ಕನ್ನಡಪ್ರಭ ವಾರ್ತೆ ಕೋಲಾರಬಂಗಾರಪೇಟೆಯ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಪ್ರಾರ್ಥಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಕೋಲಾರಮ್ಮ ದೇವಾಲಯಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ೧೦೧ ಈಡುಗಾಯಿ ಒಡೆದು, ಪಟಾಕಿ ಸಿಡಿಸಿ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಗೆ ಮಂತ್ರಿ ಸ್ಥಾನ ಕರುಣಿಸುವಂತೆ ಕೋರಿ ಶಕ್ತಿ ದೇವತೆ ಕೋಲಾರಮ್ಮಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ. ರಾಜ್ಯ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಸಿಗದ ಕಾರಣ ಯಾವುದೇ ಸೌಲಭ್ಯಗಳು ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಕೋಲಾರ ಜಿಲ್ಲೆಗೆ ಸಚಿವ ಸ್ಥಾನ ದೊರೆಯಬೇಕು ಎಂದರು.ಎಸ್ಸಿ ಸಮುದಾಯಕ್ಕೆ ನೀಡಲಿ
ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಮಂತ್ರಿ ಸ್ಥಾನ ಕೇಳೋದು ಹಕ್ಕು ಇದೆ, ಆದರೆ ನನಗೆ ಮಂತ್ರಿ ಸ್ಥಾನ ಕೊಡಬಾರದು ಅಂತ ಯಾವ ಶಾಸಕರು ಸಹ ವಿರೋಧಿಸಿಲ್ಲ. ಜಿಲ್ಲೆಯ ನಾಲ್ಕು ಜನ ಶಾಸಕರಲ್ಲಿ ಯಾರಿಗೆ ನೀಡಿದರೂ ಸಮಾಧಾನ ನನಗಿದೆ, ಆದರೆ ನನಗೆ ಕೊಡಿ ಅನ್ನೋದು ನನ್ನ ಅಹವಾಲು ಆಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಹೈಕಮಾಂಡ್ ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ
ಸಿಎಂ ಬದಲಾವಣೆ ನಮ್ಮ ಕೈಯಲಿಲ್ಲ. ಸಚಿವ ಸಂಪುಟ ವಿಸ್ತರಣೆ ಖಂಡಿತ ಆಗುತ್ತೆ, ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಆಗಲಿದೆ, ೧೨ ರಿಂದ ೧೩ ಜನರಿಗೆ ಕೊಕ್ ನೀಡುತ್ತಾರೆ ಅನ್ನೋ ಸುದ್ದಿ ಇದೆ, ಮೊದಲನೇ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭರವಸೆ ನೀಡಿದ್ದರು. ಒತ್ತಡ ಮಾಡಿದರೆ ಮಗ ಪ್ರಿಯಾಂಕ್ ಖರ್ಗೆಗೆ ತಪ್ಪಿಸಿ ನೀಡಬೇಕಾಗುತ್ತೆ ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಆಗಾಗಿ ನನಗೆ ಎರಡನೇ ಅವಧಿಯಲ್ಲಿ ಮಂತ್ರಿ ಸ್ಥಾನ ಸಿಗುವ ಭರವಸೆ ಇದೆ ಎಂದರು.ದಲಿತ ಮುಖ್ಯಮಂತ್ರಿ ಆಗಲಿ
ಈ ವೇಳೆ ಕಾಂಗ್ರೆಸ್ ಹಿರಿಯ ಮುಖಂಡ ಕೆ. ಚಂದ್ರಾರೆಡ್ಡಿ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೀತಿ ಹೊಸೂರು ಮುರಳಿ ಗೌಡ, ಮುಖಂಡರಾದ ಕೋಟೆ ನಾರಾಯಣಸ್ವಾಮಿ, ಸುರೇಶ್, ಲಾಲ್ ಬಹದ್ದೂರುಶಾಸ್ತ್ರಿ, ಗಂಗಮ್ಮ ಪಾಳ್ಯ ರಾಮಯ್ಯ, ಅ.ನಾ.ಹರೀಶ್, ಪ್ರಸಾದ್‌ಬಾಬು, ಜಯದೇವ್, ಎಲ್.ಎ.ಮಂಜುನಾಥ್ ಇದ್ದರು.