ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಮುಂಜಾಗತಾ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಳೆದ ಬಾರಿ ಕೊರೋನಾ ಬಂದಾಗ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಿ ಅವರನ್ನೇ ನೇಮಿಸಿಕೊಳ್ಳಿ ಎಂದು ಶಾಸಕ ಟಿ.ಡಿ.ರಾಜೇಗೌಡ ತಾಲೂಕು ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಕೊರೋನಾ ಮುಂಜಾಗ್ರತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಬಾರಿ ಕೊರೋನಾ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಡಾಟಾ ಎಂಟ್ರಿ ಆಪರೇಟರ್, ನರ್ಸುಗಳು, ಟೆಕ್ನಿಷಿಯನ್ ನೇಮಕ ವಾಗಿತ್ತು. ಈ ಬಾರಿ ಅವರಿಗೆ ಮೊದಲ ಆದ್ಯತೆ ನೀಡಿ ಅವರನ್ನೇ ನೇಮಿಸಿಕೊಳ್ಳಿ ಎಂದರು. ಕೊರೋನಾ ಬಗ್ಗೆ ಜನರು ಭಯ ಪಡದೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕೊರೋನಾ ರೂಪಾಂತರಿ ತಳಿಗಳು ಪತ್ತೆಯಾಗಿವೆ. ಕಳೆದ ಬಾರಿ ಕೊನೋನಾ ಬಂದಾಗ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರಿಂದ ಯಶಸ್ವಿಯಾಗಿ ನಿಭಾಯಿಸಿದ್ದೇವೆ.ಶಾಸಕರ ಅನುದಾನದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೊಸ ಡಯಾಲೀಸಸ್ ಯಂತ್ರ ಕೊಡಿಸುತ್ತೇನೆ.ಹಿರಿಯ ನಾಗರೀಕರು, ಕಿಡ್ನಿ, ಹೃದಯ ಸಂಬಂಧಿ ಲಿವರ್ ಕಾಯಿಲೆಗಳಿಂದ ಬಳಲುತ್ತಿರುವುವರು,ಗರ್ಬಿಣಿಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಜ್ವರ, ಸೀತ,ದ ಲಕ್ಷಣಗಳು ಕಂಡು ಬಂದಲ್ಲಿ ಮನೆ ಮದ್ದು ಮಾಡಿ ಸುಮ್ಮನಿರಬಾರದು. ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದರು.
ತಾಲೂಕಿನ ಎಲ್ಲಾ ಅಧಿಕಾರಿಗಳು, ಪಿಡಿಒ ಆಶಾ - ಅಂಗನವಾಡಿ ಕಾರ್ಯಕರ್ತೆಯರಿಗೆ ಕೊರೋನ ಬಗ್ಗೆ ಮುಂಜಾಗ್ರತೆ ಮೂಡಿಸಬೇಕು. ತಾಲೂಕಿನ ಮುಖ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಿ ಎಂದು ತಾಲೂಕು ವೈದ್ಯಾಧಿ ಕಾರಿಗಳಿಗೆ ಸೂಚಿಸಿದರು.ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ, 100 ಬೆಡ್‌ಗಳ ಆಸ್ಪತ್ರೆಯಾಗಿದ್ದು ಇದರಲ್ಲಿ 60 ಸುಸಜ್ಜಿತ ಆಕ್ಸಿಜನ್ ಬೆಡ್‌ಗಳು, 4 ತುರ್ತು ವಾಹನಗಳು ಸುಸ್ಥಿತಿಯಲ್ಲಿವೆ. ಲಿಕ್ವಿಡ್ ಆಕ್ಸಿಜನ್ ಸಿಲಿಂಡರ್ ಹಾಗೂ ಪಿಎಸ್‌ಐ ಪ್ಲಾಂಟು ಎರಡೂ ಸಹ ನಾನ್ ವರ್ಕಿಂಗ್ ಎಂದು ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಸ್ಟಾಫ್ ನರ್ಸ್ ಕೊರತೆ ಇದ್ದು ಈಗಿರುವ ನರ್ಸಗಳಿಗೆ ಕೆಲಸದ ಒತ್ತಡ ಹೆಚ್ಚಿದೆ. ಎನ್ಎಚ್ಎಂ ಯೋಜನೆಯಡಿ 20 ಸ್ಟಾಫ್ ನರ್ಸ್ ಬೇಕು ಎಂದು ಈಗಾಗಲೇ ಡಿಎಚ್‌ಒಗೆ ಪತ್ರ ಬರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ಸದಸ್ಯೆ ಜುಬೇದಾ, ಡಾ.ಲಿಂಗರಾಜು, ಪಿಎಐ ನಿರಂಜನ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.