- ಶ್ರೀ ವಿದ್ಯಾಗಣಪತಿ ಮೂರ್ತಿ ಪ್ರತಿಷ್ಠಪನೆ: ತೇಜಸ್ವಿಸೂರ್ಯ ಭಾಗಿ । ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಳೆಯ ಅಡ್ಡಿ
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಕಾಲ ಗೌರಿ - ಗಣೇಶ ಹಬ್ಬ ಸಂಭ್ರಮದಿಂದ ನಡೆಯಿತು. ಆದರೆ, ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಳೆ ಅಡ್ಡಿ ಪಡಿಸಿದೆ. ಮಲೆನಾಡಿನ ಹಲವೆಡೆ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮೆರವಣಿಗೆ, ಉತ್ಸವಕ್ಕೂ ಅಡ್ಡಿಯಾಗಿದೆ.
ಗಣೇಶಮೂರ್ತಿ ತಯಾರಕರು, ತಾವು ಸಿದ್ಧಪಡಿಸಿ ಕಳೆದ ಒಂದು ವಾರದಿಂದ ನಗರ ಮತ್ತು ಪೇಟೆಯ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಇಟ್ಟಿದ್ದರು. ಮಳೆ ಸಾಧ್ಯತೆಯಿಂದ ಆದಷ್ಟು ಸುರಕ್ಷಿತ ಪ್ರದೇಶಗಳಲ್ಲಿ ಇಟ್ಟಿದ್ದರು. ಬುಧವಾರ ಬೆಳಿಗ್ಗೆ ಮಳೆ ಬಿಡುವು ನೀಡಿತ್ತು. ಆದರೆ, ಮಧ್ಯಾಹ್ನ ಆರಂಭವಾದ ಮಳೆ ಗುರುವಾರ ದವರೆಗೆ ಇನ್ನಷ್ಟು ಜೋರಾಗಿತ್ತು. ಆದರೆ, ಭಕ್ತರ ಉತ್ಸಹ ಕಡಿಮೆಯಾಗಿರಲಿಲ್ಲ,ಮಳೆಯ ನಡುವೆಯೇ ಟ್ರ್ಯಾಕ್ಟರ್, ಆಟೋ, ಟಾಟಾ ಏಸಿ ವಾಹನಗಳಲ್ಲಿ ಗಣೇಶ ಮೂರ್ತಿ ತೆಗೆದುಕೊಂಡು ಹೋಗುತ್ತಿರುವುದು ಎಲ್ಲೆಡೆ ಕಂಡು ಬರುತ್ತಿತ್ತು. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ರಾತ್ರಿ ವೇಳೆಯಲ್ಲಿ ವಿಸರ್ಜಿಸಲಾಯಿತು. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿ ವಿಸರ್ಜಿಸಲು ಸ್ಥಳೀಯ ಸಂಸ್ಥೆಗಳು ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ನೀರು ತುಂಬಿಸಿ ವ್ಯವಸ್ಥೆ ಮಾಡಿದ್ದವು.
ಚಿಕ್ಕಮಗಳೂರಿನ ಆಜಾದ್ ಪಾರ್ಕ್, ವಿಜಯಪುರ, ಹಿಂದೂ ಮಹಾಸಭಾ ಗಣಪತಿಗಳಲ್ಲಿ ಪ್ರತಿ ದಿನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಂಜೆ ವೇಳೆಗೆ ಭಕ್ತರು ಪೆಂಡಾಲ್ ಗಳಿಗೆ ಬಂದು ಗಣೇಶ ದರ್ಶನ ಪಡೆಯುವುದು, ನಂತರ ಕೆಲ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮ ನೋಡಿಕೊಂಡು ಹೋಗುವುದನ್ನು ಹಲವು ವರ್ಷಗಳಿಂದ ರೂಢಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಮಳೆ ಇರುವುದರಿಂದ ಜನರು ಪೆಂಡಾಲ್‌ಗಳತ್ತಾ ಬರುವುದು ಕಡಿಮೆಯಾಗಲಿದೆ. ವರುಣನ ಆರ್ಭಟ ವಿಘ್ನ ನಿವಾರಕನಿಗೂ ತಟ್ಟಿದೆ.1730 ಗಣೇಶ ಪ್ರತಿಷ್ಠಾಪನೆ
ಶ್ರೀ ವಿದ್ಯಾಗಣಪತಿ ಮೂರ್ತಿ ಪ್ರತಿಷ್ಠಪನೆ: ತೇಜಸ್ವಿಸೂರ್ಯ ಭಾಗಿಚಿಕ್ಕಮಗಳೂರು: ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ಛಾಯಾಪುತ್ರ ಯುವಕರ ಸಂಘದಿಂದ ಶ್ರೀ ವಿದ್ಯಾಗಣಪತಿ ಮೂರ್ತಿಯನ್ನು ಬುಧವಾರ ಸಂಜೆ ಪದಾಧಿಕಾರಿಗಳು, ಭಕ್ತಾಧಿಗಳು ಹಾಗೂ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.
