ಬೆಲೆ ಏರಿಕೆ ನಡುವೆಯೂ ಕಡೂರಲ್ಲಿ ಗೌರಿ, ಗಣೇಶನ ಹಬ್ಬ ಸಡಗರ, ಸಂಭ್ರಮ

KannadaprabhaNewsNetwork |  
Published : Sep 13, 2026, 01:15 AM IST
ಸಸಸ | Kannada Prabha

ಸಾರಾಂಶ

ಕಡೂರುಮಳೆ ಇಲ್ಲದೆ ಬರ ಆವರಿಸಿರುವ ನಡುವೆ ತಾಲೂಕಿನಾದ್ಯಂತ ಗೌರಿ-ಗಣೇಶ ಹಬ್ಬವನ್ನು ಶ್ರದ್ಧೆ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆದಿದೆ. ಕೃಷಿ ಚಟುವಟಿಕೆಗಳು ಕುಂಠಿತಗೊಂಡು ರೈತರು ಆರ್ಥಿಕ ಸಂಕಷ್ಟದಲ್ಲಿದ್ದರೂ ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆಯಾಗಿಲ್ಲ.

ಅದ್ಧೂರಿತನಕ್ಕೆ ತಿಲಾಂಜಲಿ । ಸಾಂಪ್ರದಾಯಿಕ ಹಾಗೂ ಸರಳ ವಿಧಾನದಲ್ಲಿ ಹಬ್ಬ

ಕನ್ನಡಪ್ರಭ ವಾರ್ತೆ ಕಡೂರು

ಮಳೆ ಇಲ್ಲದೆ ಬರ ಆವರಿಸಿರುವ ನಡುವೆ ತಾಲೂಕಿನಾದ್ಯಂತ ಗೌರಿ-ಗಣೇಶ ಹಬ್ಬವನ್ನು ಶ್ರದ್ಧೆ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆದಿದೆ. ಕೃಷಿ ಚಟುವಟಿಕೆಗಳು ಕುಂಠಿತಗೊಂಡು ರೈತರು ಆರ್ಥಿಕ ಸಂಕಷ್ಟದಲ್ಲಿದ್ದರೂ ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆಯಾಗಿಲ್ಲ. ಗ್ರಾಮೀಣ ಭಾಗಗಳ ಕೆಲವು ಕಡೆ ಕುಡಿವ ನೀರಿನ ತೀವ್ರ ಆಭಾವ-ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಅದ್ಧೂರಿಗೆ ತಿಲಾಂಜಲಿ ಇಟ್ಟು. ಸಾಂಪ್ರದಾಯಿಕ ಹಾಗೂ ಸರಳ ವಿಧಾನದಲ್ಲಿ ಹಬ್ಬ ಆಚರಿಸಲು ಗಣೇಶನ ಪ್ರತಿಷ್ಠಾಪನೆ ಮೂರೆ ದಿವಸಕ್ಕೆ ಮುಕ್ತಯ ಗೊಳಿಸಲು ಯೋಚನೆಗಳು ನಡೆದಿವೆ. ಗಣೇಶನ ಮೂರ್ತಿ ಖರೀದಿ ಪ್ರಕ್ರಿಯೆ ಮಂದಗತಿಯಲ್ಲಿದ್ದರೂ ಕೊಂಡು ಕೊಳ್ಳವವರೇನು ಕಡಿಮೆ ಇಲ್ಲದಂತೆ ಖರೀದಿಸುತ್ತಿದ್ದಾರೆ. ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳೆ ಹೆಚ್ಚಿನ ಖರೀದಿಯಾಗುತ್ತಿವೆ.ಸಮುದಾಯ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ದೊಡ್ಡ ಮಟ್ಟದಲ್ಲಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮನಡೆಸಲು ಸಿದ್ಧತೆ ನಡೆದಿದೆ ಕಡೂರು ಹಿಂದೂ ಮಹಾ ಗಣಪತಿ ಸಮಿತಿ ಈಗಾಗಲೇ ಪಟ್ಟಣದಲ್ಲಿ ಅಬ್ಬರದ ಬ್ಯಾನರ್‌ ಗಳನ್ನು ಕಟ್ಟಿ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ.ಬರದ ಕಾರ್ಮೊಡ ಕವಿದಿದ್ದರೂ ಜನರ ಮುಖದಲ್ಲಿ ಹಬ್ಬದ ನಗು ಕಮರಿಲ್ಲ. ಸಂಕಷ್ಟದ ನಡುವೆಯೂ ಒಟ್ಟಾಗಿ ಆಚರಿಸುವ ಭರವಸೆ ಈ ಗಣೆಶ ಹಬ್ಬದ ಆಚರಣೆ ಮತ್ತೊಮ್ಮೆ ಸಾಬೀತುಪಡಿಸಿಕೊಂಡಿದೆ. ಮಳೆ ಕೈಕೊಟ್ಟರು ಗೌರಿ-ಗಣೇಶ ಹಬ್ಬದ ಮುಖೇನ ವರುಣದೇವ ಕರುಣೆ ತೋರಲಿ ಎಂಬ ಪ್ರಾರ್ಥನೆ ಎಲ್ಲರ ಮೊಗದಲ್ಲಿದೆ. ಮಳೆಯಿಲ್ಲದೆ ನೋವು ಮರೆತು ಜನರು ಧಾರ್ಮಿಕ ವಿಧಿವಿಧಾನನ್ನು ನೆರವೇರಿಸಲು ಮುಂದಾಗಿದ್ದಾರೆ ಕಡೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಕೊಳ್ಳುವವರ ಕೈ ಬಿಸಿಯಾಗಿದೆ. ತರಕಾರಿ ಬೆಲೆ ಗಗನಕ್ಕೇರಿದ್ದು ಬಾಳೆ ಹಣ್ಣು 1 ಕೆ.ಜಿ.₹140 ಗಳಾಗಿದೆ. ಸೇಬು, ಕಿತ್ತಳೆ, ಮೂಸಂಬಿ ಬೆಲೆ,ಬೇಳೆ ಎಣ್ಣೆ ಮತ್ತಿತರ ದಿನಸಿ ಪದಾರ್ಥಗಳ ಬೆಲೆ ಅಂತೂ ಮುಗಿಲು ಮುಟ್ಟಿದೆ ಆದರೂ ಹಬ್ಬ ಆಚರಿಸಲೇ ಬೇಕಲ್ಲ ಎಂದು ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇಲ್ಲ. ಕೆ.ಎಲ್.ವಿ ವೃತ್ತದಿಂದ ಗಣೇಶ ಪೆಂಡಾಲ್ ವಿಜಯಲಕ್ಷ್ಮಿ ಚಿತ್ರಮಂದಿರದ ತನಕ ರಸ್ತೆಯ ಇಕ್ಕೆಲೆಗಳಲ್ಲಿ ಜನ ಸಂದಣಿ ಹಿಂದೆಂದಿಗಿಂತ ದ್ವಿಗುಣವಾಗಿತ್ತು. ಸೇವಂತಿಗೆ 10 ಮಾರು ಹೂವಿನ ಬೆಲೆ ₹1 ಸಾವಿರ ರೂಗಳ ಗಡಿ ದಾಟಿದರೆ, ಮಲ್ಲಿಗೆ ಮತ್ತಿತರ ಹೂಗಳ ಬೆಲೆ ಗಗನಕ್ಕೇರಿದೆ.ಗ್ರಾಮೀಣ ಪ್ರದೇಶಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಯುವಕರ ತಂಡಗಳು ಟಾಟಾ ವಾಹನಗಳಲ್ಲಿ ಗಣೇಶನ ಮೂರ್ತಿಯನ್ನು ಕೊಂಡು ಸಾಗಿಸುತ್ತಿದ್ದ ದೃಶ್ಯ ಕಾಣಿಸುತ್ತಿತ್ತು.12ಕೆಡಿಆರ್1ಕಡೂರು ಪಟ್ಟಣದಲ್ಲಿ ಮಾರಾಟಕ್ಕೆ ಸಿದ್ದವಾಗಿರುವ ವಿವಿಧ ರೂಪಗಳ ಗಣೇಶಮೂರ್ತಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋಲಕಪಳ್ಳಿ ತಾಂಡಾದಲ್ಲಿ ಶ್ರಾವಣ ಮಾಸದ ಪೂಜೆ
ಕೋಡಿಮಠದಲ್ಲಿ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮಗಳಿಗೆ ತೆರೆ