ಗರಗ-ನಾಗಲಾಪುರ ಗ್ರಾಮದ ಸಂಭ್ರಮದ ಒಪ್ಪತ್ತೇಶ್ವರ ರಥೋತ್ಸವ

KannadaprabhaNewsNetwork |  
Published : Feb 27, 2026, 02:30 AM IST
ಸ | Kannada Prabha

ಸಾರಾಂಶ

ರಥೋತ್ಸವನ್ನು ಸುಮಾರು ಒಂದು ಕಿ.ಮೀ. ದೂರದವರೆಗೆ ದೊಡ್ಡ ಹಳ್ಳದಲ್ಲಿ ಎಳೆದುಕೊಂಡು ಹೋಗಿ ಮತ್ತೆ ಹಳ್ಳದ ಮೂಲಕವೇ ರಥೋತ್ಸವನ್ನು ಎಳೆದು ಮತ್ತೆ ವಾಪಾಸು ರಥೋತ್ಸವ ಮೊದಲಿದ್ದ ಸ್ಥಳಕ್ಕೆ ಎಳೆದು ತಂದು ನಿಲ್ಲಿಸಲಾಯಿತು.

ಮರಿಯಮ್ಮನಹಳ್ಳಿ: ಗರಗ-ನಾಗಲಾಪುರ ಗ್ರಾಮದಲ್ಲಿ ಶ್ರೀಗುರು ಒಪ್ಪತ್ತೇಶ್ವರಸ್ವಾಮಿಯ ರಥೋತ್ಸವವು ಗುರುವಾರ ಸಂಜೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಮತ್ತು ಸಡಗರ ಸಂಭ್ರಮದೊಂದಿಗೆ ನಡೆಯಿತು.

ರಥೋತ್ಸವದ ಅಂಗವಾಗಿ ಶ್ರೀಗುರು ಒಪ್ಪತ್ತೇಶ್ವರಸ್ವಾಮಿಗೆ ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಲಿಸಲಾಗಿತ್ತು. ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ತಮ್ಮ ಕುಟುಂಬದ ಸದಸ್ಯರೊಂದಿಗೆ ದೇವರ ದರ್ಶನ ಪಡೆದುಕೊಳ್ಳಲು ಸಾಲುಗಟ್ಟಿನಿಂತು ದೇವರ ದರ್ಶನ ಪಡೆದುಕೊಂಡರು. ಇದೇ ರೀತಿಯಲ್ಲಿ ಶ್ರೀಗುರು ಒಪ್ಪತ್ತೇಶ್ವರಸ್ವಾಮಿ ಮಠದ ನಿರಂಜನ ಪ್ರಭುದೇವರು ಸ್ವಾಮೀಜಿಗಳ ದರ್ಶನ ಪಡೆದುಕೊಂಡರು.

ಸಂಜೆ ಸಾರ್ವಜನಿಕರೆಲ್ಲರೂ ಸೇರಿ ರಥೋತ್ಸವನ್ನು ಶ್ರೀಗುರು ಒಪ್ಪತ್ತೇಶ್ವರಸ್ವಾಮಿ ಮಠದ ನಿರಂಜನ ಪ್ರಭುದೇವರು ಸ್ವಾಮೀಜಿಗಳ ನೇತೃತ್ವದಲ್ಲಿ ಅತ್ಯಂತ ವೈಭವಿಂದ ಮತ್ತು ಭಕ್ತಿಯಿಂದ ರಥೋತ್ಸವನ್ನು ಸುಮಾರು ಒಂದು ಕಿ.ಮೀ. ದೂರದವರೆಗೆ ದೊಡ್ಡ ಹಳ್ಳದಲ್ಲಿ ಎಳೆದುಕೊಂಡು ಹೋಗಿ ಮತ್ತೆ ಹಳ್ಳದ ಮೂಲಕವೇ ರಥೋತ್ಸವನ್ನು ಎಳೆದು ಮತ್ತೆ ವಾಪಾಸು ರಥೋತ್ಸವ ಮೊದಲಿದ್ದ ಸ್ಥಳಕ್ಕೆ ಎಳೆದು ತಂದು ನಿಲ್ಲಿಸಲಾಯಿತು.

ರಥೋತ್ಸವದ ಗಾಲಿ ಮುಂದಕ್ಕೆ ಸಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಶ್ರೀಗುರು ಒಪ್ಪತ್ತೇಶ್ವರ ಸ್ವಾಮಿಯ ರಥೋತ್ಸವಕ್ಕೆ ಸರವೇಗದಲ್ಲಿ ಹೂವು, ಬಾಳೆಹಣ್ಣು ಎಸೆದು ದೇವರಿಗೆ ಕೈ ಮುಗಿದರು.

