ಕನ್ನಡಪ್ರಭ ವಾರ್ತೆ ಮಂಡ್ಯ
ಬಳಿಕ ಮಾತನಾಡಿದ ಮಾಜಿ ಶಾಸಕ ಅಶ್ವಥ್ ನಾರಾಯಣ್, ಈಗ ನಗರಸಭೆಯಲ್ಲಿ ಎನ್‌ಡಿಎ ಮೈತ್ರಿ ಆಡಳಿತ ಅಧಿಕಾರಕ್ಕೆ ಬಂದಿದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಅಧಿಕಾರ ಹಿಡಿಯಲಾಗಿದೆ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಜೆಪಿಯ ಅರುಣ್‌ಕುಮಾರ್ ಅವರು ನಗರಸಭೆ ಸದಸ್ಯರಾಗಲು ಎಚ್.ಆರ್.ಅರವಿಂದ್ ಪಾತ್ರ ದೊಡ್ಡದು ಎಂದು ಸ್ಮರಿಸಿದರು.
ಅಂದು ನಗರಸಭಾ ಚುನಾವಣೆ ವೇಳೆ ಬಿಜೆಪಿ ನಗರಾಧ್ಯಕ್ಷರಾಗಿದ್ದ ಎಚ್.ಆರ್.ಅರವಿಂದ್ ಅವರು ನಗರವ್ಯಾಪ್ತಿಯ ಎಲ್ಲಾ ವಾರ್ಡ್‌ಗೆ ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸಲು ಶ್ರಮಪಟ್ಟು, ಬಿ-ಫಾರಂಗಾಗಿ ದೊಡ್ಡ ಹೋರಾಟವನ್ನೇ ಮಾಡಿದ್ದರ ಫಲವಾಗಿ ಇಂದು ಮೈತ್ರಿ ಆಡಳಿತದಲ್ಲಿ ಅರುಣ್‌ಕುಮಾರ್ ಉಪಾಧ್ಯಕ್ಷರಾಗಿದ್ದಾರೆ ಎಂದು ನುಡಿದರು.ಮಂಡ್ಯ ಸಂಸದರಾದ ಕುಮಾರಣ್ಣ ಅವರು ಕೇಂದ್ರ ಸರ್ಕಾರದ ಸಂಪುಟ ಸಚಿರಾಗಿರುವುದರಿಂದ ಹೆಚ್ಚಿನ ಅನುದಾನ, ಯೋಜನೆಗಳನ್ನು ನಗರಸಭೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳಬಹುದು, ಹೆಚ್ಚಿನ ಅನುದಾನ ತರಿಸಿಕೊಳ್ಳುವ ವ್ಯವಧಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಮುಂದಿನ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆ ಬರಲಿದೆ, ಬಿಜೆಪಿ-ಜೆಡಿಎಸ್ ಮೈತ್ರಿಯೊಂದಿಗೆ ಚುನಾವಣೆ ಎದುರಿಸುತ್ತೇವೆ. ಉತ್ತಮ ಆಡಳಿತ ನೀಡುವ ಎಲ್ಲಾ ಅಭ್ಯರ್ಥಿಗಳು ಒಮ್ಮತದಿಂದ ಗೆಲ್ಲಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್, ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಸಂತ್ ಕುಮಾರ್, ಮಾಜಿನಗರ ಸಭಾ ಸದಸ್ಯ ಚಂದ್ರ ಪ್ರಸನ್ನ ಬಿಜೆಪಿ ಯುವ ಮುಖಂಡ ಶ್ರೀನಿವಾಸ್, ಕೇಶವ್, ಯೋಗೇಶ್ , ನಂದೀಶ್ ಮತ್ತಿತರರಿದಿದ್ದರು.