ಗಾಯತ್ರಿ ತಪೋಭೂಮಿ ಶ್ರದ್ಧಾಕೇಂದ್ರ: ವಿಧುಶೇಖರ ಭಾರತೀ ಸ್ವಾಮೀಜಿ

KannadaprabhaNewsNetwork | Published : Apr 16, 2025 12:33 AM

ಸಾರಾಂಶ

ತಡಸದ ಗಾಯತ್ರಿ ತಪೋಭೂಮಿ ಶ್ರದ್ಧಾ ಕೇಂದ್ರವಾಗಿದೆ. ಇಲ್ಲಿ ಧಾರ್ಮಿಕ ಕಾರ್ಯಗಳ ಅನುಷ್ಠಾನ ಕಾಲಕಾಲಕ್ಕೆ‌ ನಡೆಯುತ್ತಿದೆ. ಸಾಧಾರಣ ಪ್ರದೇಶವಾಗಿದ್ದ ಸ್ಥಳ ಶ್ರೇಷ್ಠ ತಾಣವಾಗಿದೆ.

ಹುಬ್ಬಳ್ಳಿ: ಸನಾತನ ಧರ್ಮದ ಧ್ವಜ ಉತ್ಕೃಷ್ಟವಾದ ಸ್ಥಾನದಲ್ಲಿ ಇರಬೇಕು. ಇದಕ್ಕೆ ಬೇಕಾದ ಪ್ರೇರಣೆ ಎಲ್ಲರಿಗೂ ಪ್ರಾಪ್ತಿ ಆ ಭಗವಂತ ಕಲ್ಪಿಸಬೇಕು ಎಂದು ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಇಲ್ಲಿಯ ತಡಸ ಕ್ರಾಸಿನಲ್ಲಿರುವ ಗಾಯತ್ರಿ ತಪೋಭೂಮಿಯ ರಜತ ಮಹೋತ್ಸವ ಅಂಗವಾಗಿ ಮಂಗಳವಾರ ಶೋಭಾಯಾತ್ರೆ ನಡೆದ ಬಳಿಕ ಆಶೀರ್ವಚನ ನೀಡಿದರು.

ತಡಸದ ಗಾಯತ್ರಿ ತಪೋಭೂಮಿ ಶ್ರದ್ಧಾ ಕೇಂದ್ರವಾಗಿದೆ. ಇಲ್ಲಿ ಧಾರ್ಮಿಕ ಕಾರ್ಯಗಳ ಅನುಷ್ಠಾನ ಕಾಲಕಾಲಕ್ಕೆ‌ ನಡೆಯುತ್ತಿದೆ. ಸಾಧಾರಣ ಪ್ರದೇಶವಾಗಿದ್ದ ಸ್ಥಳ ಶ್ರೇಷ್ಠ ತಾಣವಾಗಿದೆ ಎಂದರು.

ಲೋಕ ಕಲ್ಯಾಣಕ್ಕಾಗಿ ರಜತ ಮಹೋತ್ಸವ ಮಾಡಲಾಗಿದೆ. ಅಮ್ಮನವರ ಆರಾಧನೆ ಶ್ರೀಚಕ್ರಾಚರಣೆ ಮೂಲಕ ಮಾಡಲಾಗುತ್ತದೆ. ಶ್ರೀ ಚಕ್ರ ಪ್ರತಿಷ್ಠಾಪನೆ ಮಾಡುವ ಸಂಕಲ್ಪ ಹಿಂದೆ ಮಾಡಲಾಗಿತ್ತು. ಅದು ಈಗ ನೆರವೇರುತ್ತಿದೆ ಎಂದು ತಿಳಿಸಿದರು.

ಲೋಕದಲ್ಲಿ ಅಜ್ಞಾನ ಹೋಗಲಾಡಿಸಿ ಜ್ಞಾನ ಪ್ರಾಪ್ತಿಯಾಗಲು ದಕ್ಷಿಣಾಮೂರ್ತಿ ಸ್ಥಾಪನೆ ಮಾಡಲಾಗುತ್ತಿದೆ. ಜ್ಞಾನದ ರೂಪವೇ ದಕ್ಷಿಣಾ ಮೂರ್ತಿ ಸ್ವರೂಪವಾಗಿದೆ. ಇದರ ಉಪಾಸನೆ ಮಾಡಿದಾಗ ಮನಸ್ಸಿನಲ್ಲಿರುವ ಗೊಂದಲ ಹೋಗಿ ಆನಂದ ಪ್ರಾಪ್ತಿಯಾಗಲಿದೆ ಎಂದರು.

