ಲ್ಯಾಪ್ ಟಾಪ್ ಪಡೆದು ಸದ್ಬಳಕೆ ಮಾಡಿಕೊಳ್ಳಿ

KannadaprabhaNewsNetwork |  
Published : Feb 20, 2024, 01:46 AM IST
19ಸಿಎಚ್‌ಎನ್‌52ಹನೂರು ಪಟ್ಟಣದಲ್ಲಿ ಕಟ್ಟಡ ಕಾರ್ಮಿಕ ರ ಹಾಗೂ ಇತರೆ ಮಕ್ಕಳ ವಿದ್ಯಾರ್ಥಿಗಳಿಗೆ ಶಾಸಕ ಎಂಆರ್ ಮಂಜುನಾಥ್ ಲ್ಯಾಪ್ ಟಾಪ್ ವಿತರಿಸಿದರು. | Kannada Prabha

ಸಾರಾಂಶ

ಸ್ಪರ್ಧಾತ್ಮಕವಾಗಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಉತ್ತಮ ವ್ಯಾಸಂಗ ಮಾಡುವ ಮೂಲಕ ಸರ್ಕಾರದಿಂದ ನೀಡುತ್ತಿರುವ ಲ್ಯಾಪ್ ಟಾಪ್ ಪಡೆದು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಎಂ.ಆರ್ ಮಂಜುನಾಥ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು ಸ್ಪರ್ಧಾತ್ಮಕವಾಗಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಉತ್ತಮ ವ್ಯಾಸಂಗ ಮಾಡುವ ಮೂಲಕ ಸರ್ಕಾರದಿಂದ ನೀಡುತ್ತಿರುವ ಲ್ಯಾಪ್ ಟಾಪ್ ಪಡೆದು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಎಂ.ಆರ್ ಮಂಜುನಾಥ್ ಸಲಹೆ ನೀಡಿದರು.ಪಟ್ಟಣದ ಪಶು ಆಸ್ಪತ್ರೆ ಇಲಾಖೆಯ ಸಭಾಂಗಣದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೊಂದಾಯಿತ ಅರ್ಹ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಿ ಮಾತನಾಡಿದರು. .ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್ ನೀಡಿ ಮಾತನಾಡಿದ ಶಾಸಕ ಕಾರ್ಮಿಕರ ಮಕ್ಕಳು ಇನ್ನೂಳಿದ ಮಕ್ಕಳಿಗೆ ಕಡಿಮೆಯಿಲ್ಲದಂತೆ ಬೆಳವಣಿಗೆ ಕಾಣುತ್ತಿರುವುದು ಬಹಳ ಉತ್ತಮ. ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ನಿಮಗೆ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಡೆದು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಉಜ್ವಲವಾದ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳುವಂತೆ ತಿಳಿಸಿದರು.ಜಿಲ್ಲಾ ಕಾರ್ಮಿಕ ಅಧಿಕಾರಿ ಸವಿತಾ ಮಾತನಾಡಿ, ಜಿಲ್ಲೆಯಲ್ಲಿ 2600 ಅರ್ಜಿ ಬಂದಿದ್ದು ಸರ್ಕಾರವು ಚಾಮರಾಜನಗರ ಜಿಲ್ಲೆಗೆ 200 ಲ್ಯಾಪ್ಟಾಪ್ ಗಳನ್ನು ನೀಡಿದ್ದು ಜಿಲ್ಲೆಯ 5 ತಾಲೂಕಿಗೆ ಸಮಾನಾಗಿ ಹಂಚಿಲಾಗಿದೆ. ಅದರಲ್ಲಿ ಹನೂರು ತಾಲೂಕಿನಲ್ಲಿ 40 ಜನರಿಗೆ ನೀಡಿದ್ದು 20 ಪ್ರಥಮ ಪಿಯುಸಿ ಮಕ್ಕಳಿಗೆ 20 ದ್ವಿತೀಯ ಪಿಯುಸಿ ಅರ್ಹ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ ಹಾಗೂ ಸರ್ಕಾರವು ಕಟ್ಟಡ ಕಾರ್ಮಿಕ ಮಕ್ಕಳಿಗೆ ಉಪಯೋಗವಾಗಲೆಂದು ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಕಾಧಿಕಾರಿ ಉಮೇಶ, ಹನೂರು ವೃತ್ತ ಕಾರ್ಮಿಕ ನಿರೀಕ್ಷಕ ಪ್ರಸಾದ್, ಮಕ್ಕಳು ಪೋಷಕರು ,ಕಾರ್ಮಿಕರು ಹಾಗೂ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!