ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ದೇಶಕ್ಕಾಗಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಹಾಗೂ ದುಷ್ಟಶಕ್ತಿಗಳ ನಿಗ್ರಹಕ್ಕಾಗಿ ದೈವೀ ಶಕ್ತಿಗಳ ವಿರಾಟ ಸ್ವರೂಪ ಅನಾವರಣಗೊಳ್ಳಲಿ ಎಂದು ಪ್ರಾರ್ಥಿಸಿ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಆಶ್ರಯದಲ್ಲಿ ಸೋಮವಾರ ರಾತ್ರಿ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಗಂಗಾ ಆರತಿಯನ್ನು ನಡೆಸಲಾಯಿತು. ಭಜನಾ ಮಂಡಳಿ ಅಧ್ಯಕ್ಷ ಶರತ್ ಕೋಟೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ೨೧ ಹಣತೆಗಳ ಮೂಲಕ ಗಂಗಾ ಆರತಿಯನ್ನು ನಡೆಸಿ ಹಣತೆಗಳನ್ನು ನದಿಯಲ್ಲಿ ತೇಲಿ ಬಿಡಲಾಯಿತು.ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಜಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ರಿಷಿಕೇಶ್, ಸುಜಯ್ ಎಸ್. ಶೆಟ್ಟಿ, ಪ್ರಾಂಜಲ್ ಪಿ. ನಾಯಕ್ , ದಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಮನ್ವಿತ್ ಶೆಟ್ಟಿ, ನೃತ್ಯ ಭಜನಾ ತಂಡ ರಚಿಸಿದ ವಿಜಯ ಶಿಲ್ಪಿ, ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪಿಎಚ್.ಡಿ ಪದವಿ ಪಡೆದ ಉಪನ್ಯಾಸಕಿ ಮಂಜುಳ ಎಂ.ಬಿ., ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರಿದ ಸಾಕೇತ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಯಶವಂತ ಹೆಗ್ಡೆ, ಚಂದ್ರಶೇಖರ್ ಗುಂಡೋಳೆ, ಯೋಧ ಗಣೇಶ್ ಹೆಗ್ಡೆ, ಭಜನಾ ಮಂಡಳಿಯ ಕಾರ್ಯದರ್ಶಿ ಮಾಧವ ಆಚಾರ್ಯ, ಪ್ರಮುಖರಾದ ಕೆ. ಸುಧಾಕರ ಶೆಟ್ಟಿ, ದಯಾನಂದ, ಯಶೋಧರ ಆಚಾರ್ಯ, ಚಂದ್ರಹಾಸ ಹೆಗ್ಡೆ, ಕಿಶೋರ್ ಕುಮಾರ್, ಕಂಗ್ವೆ ವಿಶ್ವನಾಥ ಶೆಟ್ಟಿ, ಐ. ಪುಷ್ಪಾಕರ್ ನಾಯಕ್, ಕೈಲಾರ್ ರಾಜಗೋಪಾಲ ಭಟ್, ಶಕಿಲಾ ಕುಂದರ್, ಶಶಿಧರ್ ಗೌಡ , ಬಿಪಿನ್ ಜೆ., ಸುಜಯ ಶರತ್, ಐ. ಪುರುಷೋತ್ತಮ ನಾಯಕ್, ಚಿದಾನಂದ ನಾಯಕ್, ಎನ್. ಗೋಪಾಲ ಹೆಗ್ಡೆ, ಸುಂದರ ಆದರ್ಶನಗರ, ಶಶಿಧರ್ ಶೆಟ್ಟಿ, ಶಿವಾನಂದ, ಜಯ ಪೂಜಾರಿ, ಅನೀಶ್ ಗಾಣಿಗ ಮೊದಲಾದವರು ಭಾಗವಹಿಸಿದ್ದರು.