ಅಂಚೆ ವಿಮೆಯನ್ನು ಮಾಡಿಸಿ ಕಷ್ಟಕಾಲದಲ್ಲಿ ಬಳಸಿ

KannadaprabhaNewsNetwork |  
Published : Mar 22, 2025, 02:01 AM IST
24ಕೆಜಿಎಫ್‌4 | Kannada Prabha

ಸಾರಾಂಶ

ದೇಶದ ಅತ್ಯಂತ ಹಳೆಯ ವಿಮಾ ಸಂಸ್ಥೆಗಳಲ್ಲಿ ಒಂದಾದ ಅಂಚೆ ಜೀವ ವಿಮೆಯು ೧೮೮೪ ರಲ್ಲಿ ಪ್ರಾರಂಭವಾದ ವಿಮಾ ಯೋಜನೆಯಾಗಿದೆ. ಈ ಯೋಜನೆಯು ಈಗ ಭಾರತ ಸರ್ಕಾರದ ಅಂಚೆ ಇಲಾಖೆಯ ಅಡಿಯಲ್ಲಿ ಬರುತ್ತದೆ. ವೆಚ್ಚ-ಪರಿಣಾಮಕಾರಿತ್ವಕ್ಕೆ ಹೆಸರುವಾಸಿಯಾದ ಈ ವಿಮಾ ಉತ್ಪನ್ನವು ಕಡಿಮೆ ಪ್ರೀಮಿಯಂಗಳಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಪ್ರೀತಿಪಾತ್ರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ಅನೇಕರಿಗೆ ಆದ್ಯತೆಯಾಗಿದೆ ಮತ್ತು ಜೀವ ವಿಮೆಯು ಅದನ್ನು ಖಚಿತಪಡಿಸಿಕೊಳ್ಳಲು ಒಂದು ಪರಿಣಾಮಕಾರಿ ಸಾಧನವಾಗಿದೆ ಎಂದು ೩ನೇ ಜಿಲ್ಲಾ ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ ಹೇಳಿದರು.

ನಗರದ ನ್ಯಾಯಾಲಯ ಸಂಕೀರ್ಣದ ಆವರಣದ ಕುಸುಮಾ ರಾಮಕೃಷ್ಣ ಶೆಟ್ಟಿ ಸಭಾಂಗಣದಲ್ಲಿ ಅಂಚೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂಚೆ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಡಿಮೆ ಪ್ರೀಮಿಯಂ, ಹೆಚ್ಚು ಲಾಭ

ದೇಶದ ಅತ್ಯಂತ ಹಳೆಯ ವಿಮಾ ಸಂಸ್ಥೆಗಳಲ್ಲಿ ಒಂದಾದ ಅಂಚೆ ಜೀವ ವಿಮೆಯು ೧೮೮೪ ರಲ್ಲಿ ಪ್ರಾರಂಭವಾದ ವಿಮಾ ಯೋಜನೆಯಾಗಿದೆ. ಈ ಯೋಜನೆಯು ಈಗ ಭಾರತ ಸರ್ಕಾರದ ಅಂಚೆ ಇಲಾಖೆಯ ಅಡಿಯಲ್ಲಿ ಬರುತ್ತದೆ. ವೆಚ್ಚ-ಪರಿಣಾಮಕಾರಿತ್ವಕ್ಕೆ ಹೆಸರುವಾಸಿಯಾದ ಈ ವಿಮಾ ಉತ್ಪನ್ನವು ಕಡಿಮೆ ಪ್ರೀಮಿಯಂಗಳಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ ಎಂದರು.ಆರಂಭದಲ್ಲಿ ಅಂಚೆ ಸೇವೆಯ ಉದ್ಯೋಗಿಗಳಿಗೆ ವಿಮಾ ಯೋಜನೆಯಾಗಿ ಪರಿಚಯಿಸಲಾದ ಪಿಎಲ್‌ಐ ಯೋಜನೆಯನ್ನು ಈಗ ಕೇಂದ್ರ, ರಾಜ್ಯ ಸರ್ಕಾರಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳ ಉದ್ಯೋಗಿಗಳು ಮತ್ತು ಸಾರ್ವಜನಿಕರೆಲ್ಲರಿಗೂ ವಿಸ್ತರಿಸಿದ್ದು ಯಾರು ಬೇಕಾದರೂ ಅಂಚೆ ಜೀವ ವಿಮೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು. ಹಿರಿಯ ನ್ಯಾಯಾಧೀಶ ಮುಜಫರ್ ಎಂ ಮಾಂಝರಿ ಮಾತನಾಡಿ, ಹೆಣ್ಣು ಮಕ್ಕಳಿಗಾಗಿಯೇ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದು, ಹೆಣ್ಣು ಮಗು ಹುಟ್ಟಿದಾಗಿನಿಂದ ಇಂತಿಷ್ಟು ವರ್ಷಗಳು ನಿಗದಿತ ಪ್ರೀಮಿಯಂನ್ನು ಪಾವತಿಸಿದಲ್ಲಿ ಮಗುವಿಗೆ ೧೮ ವರ್ಷಗಳಾದ ಬಳಿಕ ಬೃಹತ್ ಮೊತ್ತದ ಹಣವು ವಾಪಸ್ಸಾಗುವುದರಿಂದ ಆ ಮಗುವಿನ ಶಿಕ್ಷಣಕ್ಕಾಗಿ ಇಲ್ಲವೇ ಮದುವೆ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬಹುದಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ಭಾರತೀಯ ಅಂಚೆ ಜೀವ ವಿಮೆಯು ಗರಿಷ್ಟ ೫೦ ಲಕ್ಷದವರೆಗಿನ ವಿಮಾ ಮೊತ್ತವನ್ನು ಒದಗಿಸುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ೮೮ ರ ಅಡಿಯಲ್ಲಿ ತೆರಿಗೆ ವಿನಾಯಿತಿಗಳನ್ನು ನೀಡಲಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ನದಾಫ್, ವಿನೋದ್‌ಕುಮಾರ್, ಮಂಜು, ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ಹಿರಿಯ ವಕೀಲರಾದ ಶ್ರೀನಾಥ್, ಕೆ.ಸಿ.ನಾಗರಾಜ್ ಸೇರಿದಂತೆ ಇನ್ನಿತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