ಮಾಗಡಿ: ಪಟ್ಟಣದ ಐತಿಹಾಸಿಕ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವರಿಗೆ 1.30 ಕೋಟಿ ಮೌಲ್ಯದ ಚಿನ್ನಾಭರಣವನ್ನು ದೇವಸ್ಥಾನದ ಅರ್ಚಕರ ಕುಟುಂಬದಿಂದ ಸಮರ್ಪಣೆ ಮಾಡಲಾಗುತ್ತಿದೆ.
ಶ್ರೀರಂಗನಾಥ ಸ್ವಾಮಿ ದೇವರ ಕೃಪೆಯಿಂದ ನಮ್ಮ ಕುಟುಂಬಕ್ಕೆ ಸಾಕಷ್ಟು ಅನುಕೂಲವಾಗಿದ್ದು ದೇವರಿಗಾಗಿ ಏನಾದರೂ ಸಮರ್ಪಣೆ ಮಾಡಬೇಕೆಂದು ಕುಟುಂಬಸ್ಥರು ತೀರ್ಮಾನ ಮಾಡಿದ್ದೆವು. ಈಗ ದೇವರಿಗೆ ಚಿನ್ನದ ಅಭಯ ಹಸ್ತ ಮತ್ತು ಗದಹಸ್ತವನ್ನು ನೀಡಲಾಗುತ್ತಿದ್ದು ಇದನ್ನು ಭಾರತೀಯ ಸೇನೆ, ರೈತರು ಹಾಗೂ ಲೋಕಕಲ್ಯಾಣಾರ್ಥವಾಗಿ ಸಮರ್ಪಣೆ ಮಾಡಲಾಗುತ್ತಿದೆ. ಮುಂದೆ ಸಮರ್ಪಣಾ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಸಂತೋಷ್ ಹೇಳಿದ್ದಾರೆ.
ಉದ್ಯಮಿ ಸತೀಶ್ ಈಗಾಗಲೇ ಒಂದು ಕೋಟಿ ವೆಚ್ಚದ ವಜ್ರದ ಕಿರೀಟ ಹಾಗೂ ಪಾದುಕೆಗಳನ್ನ ಸಮರ್ಪಣೆ ಮಾಡಿದ್ದಾರೆ. ಪೋಟೋ 1ಮಾಗಡಿ1:ಮಾಗಡಿ ಪಟ್ಟಣದ ಐತಿಹಾಸಿಕ ಶ್ರೀ ರಂಗನಾಥ ಸ್ವಾಮಿಗೆ ಚಿನ್ನದ ಅಭಯ ಹಸ್ತ ಹಾಗೂ ಗದಹಸ್ತ ಸಮರ್ಪಣೆ ಮಾಡಲಿದ್ದಾರೆ.