ಜಿಐಟಿ ಚಾಂಪಿಯನ್ಸ್ ಟ್ರೋಫಿ-2026: ಕೆಎಲ್ಎಸ್ ಜಿಐಟಿಗೆ 3-0 ಗೋಲುಗಳ ಭರ್ಜರಿ ಗೆಲುವು

KannadaprabhaNewsNetwork |  
Published : Nov 25, 2026, 03:00 AM IST
ಜಿಐಟಿ | Kannada Prabha

ಸಾರಾಂಶ

ನಗರದ ಕೆಎಲ್ಎಸ್ ಗೋಗಟೆ ತಂತ್ರಜ್ಞಾನ ಸಂಸ್ಥೆ (ಕೆಎಲ್ಎಸ್ ಜಿಐಟಿ) ತಂಡವು ಅಂತರ ಕಾಲೇಜು ಫುಟ್‌ಬಾಲ್‌ ಪಂದ್ಯಾವಳಿಯಾದ ಜಿಐಟಿ ಚಾಂಪಿಯನ್ಸ್ ಟ್ರೋಫಿ-2026 ಸೀಸನ್ 2ರಲ್ಲಿ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಬೆಳಗಾವಿಯ ಸೇಂಟ್ ಪಾಲ್ಸ್ ಪಿಯು ಕಾಲೇಜನ್ನು 3-0 ಗೋಲುಗಳ ಅಂತರದಿಂದ ಸೋಲಿಸಿತು. ಸೇಂಟ್ ಪಾಲ್ಸ್ ಪಿಯು ಕಾಲೇಜು ರನ್ನರ್‌ ಆಪ್‌ ಸ್ಥಾನ ಪಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿನಗರದ ಕೆಎಲ್ಎಸ್ ಗೋಗಟೆ ತಂತ್ರಜ್ಞಾನ ಸಂಸ್ಥೆ (ಕೆಎಲ್ಎಸ್ ಜಿಐಟಿ) ತಂಡವು ಅಂತರ ಕಾಲೇಜು ಫುಟ್‌ಬಾಲ್‌ ಪಂದ್ಯಾವಳಿಯಾದ ಜಿಐಟಿ ಚಾಂಪಿಯನ್ಸ್ ಟ್ರೋಫಿ-2026 ಸೀಸನ್ 2ರಲ್ಲಿ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಬೆಳಗಾವಿಯ ಸೇಂಟ್ ಪಾಲ್ಸ್ ಪಿಯು ಕಾಲೇಜನ್ನು 3-0 ಗೋಲುಗಳ ಅಂತರದಿಂದ ಸೋಲಿಸಿತು. ಸೇಂಟ್ ಪಾಲ್ಸ್ ಪಿಯು ಕಾಲೇಜು ರನ್ನರ್‌ ಆಪ್‌ ಸ್ಥಾನ ಪಡೆಯಿತು.

