ಓದಿಗಾಗಿ ಸಮಯ ಕೊಡಿ ಜೀವನದ ಶೈಲಿಯೇ ಬದಲಾಗುತ್ತೆ

KannadaprabhaNewsNetwork | Published : Dec 4, 2024 12:34 AM

ಸಾರಾಂಶ

ನಿಮ್ಮ ಜೀವನದಲ್ಲಿ ದಿನಕ್ಕೆ ಓದಿಗಾಗಿ ಸಮಯ ಕೊಡಿ ನಿಮ್ಮ ಜೀವನದ ಶೈಲಿಯೇ ಬದಲಾಗುತ್ತೆ ಎಂದು ಗಡಿನಾಡು ಕೋಚಿಂಗ್ ಸೆಂಟರ್‌ನ ನಿರ್ದೇಶಕರಾದ ಲಕ್ಷ್ಮಣ ಅಷ್ಟಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಿಮ್ಮ ಜೀವನದಲ್ಲಿ ದಿನಕ್ಕೆ ಓದಿಗಾಗಿ ಸಮಯ ಕೊಡಿ ನಿಮ್ಮ ಜೀವನದ ಶೈಲಿಯೇ ಬದಲಾಗುತ್ತೆ ಎಂದು ಗಡಿನಾಡು ಕೋಚಿಂಗ್ ಸೆಂಟರ್‌ನ ನಿರ್ದೇಶಕರಾದ ಲಕ್ಷ್ಮಣ ಅಷ್ಟಗಿ ಹೇಳಿದರು.

