ಚನ್ನಪಟ್ಟಣ ಟಿಕೆಟ್ ಸಿಪಿವೈಗೆ ನೀಡಿ: ಆನಂದಸ್ವಾಮಿ

KannadaprabhaNewsNetwork | Published : Oct 11, 2024 11:56 PM

ಸಾರಾಂಶ

ಚನ್ನಪಟ್ಟಣ: ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿರುವುದೇ ಚನ್ನಪಟ್ಟಣ ಕ್ಷೇತ್ರದಲ್ಲಿ. ಈ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ ಆಗ್ರಹಿಸಿದರು.

ಚನ್ನಪಟ್ಟಣ: ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿರುವುದೇ ಚನ್ನಪಟ್ಟಣ ಕ್ಷೇತ್ರದಲ್ಲಿ. ಈ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರವನ್ನು ಯೋಗೇಶ್ವರ್ ಅವರೇ ಪ್ರತಿನಿಧಿಸುತ್ತಿದ್ದರು. ಕುಮಾರಸ್ವಾಮಿ ಬಂದ ನಂತರ ಅವರು ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಎಂದು ಎಚ್‌ಡಿಕೆಗೂ ಮನವಿ ಮಾಡುವುದಾಗಿ ತಿಳಿಸಿದರು.

ಬಿಜೆಪಿ ಮುಖಂಡ ಪ್ರಸಾದ್ ಗೌಡ ಮಾತನಾಡಿ, ಇಂದು ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿದ್ದರೆ ಅದಕ್ಕೆ ಯೋಗೇಶ್ವರ್ ಕಾರಣ. ಜಿಲ್ಲೆಯಲ್ಲಿ ಪಕ್ಷ ಬೆಳೆಯಬೇಕು ಎಂದರೆ ಅವರಿಗೆ ಟಿಕೆಟ್ ನೀಡಬೇಕು. ಇಡೀ ಜಿಲ್ಲೆಯ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಇದೆ ಆಗಿದೆ ಎಂದರು.

ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಬೇಕು ಎಂದರೆ ಯೋಗೇಶ್ವರ್‌ಗೆ ಉಪಚುನಾವಣೆಯ ಟಿಕೆಟ್ ನೀಡಬೇಕು. ಯೋಗೇಶ್ವರ್ ಅವರನ್ನು ಬಿಟ್ಟು ಬೇರೆ ಆಲೋಚನೆ ಮಾಡುವುದು ಸೂಕ್ತವಲ್ಲ. ಅವರನ್ನು ನೋಡಿಕೊಂಡು ನಾವು ರಾಜಕೀಯಕ್ಕೆ ಬಂದಿದ್ದೇವೆ. ಬೇರೆ ಅವರಿಗೆ ಅವಕಾಶ ನೀಡುವ ಮೂಲಕ ಪಕ್ಷದ ಬೆಳವಣಿಗೆಗೆ ವಿಷ ಹಾಕುವ ಕೆಲಸ ಮಾಡಬೇಡಿ ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಗೌತಮ್ ಗೌಡ ಮಾತನಾಡಿ, ಚನ್ನಪಟ್ಟಣದ ಎನ್‌ಡಿಎ ಟಿಕೆಟ್ ಯೋಗೇಶ್ವರ್ ಅವರಿಗೆ ನೀಡಬೇಕು ಎಂದು ಒತ್ತಾಯಿಸಲು ಇಂದು ಸಭೆ ನಡೆಸಿದ್ದೇವೆ. ಇದು ಯಾವುದೇ ಸಂದೇಶ ನೀಡುವ ಸಭೆ ಅಲ್ಲ. ಜಿಲ್ಲೆಯಲ್ಲಿ ಬಿಜೆಪಿ ಬೆಳೆವಣಿಗೆಗೆ ಉಪಚುನಾವಣೆ ನಾಂದಿಯಾಗಲಿದೆ. ಯೋಗೇಶ್ವರ್ ಅವರನ್ನು ಅಭ್ಯರ್ಥಿ ಮಾಡುವ ಮೂಲಕ ಪಕ್ಷ ಉಳಿಸುವ ಕೆಲಸ ಮಾಡಬೇಕು ಎಂದು ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಮಾತನಾಡಿ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆಗೆ ಯೋಗೇಶ್ವರ್ ಅಗತ್ಯತೆ ಇದೆ. ಮುಂದೆ ಬಿಜೆಪಿ ಇನ್ನಷ್ಟು ಬೆಳೆದು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದರೆ ಯೋಗೇಶ್ವರ್‌ಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಹಿಂದೆ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಯೋಗೇಶ್ವರ್ ನೀರಾವರಿ ಯೋಜನೆ ಅನುಷ್ಠಾನಕ್ಕೆ ತಂದರು. ಕ್ಷೇತ್ರದಿಂದ ಕುಮಾರಸ್ವಾಮಿ ಸಿಎಂ ಆಗಿದ್ದು, ಮತ್ತೆ ಯೋಗೇಶ್ವರ್ ಅವರನ್ನು ಸಚಿವರಾಗಿ ನೋಡಬೇಕು ಎಂದು ಕ್ಷೇತ್ರದ ಜನ ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಕೆ.ಟಿ.ಜಯರಾಮು, ನಗರಸಭೆ ಸದಸ್ಯ ಕೋಟೆ ಚಂದ್ರು, ಮಾಜಿ ಸದಸ್ಯ ಮುದ್ದುಕೃಷ್ಣ, ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಇತರರಿದ್ದರು.