ಮಹಿಳೆಯರು, ಯುವಕರು ಹಾಗೂ ಹಿರಿಯರು ಭಾರತೀಯ ಸಂಪ್ರದಾಯದಂತೆ ವೇಷಭೂಷಣದಲ್ಲಿ ನಗರದ ಓಂಕಾರೇಶ್ವರ ಸಮೀಪ ಆಗಮಿಸಿ ಶ್ರೀಯನ್ನು ಪೂಜಿಸಿದರು. ಪ್ರತಿಷ್ಠಾಪನೆ ಬಳಿಕ ಸಂಘದ ಅಧ್ಯಕ್ಷ ಆಟೋ ಶಿವಣ್ಣ ನೇತೃತ್ವದಲ್ಲಿ ಪೂಜಾ ಕೈಂಕಾರ್ಯ ಜರುಗಿದವು. ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.ವಿಶೇಷವಾಗಿ ಹಿಂದೂ ಮಹಾಗಣಪತಿ ಮಂಟಪದ ಸುತ್ತಮುತ್ತಲು ಪುರಾತನ ದೇವಾಲಯಗಳಲ್ಲಿ ಕೆತ್ತನೆ ಯಲ್ಲಿರುವಂತೆ ಗಣಪತಿ, ಈಶ್ವರ, ಆಂಜನೇಯ, ನಟರಾಜ, ಉಗ್ರ ನರಸಿಂಹ, ವಾಮನ, ಶ್ರೀರಾಮ, ಗರುಡ, ಮಹಾದೇವ ಮತ್ತು ವಾರಹಾ ದೇವತೆಗಳ ಮೂರ್ತಿಗಳು ನೋಡುಗರರನ್ನು ಸೆಳೆಯುತ್ತಿದ್ದವು.ಯುಜನರು ಮತ್ತು ಮಕ್ಕಳು ಅಪರೂಪದ ರೀತಿಯಲ್ಲಿ ತಯಾರಿಸಿದ ಮೂರ್ತಿಗಳೆದುರು ಸೆಲ್ಫಿ ಕಿಕ್ಕಿಸಿ ಕೊಂಡು ಸಂತೋಷಪಟ್ಟರು. ಅಂದೇ ಸಂಜೆಯೇ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಸಂಗೀತ ವಿದ್ವಾನ್ ಬಿ.ಎಂ. ಸುರೇಶ್ ಗವಾಯಿ ಮತ್ತು ಬಳಗದಿಂದ ನೆರವೇರಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಕೃಷ್ಣ, ಸದಸ್ಯರಾದ ಸಂತೋಷ್ ಕೋಟ್ಯಾನ್, ಎಲ್.ಎಂ. ಶರತ್, ಶ್ಯಾಮ್ ವಿ.ಗೌಡ, ಅಮಿತ್, ಕಿಶೋರ್, ಸುನೀಲ್ ಆಚಾರ್ಯ, ಶಶಿ ಆಲ್ದೂರು, ರಾಜೇಂದ್ರ, ಅಂಕಿತಾ, ಅಕ್ಷತ, ನಯನ್, ಗೌತಮ್, ಆಕಾಶ್ ಇದ್ದರು. 28 ಕೆಸಿಕೆಎಂ 1ಚಿಕ್ಕಮಗಳೂರಿನ ಗೌರಿ ಕಾಲುವೆ ಬಡಾವಣೆಯಲ್ಲಿ ಛಾಯಾಪುತ್ರ ಯುವಕರ ಸಂಘದಿಂದ ಶ್ರೀ ವಿದ್ಯಾಗಣ ಪತಿ ಮೂರ್ತಿಯನ್ನು ಬುಧವಾರ ಸಂಜೆ ಪದಾಧಿಕಾರಿಗಳು, ಭಕ್ತಾಧಿಗಳು ಹಾಗೂ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.