ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿಯ ಯುವಸಮೂಹ ಬೆಂಬಲ ಮೃಣಾಲ್ ಪರವಾಗಿದೆ. ದಯವಿಟ್ಟು ಯಂಗ್‌ಸ್ಟರ್ಸ್‌ಗೆ ಒಂದು ಅವಕಾಶ ಮಾಡಿಕೊಡಿ. ಆ ಹುಡುಗ ಖಂಡಿತವಾಗಿ ಬದಲಾವಣೆ ತರುತ್ತಾರೆ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ ಕೋರಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಪ್ರಭಾವಿ ಸಚಿವೆಯಾಗಿ 1.3 ಕೋಟಿ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆ ತಲುಪಿಸಿದ್ದಾರೆ. ರಾಜಕಾರಣದಲ್ಲಿ ಲಕ್ಷ್ಮೀ ಹೆಬ್ಬಾಳಕರ ಫೈಟರ್ ಆಗಿ ಅದ್ಭುತ್ ಸಾಧನೆ ಮಾಡಿದ್ದಾರೆ. ಅಲ್ಲದೇ ಬಡವರ ಕಷ್ಟಕ್ಕೆ ಸ್ಪಂದಿಸುತ್ತಿರುವ ಅವರ ಮಗನೂ ಗೆಲ್ಲಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಪ್ರಣಾಳಿಕೆಯಲ್ಲಿ ಮೋದಿ ಗ್ಯಾರಂಟಿ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮದು ಕಾಂಗ್ರೆಸ್ ಗ್ಯಾರಂಟಿ ಬಡವರ ಗ್ಯಾರಂಟಿ ಕಷ್ಟಕ್ಕೆ ಕಣ್ಣೀರೊರೆಸುವ ಗ್ಯಾರಂಟಿ, ಬೆಳಗಾವಿ ಜನತೆ ಆತ್ಮಾಭಿಮಾನದ ಗ್ಯಾರಂಟಿ, ಬೆಳಗಾವಿ ಮಣ್ಣಿನ ತಾಕತ್ತಿನ ಗ್ಯಾರಂಟಿ ಮೃಣಾಲ್ ಗೆದ್ದೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಗದೀಶ್ ಶೆಟ್ಟರ ಸಾಹೇಬರು ಹಿರಿಯರು, ಅವರು ಮುಖ್ಯಮಂತ್ರಿ ಆಗಿದ್ದಾರೆ, ಸಚಿವರಾಗಿದ್ದಾರೆ. ನಾನು ಜನರಿಗೆ ಕೇಳೋದಿಷ್ಟೇ ಏಷ್ಟು ಸಾರಿ ಅಂತಾ ಅವರಿಗೆ ಅವಕಾಶ ಕೊಡ್ತೀರಾ?. ನನ್ನ ತಮ್ಮನಿಗೂ ಒಂದು ಅವಕಾಶ ಕೊಡಿ. ಮೃಣಾಲ್ ಗೆದ್ದೇ ಗೆಲ್ತಾರೆ, ಬೆಳಗಾವಿ ಜನ ಗೆಲ್ಲಿಸುತ್ತಾರೆ.-ಪ್ರದೀಪ್ ಈಶ್ವರ,
ಶಾಸಕ.