ಜನತಾ ಕಾಲೋನಿಗೆ ನಾಗರಿಕ ಸೌಲಭ್ಯ ನೀಡಿ

KannadaprabhaNewsNetwork |  
Published : Oct 01, 2024, 01:23 AM IST
ಮಾನವ ಹಕ್ಕುಗಳ ಹೋರಾಟ ಕೇಂದ್ರದ ನೇತೃತ್ವದಲ್ಲಿ ಪಾಲಿಕೆ ಮುಂದೆ ಪ್ರತಿಭಟನೆ | Kannada Prabha

ಸಾರಾಂಶ

ತುಮಕೂರು: ನಗರದ 29 ನೇ ವಾರ್ಡಿನ ಮರಳೂರು ದಿಣ್ಣೆ ಜನತಾ ಕಾಲೋನಿಯಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕು, ನಿವಾಸಿಗಳಿಗೆ ಅಗತ್ಯ ಸೌಕರ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಕೇಂದ್ರದ ನೇತೃತ್ವದಲ್ಲಿ ಅಲ್ಲಿನ ನಾಗರೀಕರು ಸೋಮವಾರ ನಗರ ಪಾಲಿಕೆ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ತುಮಕೂರು: ನಗರದ 29 ನೇ ವಾರ್ಡಿನ ಮರಳೂರು ದಿಣ್ಣೆ ಜನತಾ ಕಾಲೋನಿಯಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕು, ನಿವಾಸಿಗಳಿಗೆ ಅಗತ್ಯ ಸೌಕರ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಕೇಂದ್ರದ ನೇತೃತ್ವದಲ್ಲಿ ಅಲ್ಲಿನ ನಾಗರೀಕರು ಸೋಮವಾರ ನಗರ ಪಾಲಿಕೆ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ಮಾನವ ಹಕ್ಕುಗಳ ಹೋರಾಟ ಕೇಂದ್ರದ ರಾಜ್ಯಾಧ್ಯಕ್ಷ ಎಸ್.ಸಾದಿಕ್ ಪಾಷಾ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಆಗಿವೆಯಾದರೂ ಬಡವರೇ ಹೆಚ್ಚಾಗಿರುವ ಮರಳೂರು ದಿಣ್ಣೆ ಜನತಾ ಕಾಲೋನಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ, ನಾಗರೀಕರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲ, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಈ ಬಡಾವಣೆಯಲ್ಲಿ ನಾಗರೀಕ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಹೇಳಿದರು.ಮರಳೂರು ಜನತಾ ಕಾಲೋನಿಯ 1ರಿಂದ 14ನೇ ರಸ್ತೆ ಅಡ್ಡರಸ್ತೆಗಳಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಪೈಪ್‌ಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ವೈಜ್ಞಾನಿಕವಾಗಿ ಪೈಪ್‌ಗಳನ್ನು ಅಳವಡಿಸಿ ಇಲ್ಲಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಬೇಕು. ಯುಜಿಡಿ ಕಾಮಗಾರಿಯಾಗಿ ಹತ್ತು ವರ್ಷಗಳಾದರೂ ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಿಲ್ಲ, ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು. ನೈರ್ಮಲ್ಯ ಕಾಪಾಡುವ ಸಲುವಾಗಿ ಎಲ್ಲಾ ಚರಂಡಿಗಳ ಮೇಲೆ ಸ್ಲಾಬ್ ಅಳವಡಿಸಬೇಕು ಎಂದು ಒತ್ತಾಯಿಸಿದರು.ಈ ಪ್ರದೇಶದಲ್ಲಿ ೨೪/೭ ಕುಡಿಯುವ ನೀರಿನ ಸಂಪರ್ಕ ಪೈಪ್‌ಲೈನ್ ಕಾಮಗಾರಿ ಮುಗಿದು ೪ ವರ್ಷವಾಗಿದೆ. ಇನ್ನೂ ನೀರು ಸರಬರಾಜಾಗುತ್ತಿಲ್ಲ. ಮರಳೂರು ಜನತಾ ಕಾಲೋನಿ ಕೊಳಚೆ ಪ್ರದೇಶದ ಪಟ್ಟಿಯಲ್ಲಿದ್ದು, ಈ ವಾರ್ಡಿನಲ್ಲಿ ವಸತಿ, ನಿವೇಶನಗಳ ಕಂದಾಯದಲ್ಲಿ ಶೇಕಡ 50 ರಷ್ಟು ವಿನಾಯಿತಿ ನೀಡಲು ಆದೇಶ ಮಾಡಬೇಕು. ಜನತಾ ಕಾಲೋನಿಯಲ್ಲಿ ಹಾದುಹೋಗಿರುವ 220 ಕೆವಿ ವಿದ್ಯುತ್ ಲೈನ್ ಅಂತರ ಬಿಟ್ಟು ಉಳಿಕೆ ಮನೆಗಳ ನಾಗರೀಕರಿಗೆ ಮತ್ತು ಹಕ್ಕುಪತ್ರ ಇಲ್ಲದವರಿಗೆ ತುರ್ತಾಗಿ ಹಕ್ಕುಪತ್ರ ನೀಡಬೇಕು. 220 ಕೆವಿ ವಿದ್ಯುತ್ ತಂತಿ ಹಾದುಹೋಗಿರುವ ಕೆಳಭಾಗದಲ್ಲಿ ತೆರವಾಗಿರುವ ಜಾಗದಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ರಸ್ತೆ ನಿರ್ಮಿಸಬೇಕು, ಉಳಿದ ಜಾಗದಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡಬೇಕು ಎಂದು ಎಸ್.ಸಾದಿಕ್ ಪಾಷ ನಗರ ಪಾಲಿಕೆಗೆ ಒತ್ತಾಯಿಸಿದರು.ನಂತರ ನಗರಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಅವರಿಗೆ ಮನವಿಪತ್ರ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮುಖಂಡರಾದ ಇಲಿಯಾಜ್ ಪಾಷಾ, ಮುದಸಿರ್ ಪಾಷಾ, ಮುರಳಿ, ಮೋಹನ್, ಅಜ್ಗರ್ ಆಲಿ, ಜಾಕೀರ್, ಖಾದರ್ ಸೇರಿದಂತೆ ಮರಳೂರು ದಿಣ್ಣೆ ನಾಗರೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