ಮಕ್ಕಳ ಮನಸ್ಸು ಅರಲಿನ ಮುದ್ದೆ ಇದ್ದಂತೆ. ಇದನ್ನು ಯಾವ ರೀತಿ ನಾವು ಮೂರ್ತಿ ಮಾಡುತ್ತೇವೆ ಆ ರೀತಿಯಲ್ಲಿ ಮೂರ್ತಿ ಆಗುತ್ತದೆ. ಆದ್ದರಿಂದ ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮವಾದ ಶಿಸ್ತು, ವಚನ ಸಾಹಿತ್ಯ ಅದರ ಜೊತೆಗೆ ನಡೆ-ನುಡಿ ಉತ್ತಮ ಸಂಸ್ಕಾರ ನೀಡಬೇಕಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಮ್.ಎಸ್. ಧಡೇಸೂರಮಠ ಹೇಳಿದರು.
ನರೇಗಲ್ಲ:ಮಕ್ಕಳ ಮನಸ್ಸು ಅರಲಿನ ಮುದ್ದೆ ಇದ್ದಂತೆ. ಇದನ್ನು ಯಾವ ರೀತಿ ನಾವು ಮೂರ್ತಿ ಮಾಡುತ್ತೇವೆ ಆ ರೀತಿಯಲ್ಲಿ ಮೂರ್ತಿ ಆಗುತ್ತದೆ. ಆದ್ದರಿಂದ ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮವಾದ ಶಿಸ್ತು, ವಚನ ಸಾಹಿತ್ಯ ಅದರ ಜೊತೆಗೆ ನಡೆ-ನುಡಿ ಉತ್ತಮ ಸಂಸ್ಕಾರ ನೀಡಬೇಕಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಮ್.ಎಸ್. ಧಡೇಸೂರಮಠ ಹೇಳಿದರು.
ಅವರು ಸಮೀಪದ ಜಕ್ಕಲಿ ಗ್ರಾಮದ ಅನ್ನದಾನೇಶ್ವರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳು ಎದುರು ಪ್ರದರ್ಶಿಸುವ ನಡುವಳಿಕೆ ತುಂಬಾ ಮಹತ್ವದಾಗಿದೆ. ಮಕ್ಕಳು ತಮ್ಮ ಬಾಲ್ಯದ ಅಮೂಲ್ಯ ಸಮಯವನ್ನು ಶಿಕ್ಷಕರು ಮತ್ತು ಪೋಷಕರೊಂದಿಗೆ ಕಳೆಯುತ್ತಾರೆ. ಮಕ್ಕಳು ಬಾಲ್ಯದಲ್ಲಿ ಕಲಿತುಕೊಳ್ಳುವ ಸಂಸ್ಕಾರ ಅವರ ಬದುಕಿಗೆ ಮುನ್ನುಡಿಯಾಗಲಿದೆ ಎಂದು ತಿಳಿಸಿದರು. ಆದಷ್ಟು ಮಕ್ಕಳನ್ನು ಟಿವಿ ಮತ್ತು ಮೊಬೈಲದಿಂದ ದೂರವಿರಿಸಿರಿ. ಈಗ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಮಯ ಈ ಸಮಯದಲ್ಲಿ ಮನೆಯಲ್ಲಿ ಮೊಬೈಲ ಹಾಗೂ ಟಿವಿಯನ್ನು ನೋಡುವುದನ್ನು ನಿಲ್ಲಿಸಿ ಮಕ್ಕಳನ್ನು ಓದಿಸುವ ಕೆಲಸ ಮಾಡಿಸಿರಿ ಎಂದು ಪಾಲಕರಿಗೆ ಕಿವಿ ಮಾತನ್ನು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್‌ಎವ್ಹಿವ್ಹಿಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಗ್ರಾಪಂ ಸದಸ್ಯ ಪ್ರಕಾಶಪ್ಪ ಹೊಸಮನಿ ಮುಂತಾದವರು ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗಂಗಮ್ಮ ಜಂಗಣ್ಣವರ, ವೀರಯ್ಯ ಹಿರೇಮಠ, ಗುರುಲಿಂಗಮೂರ್ತಿ ಮಂಟಯ್ಯನವರಮಠ, ಪ್ರಕಾಶಪ್ಪ ಹೊಸಮನಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ವಾಯ್.ಟಿ. ಹೊನ್ನವಾಡ ಸ್ವಾಗತಿಸಿದರು. ನಿರ್ಮಲಾ ಕುದರಿ ವಾರ್ಷಿಕ ವರದಿ ವಾಚಿಸಿದರು. ಪಾಟೀಲ ನಿರೂಪಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.