ಶಹಾಪುರ : ಅಬಕಾರಿ ಪೊಲೀಸರ ದಾಳಿ - 7.720 ಕೆಜಿಯ ಗಾಂಜಾ ಬೆಳೆ ಜಪ್ತಿ: ಓರ್ವ ಆರೋಪಿ ಬಂಧನ

KannadaprabhaNewsNetwork |  
Published : Nov 10, 2024, 01:49 AM ISTUpdated : Nov 10, 2024, 08:50 AM IST
ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಬೆಳೆಯೊಂದಿಗೆ ಆರೋಪಿಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿರುವುದು. | Kannada Prabha

ಸಾರಾಂಶ

ಮೂರು ಲಕ್ಷದ ಐದು ಗಾಂಜಾ ಗಿಡ ವಶ, ಅಬಕಾರಿ ಪೊಲೀಸರ ದಾಳಿ, ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ. ಜಮೀನಿನ ಮಾಲೀಕನ ವಿರುದ್ಧ ಹಾಗೂ ಅಂಬಲಪ್ಪ ಎನ್ನುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದೆ.

 ಶಹಾಪುರ : ಸಮೀಪದ ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ 5 ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದು, ಅಬಕಾರಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಅಂದಾಜು 3 ಲಕ್ಷ ರು.ಗಳು ಮೌಲ್ಯದ 7.720 ಕೆಜಿಯ 5 ಗಾಂಜಾ ಗಿಡಗಳು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ಶೋಧ ನಡೆಸಿದಾಗ, ಮೆಣಸಿನಕಾಯಿ ಹಾಗೂ ಹತ್ತಿ ಬೆಳೆ ಮಧ್ಯೆ ಗಾಂಜಾ ಗಿಡಗಳು ಬೆಳೆದಿರುವುದು ಕಂಡುಬಂದಿವೆ. ಹೂ, ತೆನೆಭರಿತ ಎಲೆಗಳಿಂದ ಕೂಡಿದ 5 ಹಸಿ ಗಾಂಜಾದ ಗಿಡಗಳನ್ನು ಬೆಳೆದಿದ್ದು, 3 ಲಕ್ಷ ರು.ಗಳ ಮೌಲ್ಯದ 7.720 ಕೆಜಿ ಗಾಂಜಾ ಬೆಳೆ ವಶಪಡಿಸಿಕೊಳ್ಳಲಾಗಿದೆ.

ಜಮೀನಿನ ಮಾಲೀಕನ ವಿರುದ್ಧ ಹಾಗೂ ಅಂಬಲಪ್ಪ ಎನ್ನುವವರ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ-1985 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಪರ ಆಯುಕ್ತರು (ಜಾರಿ ಮತ್ತು ಅಪರಾಧ, ಕೇಂದ್ರ ಸ್ಥಾನ ಬೆಳಗಾವಿ) ಹಾಗೂ ಅಬಕಾರಿ ಜಂಟಿ ಆಯುಕ್ತರು (ಜಾ&ತ), ಕಲಬುರಗಿ ವಿಭಾಗ ಕಲಬುರಗಿ ಅವರ ನಿರ್ದೆಶನದಂತೆ, ಅಬಕಾರಿ ಉಪ ಆಯುಕ್ತರು ಯಾದಗಿರಿ ಜಿಲ್ಲೆ ಅವರ ಆದೇಶದ ಮೇರೆಗೆ ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ಹರ್ಷರಾಜ್ ಬಿ., ಅಬಕಾರಿ ನಿರೀಕ್ಷಕ ವಿಜಯಕುಮಾರ ಹಿರೇಮಠ್, ಅಬಕಾರಿ ಇನ್ಸ್ ಪೆಕ್ಟರ್ ಗಳಾದ ಮಹೇಶ್ ಚೌದ್ರಿ, ಪ್ರವೀಣ್ ಕುಮಾರ್, ಸಿಬ್ಬಂದಿಯರಾದ ಮಹ್ಮದ್ ಸುಭಾನಿ, ನಾಗರಾಜ್, ಬಸವರಾಜ್, ವಾಹನ ಚಾಲಕ ಗೋಪಾಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?