ಹಾವೇರಿ: ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎಫ್.ಎನ್ ಗಾಜಿಗೌಡ್ರ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಸಮಾಜ ಸೇವಕ ಎಂ.ಎಸ್. ಕೋರಿಶೆಟ್ಟರ್ ಮಾತನಾಡಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿರುವ ರಾಜ್ಯ ಸರ್ಕಾರ ಉತ್ತಮ ವ್ಯಕ್ತಿಗೆ ಗೌರವ ನೀಡಿದೆ. ದಶಕಗಳ ಕಾಲ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಗಾಜಿಗೌಡ್ರ ಹಾವೇರಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವರು ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ನಾಗರಾಜ ಎಲ್., ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮ ಅಡಕಿ, ಮುಖಂಡರಾದ ಮಾದೇಗೌಡ ಗಾಜಿಗೌಡ್ರ, ಡಾ.ಸಂಜಯ ಡಾಂಗೆ, ಈರಪ್ಪ ಲಮಾಣಿ, ಅಬ್ದುಲ್ಲ ಹುಬ್ಬಳ್ಳಿ, ಖಲೀಲ್ ಪಟವೇಗಾರ, ಆರ್.ಸಿ. ಹಿರೇಮಠ, ಶ್ರೀಧರ ದೊಡ್ಡಮನಿ, ನೀಲಪ್ಪ ಹುಲಗಮ್ಮನವರ, ಶಂಕರ ಮಕರಬ್ಬಿ, ಬೀರಪ್ಪ ಕರಿಗೌಡ್ರ ಹಾಗೂ ಕಾಂಗ್ರೆಸ್ ಪಕ್ಷದ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ನಗರಸಭೆ ಸದಸ್ಯರು ಇದ್ದರು.