ಬ್ರಿಟಿಷರ ವಿರುದ್ಧ ಜನರನ್ನು ಒಗ್ಗೂಡಿಸಿದ್ದು ಗಣೇಶೋತ್ಸವ

KannadaprabhaNewsNetwork |  
Published : Sep 17, 2024, 12:45 AM IST
ನಾವು ಮುಂದಿನ ಪೀಳಿಗೆಗ ನಮ್ಮ ಸಂಸ್ಕೃತಿ ಸಂಪ್ರದಾಯವ್ನು ತಿಳಿಹೇಳಬೇಕು. | Kannada Prabha

ಸಾರಾಂಶ

ಲೋಕಮಾನ್ಯ ಬಾಲಗಂಗಾಧರ ತಿಲಕರು, ದೇಶದ ಜನರಿಗೆ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸುವಂತೆ ಕರೆ ನೀಡಿದ ಪರಿಣಾಮವಾಗಿ ದೇಶದ ಜನರು ಜಾತಿ ಭೇದವನ್ನು ಮರೆತು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸುವ ಮೂಲಕ ಬ್ರಿಟಿಷರಿಗೆ ಶೆಡ್ಡು ಹೊಡೆದರು

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ದೇಶದ ಜನರನ್ನು ಜಾತಿಗಳ ಹೆಸರಿನಲ್ಲಿ ಒಡೆಯುವ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದರು ಎಂದ ಹೈಕೋರ್ಟಿನ ವಿಶ್ರಾಂತ ನ್ಯಾಯಾಧೀಶರಾದ ಎನ್.ಕುಮಾರ್ ಹೇಳಿದರು. ಅವರು ನಗರದ ಬೈಪಾಸ್ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾವುಗಳು ಕೇವಲ ಹಬ್ಬ ಹರಿದಿನಗಳನ್ನು ಆಚರಿಸಿದರೆ ಮಾತ್ರ ಸಾಲದು, ಬದಲಿಗೆ ನಮ್ಮ ಮಕ್ಕಳಿಗೆ ನಮ್ಮ ಧರ್ಮದ ಆಚಾರ ವಿಚಾರ, ನಡೆ ನುಡಿ,ಉಡುಗೆ ತೊಡುಗೆ ಹಾಗೂ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಬೇಕು ಎಂದರು.

ಜನರನ್ನು ಒಗ್ಗೂಡಿಸಿದ ಗಣೇಶೋತ್ಸವ

ಇಂತಹ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು, ದೇಶದ ಜನರಿಗೆ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸುವಂತೆ ಕರೆ ನೀಡಿದ ಪರಿಣಾಮವಾಗಿ ದೇಶದ ಜನರು ಜಾತಿ ಭೇದವನ್ನು ಮರೆತು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸುವ ಮೂಲಕ ಬ್ರಿಟಿಷರಿಗೆ ಶೆಡ್ಡು ಹೊಡೆದರು ಎಂದರು.

ವಿಶ್ವ ಹಿಂದು ಪರಿಷದ್ ರಾಷ್ಟೀಯ ಕಾರ್ಯದರ್ಶಿ ಹಾಗೂ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಕಾರ್ಯದರ್ಶಿ ಗೋಪಾಲ್ ಜೀ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಣೇಶೋತ್ಸವ ಹೇಗೆ ಹಿಂದೂಗಳನ್ನು ಒಗ್ಗೂಡಿಸಲು ಸಾಧ್ಯವಾಯಿತೋ, ಅದೇ ರೀತಿಯಲ್ಲಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಸಮಸ್ತ ಹಿಂದೂಗಳು ಜಾತಿ ಕುಲ ಭೇದಗಳನ್ನು ಬದಿಗೊತ್ತಿ ನಾವೆಲ್ಲ ಹಿಂದೂ,ನಾವೆಲ್ಲ ಒಂದು ಎಂಬ ರೀತಿಯಲ್ಲಿ ಒಟ್ಟಾಗಿ ರಾಮನ ಕಾರ್ಯವನ್ನು ಸುಸೂತ್ರವಾಗಿ ನೆರೆವೇರಿಸಿದರು ಎಂದರು.

ಮಲ್ಲಕಂಬ ಪ್ರದರ್ಶನ: ಈ ಸಂಧರ್ಭದಲ್ಲಿ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ವರಪ್ರಸಾದ್ ರೆಡ್ಡಿ, ವಿಶ್ವಹಿಂದು ಪರಿಷದ್ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್, ಗೌರಿಶಂಕರ್,ವೇಣು ಜೀ,ಮಂಜುನಾಥ್, ದಯಾನಂದ್,ರಾಮ ಮೋಹನ್, ಉಪೇಂದ್ರ, ಬೈಪಾಸ್ ಗಣೇಶೋತ್ಸವ ಬಳಗದ ರವಿಕುಮಾರ್,ಸ್ವಾಗತ್, ರಾಜಶೇಖರ್,ಶಿವಾರೆಡ್ಡಿ,ಗಣೇಶ್,ಹರೀಶ್, ನವೀನ್,ನಿಖಿಲ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತ ಉದ್ದಿಮೆದಾರರ ಬೇಡಿಕೆಗೆ ಸಂಘಟಿತ ಹೋರಾಟ
ಬೆಂಗ್ಳೂರಲ್ಲಿ ರಾಜ್ಯದ ಮೊದಲ ಜೆನ್‌-ಝಿ ಅಂಚೇ ಕಚೇರಿ!