ಕೊಪ್ಪಳ: ಗವಿಸಿದ್ದೇಶ್ವರ ಮಹಾರಥೋತ್ಸವ ಪ್ರಯುಕ್ತ ಕನ್ನಡಪ್ರಭ ಸೋಮವಾರ ಹೊರತಂದ "ಗವಿಸಿದ್ದ ವೈಭವ " ವಿಶೇಷ ಪುರವಣಿಯನ್ನು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಗವಿಮಠದ ಐತಿಹ್ಯ ಹಾಗೂ ಗವಿಮಠದ ಪರಂಪರೆಯನ್ನು ಒಳಗೊಂಡ 10 ಪುಟಗಳ ವಿಶೇಷ ಪುರವಣಿಗೆ ಓದುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗವಿಮಠದಲ್ಲಿ ಗವಿಶ್ರೀಗಳು ವಿಶೇಷ ಪುರವಣಿಗೆ ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡಪ್ರಭ ಜಿಲ್ಲಾ ವರದಿಗಾರ ಸೋಮರಡ್ಡಿ ಅಳವಂಡಿ, ಪ್ರಸರಣಾಂಗ ವಿಭಾಗದ ಈಶ್ವರಗೌಡ್ರು ವಿ.ಎಸ್ , ಛಾಯಾಗ್ರಾಯಕ ನಾಬಿರಾಜ ದಸ್ತೇನನವರ ಇದ್ದರು.
ಕನ್ನಡಪ್ರಭದ ವಿಶೇಷ ಪುರವಣಿ ಗವಿಸಿದ್ಧ ವೈಭವವನ್ನು ಗವಿಮಠದ ರಥೋತ್ಸವಕ್ಕೆ ಆಗಮಿಸಿದ ಭಕ್ತಗಣ ಸರದಿಯಲ್ಲಿ ನಿಂತು ಪಡೆದರು. ಗವಿಸಿದ್ಧ ಪರ್ವತವಾದ ಪರುತ ದೇವರು ಶೀರ್ಷಿಕೆ ಹಾಗೂ ಲೇಖನ ಮೆಲುಕು ಹಾಕಿ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಗವಿಮಠ ಸೇರಿದ ಬಗೆ ಹಾಗೂ ಗವಿಮಠದ ಜಾತ್ರೆಯ ವೈಭವ, ಸಾಮಾಜಿಕ ಕಳಕಳಿಯ ಅನಾವರಣದ ಲೇಖನಕ್ಕೆ ಮೆಚ್ಚುಗೆ ವ್ಯಕ್ತವಾದವು.