ನಿಂತು ಹೋದ ಎಟಿಎಂನಲ್ಲಿ ಗಣೇಶ..!

KannadaprabhaNewsNetwork |  
Published : Sep 14, 2026, 02:45 AM IST
ಹೂವಿನಹಡಗಲಿಯ ಗಣೇಶೋತ್ಸವ ಹಬ್ಬದ ಅಂಗವಾಗಿ ಗಣೇಶ ಮೂರ್ತಿಗಳನ್ನು ಎಟಿಎಂನಲ್ಲಿ ಮಾರಾಟ ಮಾಡುತ್ತಿರುವುದು, ಬಾಳೆ ಕಂಬ ಹಾಗೂ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿರುವುದು.  | Kannada Prabha

ಸಾರಾಂಶ

ಬಹುತೇಕ ಮನೆಯಲ್ಲಿ ಪ್ರತಿಷ್ಠಾನೆ ಮಾಡುವ ಗಣೇಶ ಮೂರ್ತಿಗಳು ಮಣ್ಣಿನಿಂದ ಮಾಡಲ್ಪಟ್ಟಿವೆ. ಜತೆಗೆ ಪರಿಸರ ಸ್ನೇಹಿ ಗಣೇಶನಿಗೆ ಬಣ್ಣ ಇಲ್ಲದ ಮೂರ್ತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ

ಹೂವಿನಹಡಗಲಿ: ಪಟ್ಟಣದಲ್ಲಿ ಮಣ್ಣಿನ ಗಣೇಶನನ್ನು ಮಾರಲು ಜಾಗ ಇಲ್ಲದ ಕಾರಣ,ನಿಂತು ಹೋದ ಎಟಿಎಂ ಮಳಿಗೆಯಲ್ಲೇ ಗಣೇಶ ಮೂರ್ತಿ ಮಾರಾಟಕ್ಕೆ ಇಟ್ಟಿದ್ದು ವಿಶೇಷವಾಗಿತ್ತು.

ಪಟ್ಟಣದ ಸಾಕಷ್ಟು ಕಡೆಗಳಲ್ಲಿ ಮಣ್ಣಿನಿಂದ ಮಾಡಿರುವ ಹಾಗೂ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾಡಿದ್ದಾರೆ. ಅವರಿಗೆ ಮಾರಾಟ ಮಾಡಲು ಜಾಗ ಇಲ್ಲದ ಕಾರಣ ಪಟ್ಟಣದಲ್ಲಿ ನಿಂತು ಹೋಗಿರುವ ಖಾಸಗಿ ಬ್ಯಾಂಕಿನ ಎಟಿಎಂನಲ್ಲೇ ಗಣೇಶ ಮೂರ್ತಿ ಇಟ್ಟಿರುವುದು ವಿಶೇಷವಾಗಿತ್ತು.

ಬಹುತೇಕ ಮನೆಯಲ್ಲಿ ಪ್ರತಿಷ್ಠಾನೆ ಮಾಡುವ ಗಣೇಶ ಮೂರ್ತಿಗಳು ಮಣ್ಣಿನಿಂದ ಮಾಡಲ್ಪಟ್ಟಿವೆ. ಜತೆಗೆ ಪರಿಸರ ಸ್ನೇಹಿ ಗಣೇಶನಿಗೆ ಬಣ್ಣ ಇಲ್ಲದ ಮೂರ್ತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.

ಪಟ್ಟಣದ ಸೇರಿದಂತೆ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಮಣ್ಣಿನ ಗಣೇಶನಿಗೆ ಹೆಚ್ಚು ಬೇಡಿಕೆ ಇದೆ. ಆದರಿಂದ ಗಣೇಶ ಮೂರ್ತಿ ತಯಾರಿಸುವವರು ಮಣ್ಣಿನ ಗಣೇಶನನ್ನೇ ಮಾಡಿದ್ದಾರೆ. ಪಟ್ಟಣದಲ್ಲಿ ಗಣೇಶ ಮೂರ್ತಿಯನ್ನು ಮಾರಲು ಜಾಗ ಇಲ್ಲದ ಕಾರಣ, ಎಟಿಎಂನಲ್ಲೇ ಇಟ್ಟು ಮಾರಾಟ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ಗಣೇಶೋತ್ಸವವನ್ನು ಬಂಡವಾಳ ಮಾಡಿಕೊಂಡ ಹೂವು, ಹಣ್ಣು ಮತ್ತು ಅಲಂಕಾರಿಕ ವಸ್ತುಗಳ ವ್ಯಾಪಾರಸ್ಥರು, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದು, ಕಬ್ಬು, ಬಾಳೆ ದಿಂಡುಗಳನ್ನು ಖರೀದಿ ಮಾಡಲು ಜನ ಮುಗಿ ಬಿದ್ದಿದ್ದರು. ಇನ್ನು ಚೆಂಡು ಹೂವು, ಸೇವಂತಿ ಹೂವು ಅಂತು ಬಾರಿ ಬೇಡಿಕೆ ಇತ್ತು. ಗಣೇಶ ಮೂರ್ತಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಿದೆ ಎಂದು ನಂಬಿಕೊಂಡು ಗಣೇಶ ಮೂರ್ತಿ ತಯಾರಿಕರು, ಸಾಕಷ್ಟು ಗಣೇಶ ಮೂರ್ತಿ ತಯಾರಿಸಿದ್ದಾರೆ, ಆದರೆ ಗಣೇಶ ಮೂರ್ತಿಗಳ ಬೆಲೆ ದುಬಾರಿಗೆ ಬೆಚ್ಚಿ ಬಿದ್ದ ಜನ ಕಡಿಮೆ ಬೆಲೆಯ ಗಣೇಶ ಮೂರ್ತಿ ಹುಡುಕಾಡುತ್ತಿರುವುದು ಕಂಡು ಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡಾ ಝೋನ್ ನಿರ್ಮಾಣ: ಶಾಸಕ ಅಶೋಕ್ ರೈ
16ರಿಂದ 26ರ ವರೆಗೆ ರಾಜ್ಯಮಟ್ಟದ ತರಬೇತಿ ಶಿಬಿರ