ಕನ್ನಡ ಪ್ರಭ ವಾರ್ತೆ ಯಲ್ಲಾಪುರ
ಪಟ್ಟಣದ ವೈಟಿಎಸ್ಎಸ್ ಮೈದಾನದಲ್ಲಿ ಸಂಘದ ಶತಾಬ್ದಿ ಪ್ರಯುಕ್ತ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹಿಂದುತ್ವ ಅವನತಿಯತ್ತ ಹೋಗುತ್ತಿಲ್ಲ. ಆದರೆ ಆಚರಣೆಗಳನ್ನು ನಿಲ್ಲಿಸುವ ಮೂಲಕ ನಾವೇ ಅವನತಿಯತ್ತ ತಳ್ಳುತ್ತಿದ್ದೇವೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳಿಂದ ನಾವೇ ಮಕ್ಕಳನ್ನು ದೂರ ಮಾಡುತ್ತಿದ್ದೇವೆ. ನಮ್ಮ ಸಂಸ್ಕೃತಿ ನಾವು ಅರಿತು, ಮಕ್ಕಳಿಗೂ ತಿಳಿಹೇಳುವ ಕಾರ್ಯ ಆಗಬೇಕು. ಮಕ್ಕಳ ಮೇಲೆ ಅಂಕದ ಹಿಂದೆ ಓಡುವ ಒತ್ತಡ ಹೇರಬಾರದು. ಅವರನ್ನು ಮೊಬೈಲ್, ಟಿವಿಯ ಗೀಳಿನಿಂದ ಹೊರತಂದು ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯವನ್ನು ಹಿರಿಯರು ಮಾಡಬೇಕು ಎಂದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟ ದಿಕ್ಸೂಚಿ ಭಾಷಣ ಮಾಡಿ, ಅನೇಕ ಬಾರಿ ದಾಳಿಗೊಳಗಾದರೂ ಮತ್ತೆ ಎದ್ದು ನಿಲ್ಲುವ ಸಾಮರ್ಥ್ಯ ನಮ್ಮ ಸಂಸ್ಕೃತಿಗಿದೆ. ಸದಾ ಸಕಾರಾತ್ಮಕ ಚಿಂತನೆಗಳಿಂದ ಸಾಗಬೇಕು. ನಕಾರಾತ್ಮಕ ಯೋಚನೆಗಳನ್ನು ಯಾರಿಗೂ ತೊಂದರೆಯಾಗದಂತೆ ದೂರ ತಳ್ಳಬೇಕು. ಧರ್ಮ ಸಂಸ್ಥಾಪನೆಗೆ ಸಂಘಟನೆಯಿಂದ ಮಾತ್ರ ಸಾಧ್ಯ. ರಾಷ್ಟ್ರದ ಕುರಿತು ಪರಸ್ಪರ ಪೂರಕ, ಪೋಷಕ ಮಾನಸಿಕತೆ ಇದ್ದಾಗ ಮಾತ್ರ ಭಾರತ ಜಾಗತಿಕ ಮಟ್ಟದಲ್ಲಿ ಶ್ರೇಷ್ಠವಾಗಿ ಮುನ್ನಡೆಯಲು ಸಾಧ್ಯ. ಹೆಣ್ಣನ್ನು ದೇಹವಾಗಿ ನೋಡದೇ, ದೇವತೆಯಾಗಿ ನೋಡುವ ದೃಷ್ಟಿಕೋನ ಬೆಳೆದಲ್ಲಿ ಅತ್ಯಾಚಾರ, ಅನಾಚಾರ ನಿಲ್ಲಲು ಸಾಧ್ಯ. ಹಿಂದೂ ಸಮಾಜ ಬಲಿಷ್ಠವಾಗಲು ಕುಟುಂಬ ವ್ಯವಸ್ಥೆ ಗಟ್ಟಿಯಾಗಬೇಕು. ಕೌಟುಂಬಿಕ ಜೀವನ ಮೌಲ್ಯಗಳು, ಸಾಮರಸ್ಯ, ಸ್ವದೇಶಿ-ಸ್ವಭಾಷಾ-ಸ್ವಭೂಷಾ, ಪರ್ಯಾವರಣ, ನಾಗರಿಕ ಶಿಷ್ಟಾಚಾರಗಳನ್ನು ಎಲ್ಲರೂ ಒಂದಾಗಿ ಪಾಲಿಸುವಂತಾಗಬೇಕು. ರಾಷ್ಟ್ರಹಿತಕ್ಕಾಗಿ ಸಂಘಟಿತರಾಗುವ ಭಾವನೆ ಎಲ್ಲರಲ್ಲೂ ಮೂಡಬೇಕು ಎಂದರು.
