ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ಹೊಂಬಾಳಮ್ಮಪೇಟೆ ಮಾಜಿ ಪುರಸಭೆ ಅಧ್ಯಕ್ಷ ಗಂಗರೇವಣ್ಣ ನವರ ಪುತ್ರ ವಿಕಾಸ್, ಪ್ರಶಾಂತ್, ಚೇತನ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಪ್ರಾರಂಭದಲ್ಲಿ ಪ್ರೀತಿಯ ನೆಪದಲ್ಲಿ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ ವಿಕಾಸ್ ಆ ನಂತರ ಯುವತಿ ಜೊತೆ ಲೈಂಗಿಕ ಸಂಪರ್ಕ ಸಾಧಿಸಿದ್ದ. ಅದನ್ನು ವಿಡಿಯೋ ಮಾಡಿಕೊಂಡು ವಿದ್ಯಾರ್ಥಿನಿಗೆ ನಾನು ಕರೆದಾಗಲೆಲ್ಲ ಬರಬೇಕು ಎಂದು ಬೆದರಿಕೆ ಹಾಕುತ್ತಿದ್ದನು.ಮೂರು ತಿಂಗಳ ಹಿಂದೆ ವಿಡಿಯೋ ಮಾಡಿಕೊಂಡು ಬೆದರಿಕೆ ಆನಂತರ ಪ್ರಶಾಂತ್, ಚೇತನ ಎಂಬುವವರನ್ನು ಜೊತೆಗೆ ಸೇರಿಸಿಕೊಂಡು ವಿದ್ಯಾರ್ಥಿನಿ ಮೇಲೆ ಆತ್ಯಾಚಾರ ಮಾಡಲಾಗಿತ್ತು. ಆರೋಪಿಗಳು ಆತ್ಯಾಚಾರ ಮಾಡಿದ ವಿಡಿಯೋ ಜಾಲತಾಣದಲ್ಲಿ ಹಾಕಿದ ಪರಿಣಾಮ ಯುವತಿಯ ಮನೆಯವರಿಗೆ ವಿಷಯ ತಿಳಿದು ನಂತರ ಯುವತಿಯನ್ನು ಕೇಳಿದಾಗ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆ ಜಿಲ್ಲಾ ಎಸ್‌ಪಿಯವರಿಗೆ ಯುವತಿ ಮೊದಲು ದೂರು ನೀಡಿದರು.
ಎಸ್‌ಪಿಯವರ ಆದೇಶದ ಮೇರೆಗೆ ಮಾಗಡಿ ಠಾಣೆ ಇನ್‌ಸ್ಪೆಕ್ಟರ್ ಗಿರಿರಾಜ್ ಅವರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಲದಲ್ಲಿ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆದು ಗುರುವಾರ ಆರೋಪಿಗಳನ್ನು ಆತ್ಯಾಚಾರ ಸ್ಥಳದ ಮಹಜರು ಮಾಡಿದ್ದಾರೆ.ಪ್ರಕರಣ ತಿಳಿಯುತ್ತಿದ್ದಂತೆ ಪಟ್ಟಣದಲ್ಲಿ ಆತಂಕರ ವಾತಾವರ್ಣ ನಿರ್ಮಾಣವಾಗಿದ್ದು ಕಾಲೇಜಿಗೆ ಹೋಗುವ ಯುವತಿಯ ಸುರಕ್ಷತೆ ಬಗ್ಗೆ ಪೋಷಕರು ಆತಂಕಪಡುವಂತೆ ಆಗಿದೆ. ತಾಲೂಕಿನಲ್ಲಿ ಇದು ಎರಡನೇ ಸಾಮೂಹಿಕ ಆತ್ಯಾಚಾರ ಪ್ರಕರಣ ಬಯಲಿಗೆ ಬಂದಂತಾಗಿದೆ.