ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಖ್ಯಾತಿ ಪಡೆದಿರುವ ಗವಿಮಠದ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಷ್ಟೆ ಅಲ್ಲದೇ ಸಮಾಜಮುಖಿ ಕಳಕಳಿಯ ಪ್ರತೀಕವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂದರ ಹೇಳಿದರು.
ಈ ಬಾರಿಯ ಮಹಾರಥೋತ್ಸವಕ್ಕೆ ನಮ್ಮ ಜಿಲ್ಲೆಯವರೆ ಆದ ಮೇಘಾಲಯ ರಾಜ್ಯಪಾಲ ಎಚ್.ಸಿ.ವಿಜಯಶಂಕರ್ ಚಾಲನೆ ನೀಡುವ ಮೂಲಕ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನೆರವೇರಿದೆ. ಜಾತ್ರೆಯ ಅಂಗವಾಗಿ ಮಿಠಾಯಿ ಅಂಗಡಿಗಳ ನಾಮಫಲಕಗಳಲ್ಲಿ ಸಾಮಾಜಿಕ ಕಳಕಳಿಯ ಘೋಷ ವಾಕ್ಯ ನಮ್ಮ ಕನ್ನಡನಾಡು ನುಡಿಯ ಅಭಿಮಾನದ ಘೋಷ, ಕನ್ನಡ ಶಾಲೆಗಳ ಅಭಿವೃದ್ಧಿಗೆ ಸಹಕಾರ, ಕಾರ್ಖಾನೆಗಳಿಂದಾಗುವ ಪರಿಸರ ಮಾಲಿನ್ಯ ತಡೆ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಸ್ಮರಣೆ, ಭಯೋತ್ಪಾದನೆ ನಿಗ್ರಹಕ್ಕೆ ಆಪರೇಷನ್ ಸಿಂಧೂರ, ರೈತರ ಬೆಳೆಗೆ ಬೆಂಬಲ ಬೆಲೆ, ದೇಶ ಕಾಯುವ ಯೋಧರ ಸ್ಮರಣೆ, ಇನ್ನೂ ಅನೇಕ ರೀತಿಯ ಘೋಷ ವಾಕ್ಯಗಳು ಮಿಠಾಯಿ ಅಂಗಡಿಗಳ ನಾಮಫಲಕಗಳಲ್ಲಿ ಸಾಮಾಜಿಕ ಬದ್ದತೆ ಎತ್ತಿ ತೋರಿಸಿದ್ದು ಜಾತ್ರೆಗೆ ಭೇಟಿ ನೀಡುವ ಲಕ್ಷಾಂತರ ಭಕ್ತರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಕರವೇ ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಲಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಜಿಲ್ಲಾ ಗೌರವ ಸಲಹೆಗಾರ ಗವಿಸಿದ್ದಪ್ಪ ಹಂಡಿ, ತಾಲೂಕಾಧ್ಯಕ್ಷ ಹುಸೇನಬಾಷಾ ಮಣ್ಣೂರ, ಗೌರವಾಧ್ಯಕ್ಷ ಗವಿಸಿದ್ದಪ್ಪ ಚಕ್ಕಡಿ, ತಾಲೂಕು ಮಹಿಳಾಧ್ಯಕ್ಷೆ ಬೋರಮ್ಮ ತಳಗಡೆ, ಗೌರವಾಧ್ಯಕ್ಷೆ ಶಂಕ್ರಮ್ಮ ಮ್ಯಾಗಳಮನಿ, ಸಾಮಾಜಿಕ ಜಾಲತಾಣ ಸಂಚಾಲಕ ರಮೇಶ ಬೂದಗುಂಪ, ಚನ್ನಮ್ಮ ಆನಂದಳ್ಳಿ, ಗಂಗಯ್ಯ ಚಿಕ್ಕಮಠ, ಶೇಖರ ಈಳಗೇರ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.