ವಿವಿಧ ಕ್ಷೇತ್ರಗಳ ಸಾಧಕರಾದ ರಾಜೇಂದ್ರ ಪ್ರಸಾದ ಭಟ್ಟ, ಸುರೇಶ ಮತ್ತು ಸರಿತಾ ಮುರಕುಂಬಿ, ಗಜಾನನ ನಾಯ್ಕ, ನಾಗೇಶ ಯಲ್ಲಾಪುರಕರ್, ಚಂದ್ರಶೇಖರ ನೇತ್ರೆಕರ್, ಕಿಶನ್ ಗುರುಸ್ವಾಮಿ, ಸಂತೋಷ ಮರಾಠಿ, ಜಿ.ಎಂ. ತಾಂಡುರಾಯನ್, ಸುಬ್ರಾಯ ಭಟ್ಟ ಆನೆಜಡ್ಡಿ, ಈರಣ್ಣ ಅಂಗಡಿ, ಮಹಾಬಲ ಪಾಟೀಲ ಅವರನ್ನು ಗೌರವಿಸಲಾಯಿತು.ನಗರ ಮಂಡಲದ ಅಧ್ಯಕ್ಷ ಸಂತೋಷ ಗುಡಿಗಾರ, ನಮಿತಾ ಬೀಡಿಕರ್ ಉಪಸ್ಥಿತರಿದ್ದರು. ಮಂಜುನಾಥ ಭಟ್ಟ ಸಂಗಡಿಗರು ವೇದಘೋಷಗೈದರು. ಪಲ್ಲವಿ ಭಟ್ಟ ಕವಾಳೆ ವೈಯಕ್ತಿಕ ಗೀತೆ ಹಾಡಿದರು. ಹಿಂದೂ ಸಮಾವೇಶ ಸಮಿತಿಯ ಮಂಡಲ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಭಟ್ಟ ಹಂಡ್ರಮನೆ ಸ್ವಾಗತಿಸಿದರು. ಸಂಧ್ಯಾ ವಿಷ್ಣು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾರ್ವತಿ ಕಟ್ಟಿಮನಿ, ಕೇಬಲ್ ನಾಗೇಶ ನಿರ್ವಹಿಸಿದರು. ಚಂದನ ನಾಯ್ಕ ವಂದಿಸಿದರು.ಶೋಭಾಯಾತ್ರೆ
ಸಮಾವೇಶಕ್ಕೂ ಮುನ್ನ ಗ್ರಾಮದೇವಿ ದೇವಸ್ಥಾನದಿಂದ ವೈಟಿಎಸ್ಎಸ್ ಮೈದಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ತೆರೆದ ವಾಹನದಲ್ಲಿ ಪೀಠಾರೂಢರಾದ ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಇದ್ದರು ವಿವಿಧ ಮಹಾಪುರುಷರ ವೇಷ ತೊಟ್ಟ ವಿದ್ಯಾರ್ಥಿಗಳು, ಭಜನಾ ಮಂಡಳಿಯ ಕಲಾವಿದರಿಂದ ಭಜನೆ ಶೋಭಾಯಾತ್ರೆಯ ಮೆರಗು ಹೆಚ್ಚಿಸಿತು.