ನಗರದ ಗಡಿನಾಡು ಕೋಚಿಂಗ್‌ ಸೆಂಟರ್‌ನಲ್ಲಿ ಭಾನುವಾರ ನಡೆದ ಕೆಎಎಸ್, ಪಿಎಸೈ ಮತ್ತು ಪೊಲೀಸ್ ಕಾನ್‌ಸ್ಟೆಬಲ್‌ಗೆ ಸಂಬಂಧಿಸಿದಂತೆ ಉಚಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಸಾಗರದಷ್ಟೇ ವಿಷಯಗಳನ್ನು ಒಳಗೊಂಡಿದ್ದು, ಅದರಲ್ಲಿ ಸರಿಯಾಗಿ ಈಜಿ ದಡ ಸೇರಿದವನಿಗೆ ಮಾತ್ರ ಯಶಸ್ಸು ದೊರೆಯಲು ಸಾಧ್ಯ ಎಂದು ಕಿವಿಮಾತು ಹೇಳಿದರು.ದೂರಿನಿಂದಲೇ ನೋಡಿ ಅಳೆಯಲು ಸಾಧ್ಯವಿಲ್ಲ. ಶಾಲಾ ಶಿಕ್ಷಣದಲ್ಲಿ ಪೇಲಾಗಿ ನಂತರ ಪಾಸಾದ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತವಾದ ಸರ್ಕಾರಿ ಹುದ್ದೆಯಲ್ಲಿದ್ದಾರೆ. ಏಕೆಂದರೆ ಅವರು ಇಂದು ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.ಪೊಲೀಸ್‌ ಇನ್‌ಸ್ಪೆಕ್ಟರ್ ವಿಠ್ಠಲ್ ಆರೇರ ಮಾತನಾಡಿ, ನಮ್ಮ ಬಾಲ್ಯದ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ಬಯವಿತ್ತು. ಅವರಿಗೆ ನಾವು ಗೌರವ ಕೊಡುತ್ತಿದ್ದೇವು. ಆದರೆ, ಇಂದಿನ ಶಾಲಾ ವಿದ್ಯಾರ್ಥಿಗಳಲ್ಲಿ ಅದೆಲ್ಲ ಕಡಿಮೆಯಾಗಿದೆ. ಇಂದಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಡೆಯುವುದನ್ನು ಕಮ್ಮಿ ಮಾಡಿದರಿಂದ ಪೊಲೀಸ್‌ ಠಾಣೆಯಲ್ಲಿ ಯುವಕರು ಹೊಡೆಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಶಿಕ್ಷಕರ ಮೇಲೆ ಭಯ ಮತ್ತು ಗೌರವವಿದ್ದರೇ ಯಾವ ಯುವಕನು ತಪ್ಪು ಮಾಡಲಾರ ಎಂದು ತಿಳಿಸಿದರು.ಇಂದಿನ ಆಧುನಿಕ ಯುಗದಲ್ಲಿ ದಿನನಿತ್ಯ ಬದಲಾವಣೆಗಳು ಆಗುತ್ತಿವೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಬದಲಾಗುತ್ತಿದ್ದಾರೆ. ಮೊದಲಿನ ಶಿಕ್ಷಣಕ್ಕೂ, ಈಗಿನ ಶಿಕ್ಷಣಕ್ಕೂ ಬಹಳ ಬದಲಾವಣೆಯಿದೆ. ಮೊದಲಿನ ಕಾಲದಲ್ಲಿ ಪೊಲೀಸ್‌ ಇಲಾಖೆಗೆ ಸೇರಲು ಯಾರು ಮುಂದೆ ಬರುತ್ತಿರಲ್ಲಿ. ಆದರೆ, ಇವಾಗ ಕಾಲ ಬದಲಾಗಿದೆ. ಒಂದು ಹುದ್ದೆಗೆ ಸುಮಾರು ನೂರು ಜನ ಸ್ಪರ್ಧೆ ಕೊಡುವಂತಾಗಿದೆ ಎಂದರು.ಕಾರ್ಯಾಗಾರದಲ್ಲಿ ಗಡಿನಾಡು ಕೋಚಿಂಗ್ ಸೆಂಟರ್‌ನ ಸಂಸ್ಥಾಪಕ ಮಾರುತಿ ಅಷ್ಟಗಿ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಯಾವತ್ತು ಕಲಿಯುವುದನ್ನು ನಿಲ್ಲಿಸಬೇಡಿ, ಏಕೆಂದರೆ ಜೀವನ ಎಂದಿಗೂ ಕಲಿಯುವುದನ್ನು ನಿಲ್ಲಿಸುವುದಿಲ್ಲ. ನೀವು ಜೀವನ ಪೂರ್ತಿ ಓದಿದರು ಮುಗಿಯಲಾರದಷ್ಟು ವಿಷಯಗಳಿವೆ. ವಿದ್ಯಾರ್ಥಿಗಳ ಜೀವನ ಒಂದು ಕಾಲಿ ಬಿಳಿಹಾಳೆ. ಅದರಲ್ಲಿ ನಿಮ್ಮ ಭವಿಷ್ಯವನ್ನು ನೀವೇ ಬರೆದುಕೊಳ್ಳಬೇಕು. ನಿಮ್ಮ ತಂದೆ-ತಾಯಿಯರು ಸಮಾಜದಲ್ಲಿ ನಾಲ್ಕು ಜನರ ಮುಂದೆ ತಲೆ ಎತ್ತಿ ನಡೆದುಕೊಂಡು ಹೋಗುವಂತೆ ಮಾಡಿ. ಆದರೆ, ಎಂದಿಗೂ ತಲೆ ತಗ್ಗಿಸುವಂತ ಕೆಲಸ ಮಾಡಬೇಡಿ.

-ಲಕ್ಷ್ಮಣ ಅಷ್ಟಗಿ,

ಗಡಿನಾಡು ಕೋಚಿಂಗ್ ಸೆಂಟರ್‌ನ ನಿರ್ದೇಶಕರು.

18 ರಿಂದ 25ರ ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗದೇ ಸರಿಯಾದ ಗುರುವಿನ ಮಾರ್ಗದಲ್ಲಿ ನಡೆದರೇ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗುವುದು. ನಾನು ಈ ಇಲಾಖೆಯಲ್ಲಿ ಇಷ್ಟು ಉನ್ನತವಾದ ಹುದ್ದೆಗೆ ಬೆಳೆಯಲು ಪ್ರಮುಖ ಕಾರಣ ನಮ್ಮ ಲಕ್ಷ್ಮಣ ಅಷ್ಟಗಿ ಗುರುಗಳು. ಯಾವಗಲು ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು.

-ವಿಠ್ಠಲ್ ಆರೇರ,

ಪೊಲೀಸ್‌ ಇನ್‌ಸ್ಪೆಕ್ಟರ್.

Share this article