ರೋಚಕ ಫೈನಲ್‌ನಲ್ಲಿ ಕೆಎಲ್ಎಸ್ ಜಿಐಟಿ ತಂಡವು ಉತ್ತಮ ತಂಡಸ್ಫೂರ್ತಿ, ಕೌಶಲ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಕೆಎಲ್ಎಸ್ ಜಿಐಟಿ ಪ್ರಾಚಾರ್ಯ ಡಾ.ವಿಜಯ ಆಠವಲೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಡಳಿತ ವಿಭಾಗದ ಡೀನ್ ಪ್ರೊ.ದಿಗಂಬರ ಕುಲಕರ್ಣಿ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಜಾರ್ಜ್ ರಾಡ್ರಿಗಸ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಡಾ.ವಿಜಯ ಆಠವಲೆ ಅವರು ವಿಜೇತ ಹಾಗೂ ರನ್ನರ್ಅಪ್ ತಂಡಗಳ ಉತ್ಸಾಹಭರಿತ ಪ್ರದರ್ಶನ ಮತ್ತು ಕ್ರೀಡಾಸ್ಫೂರ್ತಿಯನ್ನು ಅಭಿನಂದಿಸಿದರು. ಎಲ್ಲ ತಂಡಗಳ ಪ್ರಯತ್ನವನ್ನು ಶ್ಲಾಘಿಸಿದ ಅವರು, ವಿದ್ಯಾರ್ಥಿಗಳು ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು.ಈ ಪಂದ್ಯಾವಳಿಯು ಬೆಳಗಾವಿ ಜಿಲ್ಲೆಯ ವಿವಿಧ ಕಾಲೇಜುಗಳ ಯುವ ಫುಟ್ಬಾಲ್ ಆಟಗಾರರಿಗೆ ತಮ್ಮ ಪ್ರತಿಭೆ ಮತ್ತು ಸ್ಪರ್ಧಾಮನೋಭಾವವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಯಿತು. ವಿಜಯ ರೆಡೇಕರ್, ಓಂಕಾರ, ಶುಭಂ ಯಾದವ್ ಮತ್ತು ಯಶ್ ಸುತಾರ್ ಅವರು ಪಂದ್ಯಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.ಡಾ.ಜಾರ್ಜ್ ರಾಡ್ರಿಗಸ್ ಅವರು ದೈಹಿಕ ಶಿಕ್ಷಣ ಬೋಧಕರಾದ ಕು.ಶುಭಶ್ವಾ ಶಿಕ್ರೆ ಮತ್ತು ಕು.ಶಿವಾನಿ ಕರಾಳೆ ಹಾಗೂ ವಿದ್ಯಾರ್ಥಿ ಸ್ವಯಂಸೇವಕರಾದ ಕ್ರಿಜಾನಾ ಇರಾನಿ, ರಜಿತ್ ಖಂಡೇಕರ್, ಪ್ರಜ್ವಲ್, ಅವಂತಿ ಮತ್ತು ಸುನಿಧಿ ಹಲ್ಕರೆ ಅವರೊಂದಿಗೆ ಪಂದ್ಯಾವಳಿಯನ್ನು ಸಂಯೋಜಿಸಿದರು.ಆಡಳಿತ ಮಂಡಳಿ, ಆಡಳಿತ ವಿಭಾಗ, ಸಿಬ್ಬಂದಿ, ತೀರ್ಪುಗಾರರು, ಸ್ವಯಂಸೇವಕರು ಮತ್ತು ವಿದ್ಯಾರ್ಥಿ ಕ್ರೀಡಾ ಸಮಿತಿಯ ಸಹಕಾರದೊಂದಿಗೆ ಕೆಎಲ್ಎಸ್ ಜಿಐಟಿಯ ಕ್ರೀಡಾ ವಿಭಾಗವು ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿತು. ವಿಜೇತರು, ರನ್ನರ್ಅಪ್ ತಂಡ ಹಾಗೂ ವೈಯಕ್ತಿಕ ಪ್ರಶಸ್ತಿ ಪುರಸ್ಕೃತರನ್ನು ಕೆಎಲ್ಎಸ್ ಜಿಐಟಿ ಅಭಿನಂದಿಸುತ್ತದೆ ಮತ್ತು ಪಂದ್ಯಾವಳಿಯ ಯಶಸ್ಸಿಗೆ ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತದೆ.

ಬಾಕ್ಸ್‌..ವೈಯಕ್ತಿಕ ಪ್ರಶಸ್ತಿಗಳು

ಅತ್ಯುತ್ತಮ ಆಟಗಾರ: ಹರ್ಷ ಕುಲಕರ್ಣಿ-ಕೆಎಲ್ಎಸ್ ಜಿಐಟಿಅತ್ಯುತ್ತಮ ಗೋಲ್ಕೀಪರ್: ಆರನ್ ಪಿಲ್ಲೆ-ಸೇಂಟ್ ಪಾಲ್ಸ್ ಪಿಯು ಕಾಲೇಜುಇಂಪ್ಯಾಕ್ಟ್ ಪ್ಲೇಯರ್: ಅಭಿಷೇಕ ಪಾಟೀಲ-ಕೆಎಲ್ಎಸ್ ಜಿಐಟಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭಿವೃದ್ಧಿಗೆ ಮಾದರಿಯಾಗಿದೆ ಜೊಲ್ಲೆ ಸಮೂಹ
ಉ.ಕ ಸಮಸ್ಯೆ ಚರ್ಚೆಗೆ 5 ದಿನ ಮೀಸಲಿಡಿ