ಬಾಕ್ಸ್‌........

ಸಿಪಿವೈಗೆ ಟಿಕೆಟ್ ನೀಡಲು ಆಗ್ರಹ

ಚನ್ನಪಟ್ಟಣ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಬೇಕು ಎಂದರೆ ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಅನ್ನು ವಿಧಾನಸಭೆ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೇ ನೀಡಬೇಕು ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯಿಸಿದರು.

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಯೋಗೇಶ್ವರ್‌ಗೆ ಉಪಚುನಾವಣೆ ಟಿಕೆಟ್ ನೀಡಬೇಕು ಎಂದು ಒಕ್ಕೊರಲು ಆಗ್ರಹ ಕೇಳಿಬಂತು.

ಸ್ಥಳೀಯವಾಗಿ ಬಿಜೆಪಿ ಉಳಿಯಬೇಕಾದರೆ ಸಿಪಿವೈ ಅಭ್ಯರ್ಥಿ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ನಾಯಕರು ಈ ಕುರಿತು ಗಮನ ನೀಡಬೇಕು. ಕುಮಾರಸ್ವಾಮಿ ಸಹ ಸಿಪಿವೈಗೆ ಕ್ಷೇತ್ರ ಬಿಟ್ಟುಕೊಡಲು ಮನಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡರ ವಿರುದ್ಧ ಆಕ್ರೋಶ: ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಚನ್ನಪಟ್ಟಣ ಬಿಜೆಪಿ ಮುಖಂಡರ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರು ಲೋಕಸಭೆ ಬಳಿಕ ವರಸೆ ಬದಲಿಸುತ್ತಿದ್ದಾರೆ. ಸಿಪಿವೈ ಗೆ ಟಿಕೆಟ್ ಕೊಡಲೇಬೇಕು, ಇಂತಹ ವ್ಯಕ್ತಿ ಕಳೆದುಕೊಂಡರೆ ಪಕ್ಷಕ್ಕೆ ಪೆಟ್ಟು ಬೀಳುತ್ತೆ. ಸಂಘಟನೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಅವರಿಗೆ ಟಿಕೆಟ್ ನೀಡಲಿ ಎಂದು ಆಗ್ರಹಿಸಿದರು.

ನಿಮ್ಮ ನಿಮ್ಮಅನುಕೂಲಕ್ಕೆ ತಕ್ಕಂತೆ ಮಾತಾಡಬೇಡಿ. ಇಲ್ಲಿ ಅನುಕೂಲ ಸಿಂಧು ರಾಜಕಾರಣ ಮಾಡಬೇಡಿ. ಸಿಪಿವೈ ನಿಂತ್ರೆ ಮಾತ್ರ ನಾವೆಲ್ಲ ಸಕ್ರಿಯವಾಗಿ ಕೆಲಸ ಮಾಡ್ತೀವೆ. ಇಲ್ಲದಿದ್ದರೆ ನಮ್ಮ ಪಾಡಿಗೆ ನಾವು ಮನೆಯಲ್ಲಿ ಇರ್ತೀವಿ ಎಂದು ಮಾಗಡಿ ಬಿಜೆಪಿ ಪರಾಜಿತ ಅಭ್ಯರ್ಥಿ ಪ್ರಸಾದ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪೊಟೋ೧೦ಸಿಪಿಟಿ೩:

ಚನ್ನಪಟ್ಟಣದಲ್ಲಿ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Share this article