ಕನ್ನಡಪ್ರಭ ವಾರ್ತೆ ತಾಳಿಕೋಟೆ
ಯುವಕರೊಂದಿಗೆ ಸದಾ ಒಡನಾಟ ಹೊಂದುವದರೊಂದಿಗೆ ಭಾರತೀಯ ಜನತಾ ಪಕ್ಷದ ಪರವಾಗಿ ಸದಾ ಕೆಲಸ ನಿರ್ವಹಿಸುತ್ತ ಬಂದಿರುವ ಡಾ.ಬಾಬುರಾಜೇಂದ್ರ ನಾಯಕ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೈಕಮಾಂಡ್ ಟಿಕೆಟ್ ನೀಡಬೇಕು ಎಂದು ಪುರಸಭೆ ಮಾಜಿ ಸದಸ್ಯ ಮಾನಸಿಂಗ್ ಕೊಕಟನೂರ ಆಗ್ರಹಿಸಿದರು.ಪಟ್ಟಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಯಾವಾಗಲು ಯುವಕರು ಕೆಲಸ ಮಾಡುತ್ತ ಬಂದಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯವು ಕೂಡಾ ಕಾರ್ಯಕರ್ತರದ್ದಾಗಿದೆ. ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳಿಂದ ಕೇಂದ್ರದ ಬಿಜೆಪಿ ಸರ್ಕಾರದಿಂದ ಕೆಲಸಗಳು ಆಗಿದ್ದರೂ ಕೂಡಾ ಅವುಗಳು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಯೋಜನೆಗಳಿಂದ ನೇರವಾಗಿ ಎಲ್ಲ ಜನರಿಗೆ ಮುಟ್ಟಿವೆ. ಇನ್ನೂ ಹೆಚ್ಚಿನ ಸೌಲಭ್ಯಗಳು ಜನರಿಗೆ ಸಿಗಬೇಕೆಂದರೇ ಈ ಬಾರಿಯ ಚುನಾವಣೆಯಲ್ಲಿ ಹೊಸಬರಿಗೆ ಮಣೆ ಹಾಕಿದರೇ ಬಡ-ಬಗ್ಗರು ಆರ್ಥಿಕವಾಗಿ ಮೇಲೆಳುವುದರ ಜೊತೆಗೆ ಪಕ್ಷದ ಕಾರ್ಯಕರ್ತರಿಗೆ ಯುವಕರಿಗೆ ಹೆಚ್ಚಿನ ಶಕ್ತಿ ಬಂದಂತಾಗುತ್ತದೆ ಮತ್ತು ಹುಮ್ಮಸ್ಸು ಕೂಡಾ ಇಮ್ಮಡಿಗೊಳ್ಳಲಿದೆ. ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್‌ನ್ನು ಹೊಸಬರಿಗೆ ನೀಡಿದರೇ ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ಜೊತೆಗೆ ಪಕ್ಷದ ಕಾರ್ಯಚಟುವಟಿಕೆಗಳನ್ನು ಮಾಡಲು ಶಕ್ತಿ ನೀಡಿದಂತಾಗುತ್ತದೆ ಎಂದರು.
ಈ ಸಮಯದಲ್ಲಿ ಪುರಸಭೆ ಮಾಜಿ ಸದಸ್ಯ ರಾಜು ಸಜ್ಜನ, ಮಹಾಂತೇಶ ಮುರಾಳ, ದೇವು ಹಜೇರಿ, ಜಗದೀಶ ಬಿಳೇಭಾವಿ, ಬಸವರಾಜ ಹೊಟ್ಟಿ, ಅಶೋಕ ಚಿನಗುಡಿ, ಕಸ್ತೂರಿ ಪ್ರಥಮಶೆಟ್ಟಿ, ಅನೀಲ ಕುಂಬಾರ, ಅನೀಲ ಕಸ್ತೂರಿ, ರಮೇಶ ಮಾಲಿಪಾಟೀಲ, ವೀರೇಶ ಕಸಬೇಗೌಡರ, ಬಸ್ಸು ಇಂಗಳಗಿ, ಸಂತೋಷ ಕುಲಕರ್ಣಿ, ಮುತ್ತು ಕುಂಬಾರ, ಗಂಗು ಹಜೇರಿ, ಅಲೌಕಸಿಂಗ್ ಗೌಡಗೇರಿ, ರಾಹುಲ್ ನರಗುಂದ, ವಿನಯಸಿಂಗ್ ಕೊಕಟನೂರ, ನಿಖೀಲ್ ಮೂಲಿಮನಿ, ಸೋಹನ್ ಹಜೇರಿ, ಸೀತಾರಾಮ ಮೂಲಿಮನಿ, ರಾಕೇಶ ನರಗುಂದ ಮೊದಲಾದವರು ಇದ್ದರು.ಸದಾ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡು ಪಕ್ಷ ನಿಷ್ಠೆಯಾಗಿ ಕೆಲಸ ಮಾಡುತ್ತ ಬಂದಿರುವ ಡಾ.ಬಾಬು ರಾಜೇಂದ್ರ ನಾಯಕ ಅವರಿಗೆ ಟಿಕೆಟ್ ನೀಡಿ ಕಾರ್ಯಕರ್ತರಿಗೆ ಅಂಟಿರುವ ಅಸಮಧಾನದ ಹೊಗೆಯನ್ನು ಶಮನಗೊಳಿಸಬೇಕು.-ಮಾನಸಿಂಗ್ ಕೊಕಟನೂರ,
ಪುರಸಭೆ ಮಾಜಿ ಸದಸ್ಯರು.