ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಕುರಿತು ಮಾಹಿತಿ ನೀಡಿರುವ ಜಿಬಿಎ ಕಂದಾಯ ವಿಭಾಗದ ಹೆಚ್ಚುವರಿ ಆಯುಕ್ತ ಮುನೀಶ್ ಮೌದ್ಗಿಲ್, ಬಾಕಿ ಉಳಿಸಿಕೊಂಡವರಿಗೆ ಹಲವು ಬಾರಿ ನೋಟಿಸ್ ನೀಡಲಾಗಿದೆ. ತೆರಿಗೆ ಪಾವತಿಸದ ಕಾರಣ ಸಾರ್ವಜನಿಕ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಹರಾಜಿನಲ್ಲೂ ಅಂತಹ ಆಸ್ತಿಗಳನ್ನು ಯಾರೂ ಖರೀದಿಸದ ಕಾರಣ ಕೊನೆಯ ಕ್ರಮವಾಗಿ ಜಿಬಿಎನಿಂದಲೇ ಆ ಆಸ್ತಿಯನ್ನು ಮೂಲ ಬೆಲೆಗೆ ಖರೀದಿಸಲಾಗುತ್ತದೆ ಎಂದು ಹೇಳಿದ್ದಾರೆ.
ಆಸ್ತಿಯನ್ನು ಜಿಬಿಎ ಖರೀದಿಸಿದ ಬಳಿಕ ಮಾಲೀಕರಿಂದ ಬಾಕಿ ಇರುವ ತೆರಿಗೆ, ದಂಡ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಪಾವತಿಸಿಕೊಳ್ಳಲಾಗುತ್ತದೆ. ಉಳಿಕೆ ಹಣವನ್ನು ಸಂಬಂಧಪಟ್ಟ ಆಸ್ತಿ ಮಾಲೀಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯ ನಂತರ ಆಸ್ತಿಯು ಸಂಪೂರ್ಣವಾಗಿ ಪಾಲಿಕೆಯ ವಶಕ್ಕೆ ಸೇರಲಿದ್ದು, ದಾಖಲೆಗಳಲ್ಲಿ ಮಾಲೀಕತ್ವ ಬದಲಾಗಲಿದೆ. ಜಿಬಿಎ ಹೆಸರಿಗೆ ಖಾತಾ ವರ್ಗಾವಣೆಯಾಗಲಿದೆ ಎಂದು ಮುನೀಶ್ ತಿಳಿಸಿದ್ದಾರೆ.ಇನ್ನೂ 1 ತಿಂಗಳು ಸಮಯಾವಕಾಶ
- ಆಸ್ತಿ ಸುಸ್ತಿದಾರರ ವಿರುದ್ಧ ಜಿಬಿಎ ಕೊನೆಯ ಅಸ್ತ್ರ: ಹೆಚ್ಚುವರಿ ಆಯುಕ್ತ- ಆಸ್ತಿ ಖರೀದಿಸಿ ಬಾಕಿ ಇಟ್ಟುಕೊಂಡು ಉಳಿಕೆ ಹಣ ಮಾಲೀಕರ ಖಾತೆಗೆ- ಸುಸ್ತಿದಾರರಿಗೆ ನೋಟಿಸ್ ನೀಡಿದರೂ ತೆರಿಗೆ ಕಟ್ಟದ ಕಾರಣ ಹರಾಜು ಪ್ರಕ್ರಿಯೆ ನಡೆಸಲಾಗಿದೆ- ಹರಾಜಲ್ಲೂ ಯಾರೂ ಅಂತ ಆಸ್ತಿ ಖರೀದಿಸದ ಕಾರಣ ಜಿಬಿಎನಿಂದಲೇ ಖರೀದಿಗೆ ನಿರ್ಧಾರ- ಖರೀದಿಗೆ ಮುನ್ನ ಸುಸ್ತಿದಾರರಿಗೆ ತೆರಿಗೆ ಪಾವತಿಗೆ ಇನ್ನೂ 1 ತಿಂಗಳ ಅವಕಾಶ ನೀಡಲಾಗುತ್ತಿದೆ- ಈ ವೇಳೆ ಬಡ್ಡಿ ಸಹಿತ ಬಾಕಿ ಪಾವತಿಸಿದರೆ ಅಂತಹ ಆಸ್ತಿಗಳನ್ನು ಖರೀದಿ ಮಾಡುವುದಿಲ್ಲ