ಸನಾತನ ರೂಪದ ಭಾಗ ಶಂಕರಮೂರ್ತಿ ಆಚಾರ್ಯರು. ಮೌನ ವ್ಯಾಖ್ಯಾನದಿಂದ ಜ್ಞಾನಿಗಳಿಗೆ ಉಪದೇಶ ಮಾಡುವುದಾಗಿದೆ. ಮೌನ ಬಿಟ್ಟು ಜನರ ಉದ್ದಾರ ಮಾಡಲು ಭಗವಂತ ಶಂಕರಾಚಾರ್ಯರ ರೂಪದಲ್ಲಿ ಬಂದಿದ್ದರು. ಪರಮಾತ್ಮನ ಧ್ಯಾನ ಮಾಡಿ ಉದ್ಧಾರ ಮಾಡಿಕೊಳ್ಳಬೇಕು ಎಂದರು.

ಶ್ರೀಗಳ ಶೋಭಾಯಾತ್ರೆ:

ಗಾಯತ್ರಿ ತಪೋವನ ಮುಖ್ಯ ದ್ವಾರದಿಂದ ದೇವಸ್ಥಾನ ವರೆಗೆ ಸಕಲ ವಾದ್ಯ ಮೇಳದೊಂದಿಗೆ ಶ್ರೀಗಳ ಶೋಭಾಯಾತ್ರೆ ನಡೆಯಿತು. ನೂರಾರು ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಶ್ರೀಗಳ ತೆರೆದ ವಾಹನದಲ್ಲಿ ಇರಿಸಲಾಗಿದ್ದ ಪಲ್ಲಕ್ಕಿಯಲ್ಲಿ ಅದ್ಧೂರಿಯಾಗಿ ಕರೆತರಲಾಯಿತು. ಮಹಿಳೆಯರು ಶ್ರೀಗಳ ಪಾದ ಪೂಜೆ, ಆರತಿ ಮಾಡುವ ಮೂಲಕ ಬರಮಾಡಿಕೊಂಡರು.

ಹತ್ಯೆಯಾದ ಬಾಲಕಿಯ ಪಾಲಕರಿಗೆ ಶೆಟ್ಟರ್‌ ಸಾಂತ್ವನ

ಹುಬ್ಬಳ್ಳಿ: ಹತ್ಯೆಗೀಡಾದ ಬಾಲಕಿ ಆದ್ಯಾ ಕುರಿ ಮನೆಗೆ ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್‌ ಮಂಗಳವಾರ ಭೇಟಿ ನೀಡಿ, ಬಾಲಕಿಯ ತಂದೆ, ತಾಯಿಗೆ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಲಕಿ‌ ಮೇಲೆ ದೌರ್ಜನ್ಯ ನಡೆಸಿ, ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಜನರ ಮನಸ್ಸನ್ನು ತುಂಬಾ ಘಾಸಿಗೊಳಿಸಿದೆ. ಇದು ಅತ್ಯಂತ ರಾಕ್ಷಸಿ‌ ಕೃತ್ಯ. ಈ ರೀತಿ‌ ಪ್ರಕರಣ ನಡೆಯಬಾರದಿತ್ತು. ಈ‌ ಬಗ್ಗೆ ಅಧಿಕಾರಿಗಳ ಜತೆಗೂ ನಾನು ಮಾತನಾಡಿದ್ದೇನೆ. ಪೊಲೀಸರು‌ ಈ‌ ಬಗ್ಗೆ‌ ಶೀಘ್ರವೇ ಕ್ರಮ‌ಕೈಗೊಂಡಿದ್ದಾರೆ. ಪೊಲೀಸ್‌ ಇಲಾಖೆ ನ್ಯಾಯ ಕೊಡಿಸಿದೆ. ಇದು ಅತ್ಯಂತ ಶ್ಲಾಘನೀಯ. ಮಹಿಳಾ ಪಿಎಸ್ಐ ಕಾರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಎಂದರು.

ಈ ವೇಳೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಸಿದ್ದು ಮೊಗಲಿಶೆಟ್ಟರ್‌, ಸಂತೋಷ ಚವ್ಹಾಣ ಸೇರಿದಂತೆ ಹಲವರಿದ್ದರು.

Share this article