಖಾನೆಗೆ ಕಬ್ಬು ಕಳಿಸಲು ಅನು ಮಾಡಿಕೊಡಬೇಕೆಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ವೈಜುನಾಥ ದಸ್ತಾಪುರ ರೈತ ಮುಖಂಡ--------ಫೋಟೋ- ಗಂಡೋರಿ ಜಲಾಶಯ