ಮೂಢನಂಬಿಕೆಯಿಂದ ಹೊರಬಂದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ: ಡಾ. ಯಮನೂರಪ್ಪ

KannadaprabhaNewsNetwork |  
Published : Nov 11, 2024, 01:03 AM IST
ಪೋಟೊ10ಕೆಎಸಟಿ5: ಕುಷ್ಟಗಿ ತಾಲೂಕಿನ ಕಳಮಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು. 10ಕೆಎಸಟಿ5ಎ: ಕುಷ್ಟಗಿ ತಾಲೂಕಿನ ಕಳಮಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಮೂಢನಂಬಿಕೆ, ಮೌಢ್ಯತೆಯಿಂದ ಹೊರಬಂದು ಮಕ್ಕಳಿಗೆ ಶಿಕ್ಷಣ ನೀಡಬೇಕು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಮೂಢನಂಬಿಕೆ, ಮೌಢ್ಯತೆಯಿಂದ ಹೊರಬಂದು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಉಪನ್ಯಾಸಕ ಡಾ. ಯಮನೂರಪ್ಪ ಹೊನಗಡ್ಡಿ ಹೇಳಿದರು.

ತಾಲೂಕಿನ ಕಳಮಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಮಾಯಣ ಮಹಾನ್ ಗ್ರಂಥ ರಚಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ಮಕ್ಕಳಿಗೆ ಸಮರ್ಪಕವಾದ ಶಿಕ್ಷಣ ನೀಡಬೇಕು. ಆ ಮೂಲಕ ಉತ್ತಮ ಜೀವನ ನಡೆಸಬೇಕು. ರಾಮಾಯಣವನ್ನು ಮಕ್ಕಳಿಗೆ ಕಲಿಸಬೇಕು. ತಾಯಿಯೇ ಮೊದಲು ಗುರು, ಮಕ್ಕಳಿಗೆ ಮಾನವಿ ಮೌಲ್ಯಗಳನ್ನು ಕಲಿಸಬೇಕು ಎಂದರು.

ಪ್ರಮುಖ ರಂಗಪ್ಪ ನಾಯಕ ಮಾತನಾಡಿ, ಬ್ಯಾಡರ ಹಟ್ಟಿಯಲ್ಲಿ ಬೇನೆ ಕಳೆಯುವ ಔಷಧಿ ಇದೆ, ಬ್ಯಾಡರ ಸುಗ್ಗಿ ಬೇಲಿ ಮ್ಯಾಲೆ ಎನ್ನುವ ಗಾದೆ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಪ್ರಪಂಚದ ಮೊದಲನೇ ವಿಶ್ವವಿದ್ಯಾಲಯ ಸ್ಥಾಪಿಸಿದವರು ಎಂದರೆ ವಾಲ್ಮೀಕಿ ಮಹರ್ಷಿಗಳು ಎಂದರೆ ತಪ್ಪಗಲಾರದು ಎಂದರು.

ಕಿಲ್ಲಾರಹಟ್ಟಿ ಗ್ರಾಪಂ ಅಧ್ಯಕ್ಷ ಶರಣಗೌಡ ಪೊಲೀಸ್ ಪಾಟೀಲ್, ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮಿಗಳು, ಹುಲಿಹೈದರನ ವಾಲ್ಮೀಕಿ ಸಮಾಜದ ಗುರು ರಾಜಾ ನವಿನಚಂದ್ರ ನಾಯಕ, ಉಪ್ಪಿನಾಳ ವಾಲ್ಮೀಕಿ ಆಶ್ರಮದ ಆತ್ಮನಂದ ಸ್ವಾಮಿಗಳು, ಸಾಹಿತಿ ಆರ್.ಕೆ. ಸುಬೇದಾರ, ವಾಲ್ಮೀಕಿ ಸಮಾಜದ ತಾಲೂಕಾ ಅಧ್ಯಕ್ಷ ಮಾನಪ್ಪ ತಳವಾರ, ದೊಡ್ಡಬಸನಗೌಡ ಪಾಟೀಲ್ ಮಾತನಾಡಿದರು.

ಈ ಸಂದರ್ಭ ಗರ್ಜನಾಳದ ಯಮನೂರಪ್ಪ ತಾತಾನವರು, ಹನಮೇಶ ನಾಯಕ, ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ಡಾ. ಕೆ.ಎನ್. ಪಾಟೀಲ್, ರಾಜಣ್ಣ ನಂದಾಪೂರ, ಅಯ್ಯಪ್ಪ ಹವಾಲ್ದಾರ್, ಹನುಮಗೌಡ ಕಿಲ್ಲಾರಹಟ್ಟಿ, ಪ್ರಕಾಶಗೌಡ ಬೇದವಟ್ಟಿ, ಶರಣಪ್ಪ ವಾಲಿಕಾರ, ಕನಕನಗೌಡ ಜೂಲಕುಂಟಿ, ಉಮೇಶ, ಕಳಮಳ್ಳೆಪ್ಪ, ಪರಶುರಾಮ ನಾಯಕ, ದುರಗೇಶ ಇದ್ಲಾಪೂರು, ಶರಣಪ್ಪ ಸಾಸ್ವಿಹಾಳ, ಶಿವಮೂರ್ತಿಗೌಡ ಮುಕ್ತರಾಂಪೂರು, ಛತ್ರಪ್ಪ ಕಾಟಿಗಲ್, ಹನುಮಂತರಾಯ ಕಾಟಿಗಲ್ ಸೇರಿದಂತೆ ಕಳಮಳ್ಳಿ ಗ್ರಾಮದ ಗುರು, ಹಿರಿಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಪಾಲ್ಗೊಂಡಿದ್ದರು. ಶಿಕ್ಷಕಿ ಮೊನಮ್ಮ ವಾಲ್ಮೀಕಿ ಸ್ವಾಗತಿಸಿ, ಶರಣಪ್ಪ ಮಾಟೂರು ನಿರೂಪಿಸಿದರು.

ಭಾವಚಿತ್ರದ ಮೆರವಣಿಗೆ:ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ಮಂಗಳ ವಾದ್ಯಗಳೊಂದಿಗೆ ಅದ್ಧೂರಿಯಾಗಿ ನಡೆಯಿತು. ಮಹಿಳೆಯರು ಹಾಗೂ ಮಕ್ಕಳು ಕಳಶ ಹಿಡಿದು ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