ಕಾಡುಗೊಲ್ಲ ಅಭಿವೃದ್ಧಿ ನಿಗಮದ ಸೌಲಭ್ಯ ಪಡೆಯಿರಿ

KannadaprabhaNewsNetwork |  
Published : Oct 14, 2025, 01:00 AM IST
ಪೊಟೋ 13ಪಿವಿಡಿ3ಪೊಟೋ 13ಪಿವಿಡಿ4ಪಾವಗಡ,ತಾಲೂಕಿ ಜೂಲಪ್ಪಯ್ಯನ ಹಟ್ಟಿಗೆ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್ ಭೇಟಿ ನೀಡಿದರು. | Kannada Prabha

ಸಾರಾಂಶ

ತಾಲೂಕಿನ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸರ್ಕಾರದಿಂದ ನೀಡುವ ವಿವಿಧ ಸಾಲ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸಿ ಎಂದು ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಹಾರೋಗೆರೆ ಮಹೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸರ್ಕಾರದಿಂದ ನೀಡುವ ವಿವಿಧ ಸಾಲ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸಿ ಎಂದು ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಹಾರೋಗೆರೆ ಮಹೇಶ್ ಹೇಳಿದರು.ತಾಲೂಕಿನ ಜೂಲಪ್ಪನ ಹಟ್ಟಿ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯದ ಸಾಂಪ್ರದಾಯಿಕ ಹಾಲೊಯ್ಯುವ ಹಬ್ಬದಲ್ಲಿ ಭಾಗವಹಿಸಿ ಕಾಳಿನಾಗಮ್ಮ, ಕರಿಯಮ್ಮ ಹಾಗೂ ಜುಂಜಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.ಈ ವೇಳೆ ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರಕ್ಕೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಕಾಡುಗೊಲ್ಲ ಸಮುದಾಯದ ಪ್ರಗತಿಗೆ ಹಾಗೂ ಜನರ ಸೇವೆಗೆ ಬದ್ಧರಾಗುವ ಭರವಸೆ ವ್ಯಕ್ತಪಡಿಸಿದರು.

ಅಲ್ಲದೆ ರಾಜ್ಯ ಸರ್ಕಾರ ಕಾಡುಗುಲ್ಲರ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸ್ವಾವಲಂಬಿ ಸಾರಥಿ, ನೇರ ಸಾಲ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಸಾಲ ಸೌಲಭ್ಯಕ್ಕಾಗಿ ಸಕಾಲದಲ್ಲಿ ಅರ್ಜಿಗಳನ್ನು ಸಲ್ಲಿಸಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಹಿರಿಯ ಮುಖಂಡರಾದ ಜಿ.ಎನ್‌.ಬಲರಾಮರೆಡ್ಡಿ, ಮೈಲಾರರೆಡ್ಡಿ, ಗಂಗಣ್ಣ ತರೂರು, ಉಗ್ರಪ್ಪ ಚಿಕ್ಕದಾಸರಹಳ್ಳಿ, ಹಿರೇಗೌಡದರು ಮೈಲನಹಟ್ಟಿ, ಗಂಗಾಧರ್, ನಾಗರಾಜು ಬಂದ್ಕುಂಟೆ , ರವಿಚಂದ್ರ ಗೊಲ್ಲರಹಳ್ಳಿ, ಗೌಡರಂಗಪ್ಪ, ಗ್ರಾಪಂ. ಸದಸ್ಯರಾದ. ಶಿವಕುಮಾರ್, ವಸಂತಮ್ಮ, ಹಾಗೂ ದೇವಸ್ಥಾನದ ಗೌಡರಾದ ಚಿಕ್ಕರಂಗಪ್ಪ, ಯಜಮಾನ, ಬೋರಪ್ಪ, ಈರಣ್ಣ, ಪೂಜಾರಿ ಈರಣ್ಣ, ಪೂಜಾರಿ ಸಿದ್ದಪ್ಪ, ತೇಜು ಯಾದವ್ ಸೇರಿದಂತೆ ಗ್ರಾಮದ ಹಿರಿಯರು, ಮತ್ತು ಕಾಡುಗೊಲ್ಲ ಸಮುದಾಯದ ಬಂಧುಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು