ಗಣೇಶ, ಈದ್ ಮಿಲಾದ್ ಶಾಂತಿಯಿಂದ ಆಚರಿಸಿ

KannadaprabhaNewsNetwork |  
Published : Aug 25, 2024, 01:49 AM ISTUpdated : Aug 25, 2024, 01:50 AM IST
ಪೊಟೋ-ಪಟ್ಟಣದ ತಾಪಂ ಸಭಾಭವನದಲ್ಲಿನ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಎಸ್ಪಿ ಬಿ.ಎಸ್.ನೇಮಗೌಡ ಮಾತನಾಡಿದರು.  | Kannada Prabha

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದಲ್ಲಿ ಗಣೇಶ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸುವಂತಾಗಬೇಕು ಎಂಬುದು ನಮ್ಮ ಇಲಾಖೆಯ ಆಶಯ

ಲಕ್ಷ್ಮೇಶ್ವರ: ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಿಸಲು ಪೊಲೀಸ್ ಇಲಾಖೆಯಿಂದ ಯಾವುದೇ ತೊಂದರೆ ಇಲ್ಲ. ಆದರೆ ಶಾಂತಿ ಭಂಗಕ್ಕೆ ಕೈ ಹಾಕಿದಲ್ಲಿ ಪೊಲೀಸ್ ಇಲಾಖೆ ಎಲ್ಲ ರೀತಿಯ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.

ಶನಿವಾರ ಪಟ್ಟಣದ ತಾಪಂ ಸಭಾ ಭವನದಲ್ಲಿ ಹಮ್ಮಿಕೊಂಡ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಗಣೇಶ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸುವಂತಾಗಬೇಕು ಎಂಬುದು ನಮ್ಮ ಇಲಾಖೆಯ ಆಶಯವಾಗಿದೆ. ಆದರೆ ಅಬ್ಬರದ ಡಿಜೆ ಸೌಂಡಿನಲ್ಲಿ ಗಣೇಶ ಹಬ್ಬದ ವೈಭವ ಕಳೆಗುಂದುತ್ತಿದೆ. ಗಣೇಶ ಹಬ್ಬವನ್ನು ಶಾಂತಿ ಸುವ್ಯವಸ್ಥಿತವಾಗಿ ಆಚರಿಸುವಂತಾಗಬೇಕು.ಗಣೇಶ ವಿಸರ್ಜನೆ ವೇಳೆ ರಾತ್ರಿ ನಡೆಯುವ ಮೆರವಣಿಗೆಯು ಶಾಂತಿ ಸುವ್ಯವಸ್ಥೆ ಕದಡುವುದಕ್ಕೆ ಕಾರಣವಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಗಣೇಶ ಹಬ್ಬದಲ್ಲಿ ಇನ್ನೊಬ್ಬರಿಗೆ ತೊಂದರೆಯಾಗುವ ರೀತಿಯಲ್ಲಿ ಡಿಜೆ ಸೌಂಡ್ ಹಾಕಿ ಕುಣಿಯುವುದು ನಮ್ಮ ಸಂಸ್ಕೃತಿಯ ಹಾಳು ಮಾಡುವ ಕಾರ್ಯವಾಗಿದೆ. ಆದ್ದರಿಂದ ಗಣೇಶ ಪ್ರತಿಷ್ಠಾಪನೆ ಮಾಡುವ ಎಲ್ಲ ಸಂಘ ಸಂಸ್ಥೆಗಳು ಒಂದು ನಿರ್ಧಾರ ಮಾಡುವ ಮೂಲಕ ಗಣೇಶೋತ್ಸವದ ಕಳೆ ಹೆಚ್ಚಿಸುವ ಕಾರ್ಯ ಮಾಡಬೇಕು.ಅದೆ ರೀತಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದಲ್ಲಿ ಶಾಂತಿ ಕಾಪಾಡುವ ಕಾರ್ಯ ಮಾಡಬೇಕು. ಕಾನೂನು ಸುವಸ್ಥೆ ಹಾಳು ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಡಿವೈಎಸ್ಪಿ ಜೆ.ಎಚ್. ಇನಾಂದಾರ, ತಹಸೀಲ್ದಾರ್ ವಾಸುದೇವ ಸ್ವಾಮಿ, ತಾಪಂ ಇಓ ಕೃಷ್ಣಪ್ಪ ಧರ್ಮರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ನಿವೃತ್ತ ಶಿಕ್ಷಕ ಪಿ.ಬಿ. ಕರಾಟೆ, ಪುರಸಭೆ ಉಪಾಧ್ಯಕ್ಷ ಫಿರ್ದೋಶ್ ಅಡೂರು, ಸೋಮಣ್ಣ ಉಪನಾಳ, ಅಂಜುಮನ್ಎಂ ಕಮೀಟಿ ಅಧ್ಯಕ್ಷ ಎಂ. ಗದಗ, ಪುರಸಭೆ ಸದಸ್ಯ ಮುಸ್ತಾಕ್ ಅಹ್ಮದ್ ಶಿರಹಟ್ಟಿ, ಶರಣು ಗೋಡಿ, ಎಸ್.ಕೆ. ಹವಾಲ್ದಾರ, ದಾದಾಪೀರ್ ಮುಚ್ಚಾಲೆ, ಗಂಗಾಧರ ಮೆಣಸಿನಕಾಯಿ, ಸಾಹೀಬ್ಜಾನ್ ಹವಾಲ್ದಾರ್ ಮಾತನಾಡಿದರು.

ಶಾಂತಿ ಸಭೆಯಲ್ಲಿ ಎಸ್.ಕೆ. ಕಣಕೆ, ಮಂಜುನಾಥ ಹೊಗೆಸೊಪ್ಪಿನ, ಶಿವಯೋಗಿ ಅಂಕಲಕೋಟಿ, ಝಾಕೀರ್ ಹುಸೇನ್ ಹವಾಲ್ದಾರ್, ಮಹೇಶ ಕಲಘಟಗಿ, ರಮೇಶ್ ಲಮಾಣಿ, ನಾಗರಾಜ ಅಮರಾಪೂರ, ಬಸವರಾಜ ಕಲ್ಲೂರ, ಬಸವರಾಜ ಹಿರೇಮನಿ, ಅನಿಲ ಮುಳಗುಂದ, ನೂರ್ ಅಹಮದ್ ಸೂರಣಗಿ, ಸದಾನಂದ ನಂದೆಣ್ಣವರ, ದಾದಾಪೀರ್ ತಂಬಾಕದ, ಪಿಎಸ್ಐ ಈರಪ್ಪ ರಿತ್ತಿ, ಹೆಸ್ಕಾಂ ಎಇಇ ಗುರುರಾಜ ಇದ್ದರು.

ಈ ವೇಳೆ ಸಿಪಿಐ ನಾಗರಾಜ ಮಾಡಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ಮೆಡ್ಲೇರಿ ನಿರ್ವಹಿಸಿದರು. ಪ್ರಕಾಶ ಮ್ಯಾಗೇರಿ ಸ್ವಾಗತಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