ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಜ್ಯೋತಿ ಕೋ-ಆಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ ಗಾಣಿಗ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಜಾತಿಗಣತಿ ವರದಿಯನ್ನು ಜಯಪ್ರಕಾಶ ಹೆಗಡೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಗಾಣಿಗ ಸಮಾಜ ಕಡೆಗಣಿಸಲಾಗಿದೆ. ಗಾಣಿಗ ಸಮಾಜವನ್ನು ಲಿಂಗಾಯತ ಸಮುದಾಯದಲ್ಲಿ ಸೇರಿಸಲಾಗಿದೆ. ರಾಜ್ಯದಲ್ಲಿ ಗಾಣಿಗ ಸಮುದಾಯ ಜೀರೋ ಆಗಿದೆ. ಇದನ್ನು ನೋಡಿದರೆ ಮೇಲ್ನೋಟಕ್ಕೆ 2ಎ ಮೀಸಲಾತಿಯಿಂದ ತೆಗೆಯುವ ಹುನ್ನಾರ ನೆಡದಿದೆ ಎಂದು ಕಾಣುತ್ತಿದೆ. ಅದಕ್ಕಾಗಿ ಗಾಣಿಗ ಸಮಾಜದವರು ಎಚ್ಚೆತ್ತುಕೊಂಡು ಹೋರಾಟ ಮಾಡಬೇಕು. ಮುಂದಿನ ದಿನಗಳಲ್ಲಿ ಹೋರಾಟದ ದಿನಾಂಕವನ್ನು ಸಮಾಜದವರಿಗೆ ತಿಳಿಸಲಾಗುವುದು ಎಂದು ಹೇಳಿದರು.
ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ದುಂಡಪ್ಪ ಏಳೆಮ್ಮಿ ಮಾತನಾಡಿ, ಅವೈಜ್ಞಾನಿಕವಾದ ಜಾತಿ ಗಣತಿ ವರದಿ ಬಗ್ಗೆ ನಮ್ಮ ಸಮಾಜದವರು ತೀವ್ರ ಹೋರಾಟ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಈಗಿದ್ದ ಮೀಸಲಾತಿಯೂ ಕೈತಪ್ಪುವ ಕಾಲ ದೂರ ಇಲ್ಲ ಎಂದು ತಿಳಿಸಿದರು.ಬಾಗಲಕೋಟೆಯಲ್ಲಿ ಗಾಣಿಗ ಸಮಾಜಕ್ಕೆ ಇಲ್ಲಿಯವರಿಗೂ ಒಂದು ಸ್ವಂತ ಜಾಗವಿಲ್ಲ. ಸಮಾಜದಿಂದ ದೇಣಿಗೆ ಎತ್ತುವ ಮೂಲಕ ಬಾಗಲಕೋಟೆ ನಗರದ ಸುತ್ತಮುತ್ತ 2 ಎಕರೆ ಜಾಗ ಖರೀದಿಸಿ ಸಮಾಜದ ಕಲ್ಯಾಣ ಮಂಟಪ ಹಾಗೂ ಸಮಾಜದ ಇತರ ಕಾರ್ಯಗಳಿಗೆ ಒಂದು ಜಾಗದ ಅವಶ್ಯಕತೆ ಬಗ್ಗೆ ತಿಳಿಸಿದರು.
ಸಮಾಜದ ಮುಖಂಡರಾದ ಚಂದ್ರಕಾಂತ ಕೇಸನೂರ ಮಾತನಾಡಿದರು.
ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ದುಂಡಪ್ಪ ಏಳೆಮ್ಮಿ ಅವರಿಂದ ಖಾಲಿಯಾದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಚೊಳಚಗುಡ್ಡ ಅವರನ್ನು ತಾಲೂಕು ನಗರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಾಗಲಕೋಟೆ ಗ್ರಾಮೀಣ ಅಧ್ಯಕ್ಷರನ್ನಾಗಿ ಪ್ರಶಾಂತ ಮಾಚಕನೂರ ಹಾಗೂ ಗ್ರಾಮೀಣ ಪ್ರಧಾನ ಕಾರ್ಯದರ್ಶಿಯಾಗಿ ಈರಣ್ಣ ಗಲಾಟೆ ಅವರನ್ನು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಮಾಜದ ಮುಖಂಡರು ಭಾಗವಹಿಸಿದ್ದರು.