ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ಸುಕ್ಷೇತ್ರ ಶ್ರೀ ಮುರುಘಾ ಮಠದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಕಲ್ಯಾಣ ಮಂಟಪದ ಪ್ರಧಾನ ದ್ವಾರಬಾಗಿಲು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾರ್ಥ ತುಂಬಿದ ಬದುಕಿನಲ್ಲಿ ನಿಸ್ವಾರ್ಥತೆಯಿಂದ ಸಮಾಜ ಸೇವೆಯಲ್ಲಿ ತೊಡಗುವ ಯಾವುದೇ ವ್ಯಕ್ತಿಗೆ ಪ್ರತಿಯೊಬ್ಬರೂ ಮನ್ನಣೆ ನೀಡಬೇಕು. ಆಗ ಸಮಾಜ ಸುಧಾರಣೆ ಸಾಧ್ಯವಾಗುತ್ತದೆ ಎಂದ ಅವರು, ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ೨೫ ಲಕ್ಷ ರು.ಗಳನ್ನು ದೇಣಿಗೆಯಾಗಿ ನೀಡಲಾಗುವುದು. ಆದಷ್ಟು ಬೇಗ ಸಮುದಾಯ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳಲಿ ಎಂದು ಶುಭ ಹಾರೈಸಿದರು.ಪಟ್ಟಣದ ಮುರುಘಾ ಮಠದ ಆವರಣದಲ್ಲಿ ಪೂಜ್ಯರ ಸಂಕಲ್ಪದಂತೆ ಮತ್ತು ಎಲ್ಲಾ ಧರ್ಮ, ಸಮುದಾಯದವರ ಕಲ್ಯಾಣ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ನಡೆಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಭವ್ಯ ಕಟ್ಟಡದ ಪ್ರಧಾನ ಬಾಗಿಲು ಪೂಜಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಡೆ ಸಂಸ್ಥಾನ ಮಠ-ಸೊರಬ ಮುರುಘಾ ಮಠದ ಪೀಠಾಧ್ಯಕ್ಷ ಡಾ. ಮ.ನಿ.ಪ್ರ. ಮಹಾಂತ ಸ್ವಾಮಿಗಳು ವಹಿಸಿದ್ದರು. ಜಗದ್ಗುರು ವೃಷಬೇಂದ್ರ ದೇಶಿ ಕೇಂದ್ರ ಮಹಾಸ್ವಾಮಿಗಳು ತರಿಕೆರೆ, ಶಾಂತಾಪುರ ಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಯಾದಗಿರಿ ಪ್ರಭುಲಿಂಗಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ, ಜಿ.ಪಂ. ಮಾಜಿ ಸದಸ್ಯ ಕೆ.ಜೆ. ಲೋಲಾಕ್ಷಮ್ಮ, ತಾಪಂ ಮಾಜಿ ಅಧ್ಯಕ್ಷ ಹೆಚ್. ಗಣಪತಿ, ಹಿರಿಯ ವಕೀಲರಾದ ಎಂ.ಆರ್. ಪಾಟೀಲ್, ಜಯಶೀಲಗೌಡ, ಡಾ. ಹೆಚ್.ಇ. ಜ್ಞಾನೇಶ್, ವಿಜಯೇಂದ್ರಗೌಡ ಜಡೆ, ಡಿ. ಶಿವಯೋಗಿ, ಅಕ್ಕನ ಬಳಗದ ರೇಣುಕಮ್ಮ ಗೌಳಿ, ರೇಖಾ ಜಗದೀಶಗೌಡ, ಉಮಾ ಚಂದ್ರಶೇಖರ್, ಜಯಮಾಲಾ, ಪುಷ್ಪಾ ವಿಶ್ವನಾಥ, ರೂಪ ಸಿದ್ದಲಿಂಗ, ಹೇಮರಾಜ ಪಾಟೀಲ್, ನಿಜಗುಣ ಚಂದ್ರಶೇಖರ್ ಮೊದಲಾದವರು ಹಾಜರಿದ್ದರು.