ಹಾಲು ಉತ್ಪಾದಕರ ಬಾಕಿ ಪ್ರೋತ್ಸಾಹ ಧನ ನೀಡಿ

KannadaprabhaNewsNetwork | Published : Apr 1, 2025 12:47 AM

ಸಾರಾಂಶ

ಇಂದಿನ ವ್ಯವಸ್ಥೆಯಲ್ಲಿ ಮನೆಗೊಂದು ಹಸು ಇದ್ದರೆ ಅದು ಕಷ್ಟ ಕಾಲದಲ್ಲಿ ಕೃಷಿಕನ ಕೈ ಹಿಡಿಯುತ್ತದೆ. ಹಾಗಾಗಿ ಗ್ರಾಮೀಣ ಜನರು ಕೃಷಿ ಜೊತೆಗೆ ಕಷ್ಟ ಎಂದು ಕೈಚಲ್ಲದೆ ಉತ್ತಮ ತಳಿಯ ಜರ್ಸಿ, ಎಚ್.ಎಫ್ ಹಸುಗಳ ಸಾಕಾಣಿಕೆ ಮಾಡಿ ಹೆಚ್ಚು ಹಾಲು ಉತ್ಪಾದನೆಯಿಂದ ಆರ್ಥಿಕವಾಗಿ ಲಾಭ ಪಡೆಯಬಹುದು. ಅಲ್ಲದೆ ರಾಸುಗಳ ಆರೋಗ್ಯ ರಕ್ಷಣೆಗೆ ಜಾಗ್ರತೆ ವಹಿಸಿ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಡೀಕರಿಸಲು ಹೆಣಗಾಡುತ್ತಿರುವ ಸರ್ಕಾರ ಒಂದಲ್ಲ ಒಂದು ರೀತಿಯಲ್ಲಿ ಜನರ ಜೇಬಿಗೆ ಕೈಹಾಕುವ ಕೆಲಸ ಮಾಡುತ್ತಿದೆ, ಗ್ಯಾರಂಟಿ ಯೋಜನೆಗಳಿಂದ ಖಾಲಿಯಾದ ರಾಜ್ಯ ಖಜಾನೆ ತುಂಬಲು ವಿದ್ಯತ್ ದರ ಏರಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದೆ, ಈಗ ಹಾಲಿನ ದರ ಹೆಚ್ಚಿಸಲಾಗುತ್ತಿದೆ. ಆದರೆ ಇದುವರೆಗೂ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ ಹಳೆ ಬಾಕಿ ಕೊಟ್ಟಿಲ್ಲ, ಈ ತಕ್ಷಣ ಹಾಲು ಉತ್ಪಾದಕರ ಹಳೆ ಬಾಕಿ ತೀರಿಸುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಒತ್ತಾಯಿಸಿದರು. ಉತ್ತಮ ತಳಿಯ ಹಸು ಸಾಕಿ

ತಾಲೂಕಿನ ರಾಯಲ್ಪಾಡು ಹೋಬಳಿ ಕೂರಿಗೇಪಲ್ಲಿ ಪಶು ಚಿಕಿತ್ಸಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಇಂದಿನ ವ್ಯವಸ್ಥೆಯಲ್ಲಿ ಮನೆಗೊಂದು ಹಸು ಇದ್ದರೆ ಅದು ಕಷ್ಟ ಕಾಲದಲ್ಲಿ ಕೃಷಿಕನ ಕೈ ಹಿಡಿಯುತ್ತದೆ. ಹಾಗಾಗಿ ಗ್ರಾಮೀಣ ಜನರು ಕೃಷಿ ಜೊತೆಗೆ ಕಷ್ಟ ಎಂದು ಕೈಚಲ್ಲದೆ ಉತ್ತಮ ತಳಿಯ ಜರ್ಸಿ, ಎಚ್.ಎಫ್ ಹಸುಗಳ ಸಾಕಾಣಿಕೆ ಮಾಡಿ ಹೆಚ್ಚು ಹಾಲು ಉತ್ಪಾದನೆಯಿಂದ ಆರ್ಥಿಕವಾಗಿ ಲಾಭ ಪಡೆಯುವಂತೆ ಹೇಳಿದರು.

ಜಾನುವಾರು ಅರೋಗ್ಯ ಕಾಪಾಡಿ

ತಾಲೂಕು ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುಭಾನ್ ಮಾತನಾಡಿ, ಸಾವಿರಾರು ರೂ.ಗಳನ್ನು ನೀಡಿ ಸೀಮೆ ಹಸುಗಳನ್ನು ಖರೀದಿ ಮಾಡಿದರಷ್ಟೇ ಸಾಲದು. ಅವುಗಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ ಕಾಲಕಾಲಕ್ಕೆ ಪಶು ವೈದ್ಯರ ಸಲಹೆಗಳನ್ನು ಪಡೆದು ಲಸಿಕೆ ಕೊಡಿಸಿ ಕಾಲುಬಾಯಿ ಎಂತ ರೋಗಗಳನ್ನು ತಡೆಗಟ್ಟಲು ರೈತರು ಸ್ಥಳೀಯ ಪಶುವೈದ್ಯರೊಂದಿಗೆ ಸಂಪರ್ಕದಲ್ಲಿರುವಂತೆ ಸಲಹೆ ನೀಡಿದರು.ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಪಶು ಪಾಲನ ಇಲಾಖೆ ಉಪ ನಿರ್ದೇಶಕ ಡಾ.ಜಿ.ಎಂ.ರಮೇಶ್, ಮಾಲೂರು ತಾಲೂಕು ಸಹಾಯಕ ನಿರ್ದೇಶಕಿ ಡಾ.ವೀಣಾ, ಕೋಲಾರ ತಾಲೂಕು ಸಹಾಯಕ ನಿರ್ದೇಶಕ ಡಾ.ವಿಜಯ್‌ಪಾಟೀಲ್, ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ.ಸ್ವಾತಿ, ಡಾ.ವೆಂಕಟಶಿವಾರೆಡ್ಡಿ, ರಾಯಲ್ಪಾಡು ಆಸ್ಪತ್ರೆ ಡಾ.ಸಂದೀಪ್‌ರೆಡ್ಡಿ, ಸ್ಥಳೀಯ ಮುಖಂಡರಾದ ಸುಧಾಕರ್, ಶ್ರೀನಿವಾಸ್, ನರೇಶ್, ಕೋಡಿಪಲ್ಲಿ ವೆಂಕಟರಮಣಾರೆಡ್ಡಿ, ಕೆ.ಸಿ.ಕೃಷ್ಣಾರೆಡ್ಡಿ, ಗುಟ್ಟಿಮಿಂದವಾರಿಪಲ್ಲಿ ಚಂದ್ರ, ಮಂಜುನಾಥ್, ರಾಮಲಿಂಗಾರೆಡ್ಡಿ ಇದ್ದರು.

Share this article