ರಥೋತ್ಸವನ್ನು ಭಕ್ತರು ಹಗ್ಗ ಹಿಡಿದು ಹರ ಹರ ಮಹಾದೇವ್‌.... ಹರ ಹರ ಮಹಾದೇವ್‌....ಎಂದು ರಥೋತ್ಸವಕ್ಕೆ ಬಂದವರೆಲ್ಲರೂ ಹಗ್ಗ ಹಿಡಿದು ಸ್ವಲ್ಪವಾದರೂ ರಥೋತ್ಸವವನ್ನು ಮುಂದಕ್ಕೆ ಎಳೆಯಲು ಭಕ್ತ ಸಮೂಹವು ರಥೋತ್ಸವನ್ನು ಮುಂದಕ್ಕೆ ಒಳೆಯುತ್ತಿದ್ದರು. ರಥದ ಹಿಂದೆ ಗಾಲಿಗಳಿಗೆ ಊರಿನ ಯುವಕರು ಸನ್ನೆ ಹಾಕಿ ರಥೋತ್ಸವವನ್ನು ಮುಂದಕ್ಕೆ ಸಾಗುವಂತೆ ಸನ್ನೆ ಹಾಕುತ್ತಿದ್ದರು.

ರಥದ ಗಾಲಿಗಳು ಮುಂದೆಕ್ಕೆ ಹೋಗಲು ಕೇಕೆ ಹಾಕುತ್ತಾ ರಥೋತ್ಸವನ್ನು ಸೆನ್ನೆ ಹಾಕಿ ರಥೋತ್ಸವನ್ನು ಮುಂದಕ್ಕೆ ಸಾಗುವಂತೆ ಕಾರ್ಯನಿರ್ವಹಿಸಿದರು.

ರಥೋತ್ಸವದಲ್ಲಿ ಶಹನಾಯಿ ವಾದನ, ವೀರಭದ್ರೇಶ್ವರ ಸಂಘದಿಂದ ನಂದಿಕೋಲು ಕುಣಿತ, ವೀರಶೈವ ತರುಣ ಸಂಘದವರಿಂದ ಸಮಾಳವಾದನ, ಜಿ. ನಾಗಲಾಪುರದ ಎಂ. ಜಿ. ಶಿವನಾಗಪ್ಪ ತಂಡವರದಿಂದ ಕುದುರೆ ಕುಣಿತ ಮತ್ತು ಗೊಂಬೆ ಕುಣಿತ ಸೇರಿದಂತೆ ಇತರೆ ಜನಪದ ಕಲಾತಂಡಗಳು ಭಾಗವಹಿಸಿದ್ದವು.

ಶ್ರೀಗುರು ಒಪ್ಪತ್ತೇಶ್ವರಸ್ವಾಮಿ ರಥದ ಪಟದ ಹಾರಜನ್ನು ಜಿ. ನಾಗಲಾಪುರದ ನಿವಾಸಿ ಎನ್‌. ವೆಂಕಟೇಶ್‌ ಗೌಡ ಅವರು 1,25,100 ರು.ಗೆ ಪಟ ಹರಾಜು ಮಾಡಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ರಥೋತ್ಸವಕ್ಕೆ ಬಂದ ಭಕ್ತರು ಜಾತ್ರೆಯಲ್ಲಿ ವಸ್ತುಗಳ ಖರೀದಿ, ತಂಪು- ಪಾನೀಯಗಳನ್ನು ತನ್ನ ಸ್ನೇಹಿತರೊಂದಿಗೆ ಹಾಗೂ ಬಂಧುಗಳೊಂದಿಗೆ ಸಡಗರ ಸಂಭ್ರಮದೊಂದಿಗೆ ಆಚರಿಸಿದರು.

ರಥೋತ್ಸವಕ್ಕೆ ಬಂದವರಿಗೆ ಮಧ್ಯಾಹ್ನದಿಂದಲೇ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೊತೆಗೆ ಸ್ಥಳೀಯ ಸಂಘ-ಸಂಸ್ಥೆಗಳವರು ಶರಬತ್ತು ಮತ್ತು ಮಜ್ಜಿಗೆ ವಿತರಿಸಿ ಜಾತ್ರೆಗೆ ಬಂದ ಭಕ್ತರಿಗೆ ದಾಹ ತೀರಿಸಿದರು.

ಜಿ.ನಾಗಲಾಪುರ, ಗುಂಡಾ, ಬ್ಯಾಲಕುಂದಿ, ಗರಗ, ಗೊಲ್ಲರಹಳ್ಳಿ, ಡಣಾಯಕನಕೆರೆ, ದೇವಲಾಪುರ, ಹಾರುವನಹಳ್ಳಿ, ಚಿಲಕನಹಟ್ಟಿ, ತಿಮ್ಮಲಾಪುರ, ಪೋತಲಕಟ್ಟೆ, ತಾಳೆಬಸಾಪುರ, ಮರಿಯಮ್ಮನಹಳ್ಳಿ, ನಂದಿಬಂಡಿ, ಅಯನಹಳ್ಳಿ, ವೆಂಕಟಾಪುರ, ವ್ಯಾಸನಕೆರೆ, ಗಾಳೆಮ್ಮನಗುಡಿ, ಹನುಮನಹಳ್ಳಿ, ಡಣಾಪುರ ಸೇರಿದಂತೆ ಇತರೆ ಊರುಗಳಿಂದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮದ ದಾರಿಯಲ್ಲಿ ನಡೆದರೆ ಮಾತ್ರ ಸುಖಿ ಜೀವನ: ದೊಡ್ಡನಗೌಡ ಪಾಟೀಲ
ಪೊಲೀಸರು, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