ಲೀಸ್ ಅವಧಿ ಮುಗಿದ ಆಸ್ತಿಗಳ ಮಾಲೀಕರಿಗೆ ನೋಟಿಸ್ ನೀಡಿ: ಮೇಯರ್ ಪ್ರೀತಿ

KannadaprabhaNewsNetwork |  
Published : Jun 11, 2026, 03:30 AM IST
 ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮೇಯರ ಪ್ರೀತಿ ಕಾಮಕರ ಮಾತನಾಡುತ್ತಿರುವುದು. ಉಪ ಮೇಯರ್ ಹಣಮಂತ ಕೊಂಗಾಲಿ ಡಾ. ಸಿದ್ದು ಹುಲ್ಲೋಳಿ ಇತರರು ಇದ್ದಾರೆ. | Kannada Prabha

ಸಾರಾಂಶ

ಲೀಸ್ ಅವಧಿ ಮುಗಿದ ಆಸ್ತಿಗಳ ಮಾಲೀಕರಿಗೆ ನೋಟಿಸ್ ನೀಡಿ, ಮುಗಿದ ಅವಧಿಯ ಬಾಡಿಗೆ ಮತ್ತು ದಂಡ ಪಡೆದುಕೊಳ್ಳಬೇಕು ಎಂದು ಮೇಯರ್ ಪ್ರೀತಿ ಕಾಮಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಲೀಸ್ ಅವಧಿ ಮುಗಿದ ಆಸ್ತಿಗಳ ಮಾಲೀಕರಿಗೆ ನೋಟಿಸ್ ನೀಡಿ, ಮುಗಿದ ಅವಧಿಯ ಬಾಡಿಗೆ ಮತ್ತು ದಂಡ ಪಡೆದುಕೊಳ್ಳಬೇಕು ಎಂದು ಮೇಯರ್ ಪ್ರೀತಿ ಕಾಮಕರ ಹೇಳಿದರು.

ಲೀಸ್ ಅವಧಿ ಮುಗಿದ ಮಹಾನಗರ ಪಾಲಿಕೆ ಆಸ್ತಿಗಳ ಕುರಿತು ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಿಕೆಗೆ ಮರಳಿ ಪಡೆದು ಪ್ರಸ್ತುತ ಬಾಡಿಗೆ ದರವನ್ನು ಮರು ನಿಗದಿ ಪಡಿಸಿ ಅರ್ಹ ಬಾಡಿಗೆದಾರಿಗೆ ನೀಡಬೇಕು. ಈ ಕುರಿತು ನಿಯಮಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಉಪಮೇಯರ್ ಹಣಮಂತ ಕೊಂಗಾಲಿ ಮಾತನಾಡಿ, ಅವಧಿ ಮುಗಿದಿದ್ದರೂ ಬಾಡಿಗೆದಾರರು ಆಸ್ತಿಗಳನ್ನು ಉಪಯೋಗಿಸುತ್ತಿರುವುದರಿಂದ ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಈ ಕುರಿತು ಪಾಲಿಕೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.ಕಂದಾಯ ವಿಭಾಗದ ಉಪಆಯುಕ್ತ ಡಾ.ಸಿದ್ದು ಹುಲ್ಲೋಳಿ ಅವರು, ಲೀಸ್ ಅವಧಿ ಮುಗಿದ ಆಸ್ತಿಗಳ ಕುರಿತು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.ಸಭೆಯಲ್ಲಿ ತೆರಿಗೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ, ರೇಖಾ ಹೂಗಾರ, ನಗರಸೇವಕರಾದ ರವಿ ಧೋತ್ರೆ, ಆನಂದ ಚೌಹಾಣ್, ರಾಜಶೇಖರ್ ಡೋಣಿ, ನಿತಿನ್ ಜಾಧವ್, ಶ್ರೀಶೈಲ್ ಕಾಂಬಳೆ, ಅವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಗೃತಿ ವಿಷಯದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು
ಬಿಜೆಪಿ ಯುವ ಮೋರ್ಚಾದಿಂದ ಸ್ವಚ್ಛತಾ ಕಾರ್ಯ