ಮಡಿಕೇರಿ : ಬಹುಸಂಖ್ಯಾತರ ರಾಜ್ಯಾಧಿಕಾರದ ವ್ಯಾಪ್ತಿಯಲ್ಲಿ ಕಾಂಪ್ಯಾಕ್ಟ್ ಭೂಪ್ರದೇಶದಲ್ಲಿ ವಾಸಿಸುವ ಸಣ್ಣ ಆದಿಮಸಂಜಾತ ಸಮುದಾಯಗಳಿಗೆ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತವು ಸಹಜ ಹಕ್ಕಾಗಿದೆ. ವಿಶ್ವಸಂಸ್ಥೆಯ ಆದಿಮಸಂಜಾತರ ಹಕ್ಕುಗಳ ಘೋಷಣೆ ಹಾಗೂ ಭಾರತದ ಸಂವಿಧಾನದ ಆಶಯಗಳ ಆಧಾರದಲ್ಲಿ ಕೊಡವಲ್ಯಾಂಡ್ ಸ್ವಾಯತ್ತತೆಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.
ಪ್ರಮಾಣವಚನ: ಮಾನವ ಸರಪಳಿಯಲ್ಲಿ ಪಾಲ್ಗೊಂಡವರು ಗುರು-ಕಾರೋಣ, ಸೂರ್ಯ-ಚಂದ್ರ, ಭೂತಾಯಿ, ವನದೇವಿ, ಜಲದೇವಿ ಕಾವೇರಿ ಹಾಗೂ ಭಾರತದ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಗೀತೆ ‘ಜನಗಣಮನ’ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಚೋಳಪಂಡ ಜ್ಯೋತಿ ನಾಣಯ್ಯ, ಚೋಳಪಂಡ ತಾಜಾ ಕಾಳಯ್ಯ, ಅಡಿಕೆರೆ ಶಾಂತಿ ಜಯ, ಪುತ್ತರೀರ ಸೀತಮ್ಮ, ಪುತ್ತರೀರ ಲತಾ ಜೋಯಪ್ಪ, ಪಟ್ಟಮಡ ಲಲಿತಾ, ಮುಲ್ಲಂಡ ಮಾಯಮ್ಮ, ಕೊಂಗೇಟಿರ ವಾಣಿ ಕಾಳಪ್ಪ, ಕೊಂಗೇಟಿರ ವೀಣಾ ಅಪ್ಪಣ್ಣ, ಕೊಂಗೇಟಿರ ಮೀರಾ ಚಂಗಪ್ಪ, ನಂದಿನೆರವಂಡ ಪಾರ್ವತಿ, ಪೊರಿಮಂಡ ದಿನಮಣಿ ಪೂವಯ್ಯ, ಚೋಳಪಂಡ ನಾಣಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಸ್ವಾಗತಿಸಿದರು. ನೂರೂಕ್ಕನಾಡ್ ತಕ್ಕ ಪೊರಿಮಂಡ ದಿನಮಣಿ ಪೂವಯ್ಯ ವಂದಿಸಿದರು.ಸಿಎನ್‌ಸಿ ವತಿಯಿಂದ ಕೊಡವ ಪ್ರದೇಶದಾದ್ಯಂತ ನಡೆಸುತ್ತಿರುವ ಜಾಗೃತಿ ಅಭಿಯಾನದ ಮುಂದಿನ ಕಾರ್ಯಕ್ರಮ ಅ. 1ರಂದು ಸಿದ್ಧಾಪುರದಲ್ಲಿ ಹಾಗೂ ಅ.5ರಂದು ಚೆರಂಬಾಣೆಯಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.