ದಾನ ಧರ್ಮ ಮಾಡುವುದೇ ನಿಜವಾದ ರಂಜಾನ್ ಆಚರಣೆ

KannadaprabhaNewsNetwork |  
Published : Apr 01, 2025, 12:48 AM IST
ಗಜೇಂದ್ರಗಡದ ರಂಜಾನ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರು ಮೆರವಣಿಗೆ ಮೂಲಕ ಸಾಮೂಹಿಕ ಪ್ರಾರ್ಥನೆಗೆ ಈದ್ಗಾ ಮೈದಾನದತ್ತ ಸಾಗಿದರು. | Kannada Prabha

ಸಾರಾಂಶ

ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಮುಸ್ಲಿಂ ಬಾಂಧವರು ಕುಷ್ಟಗಿ ರಸ್ತೆ ಮೂಲಕ ಧರ್ಮಗುರುಗಳ ನೇತೃತ್ವದಲ್ಲಿ ಸಾಗುವ ಮೂಲಕ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಗಜೇಂದ್ರಗಡ: ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಮುಸ್ಲಿಂ ಬಾಂಧವರು ಕುಷ್ಟಗಿ ರಸ್ತೆ ಮೂಲಕ ಧರ್ಮಗುರುಗಳ ನೇತೃತ್ವದಲ್ಲಿ ಸಾಗುವ ಮೂಲಕ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಧರ್ಮಗುರು ಹಜರತ್‌ಮಹ್ಮದ ಶಾಹಿದ್ ರಜಾ ಈದ್-ಉಲ್-ಫಿತರ್ ನಿಮಿತ್ತ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಮಾತನಾಡಿ, ಸಮಾಜದಲ್ಲಿನ ಎಲ್ಲರೊಂದಿಗೆ ಸಹಬಾಳ್ವೆ ಹಾಗೂ ಸಹಾನುಭೂತಿ ತೋರುವ ಮೂಲಕ ಉದಾರವಾಗಿ ದಾನ ಧರ್ಮ ಮಾಡುವುದೇ ನಿಜವಾದ ರಂಜಾನ್ ಹಬ್ಬ ಆಚರಣೆ. ಹೀಗಾಗಿ ಹಬ್ಬವನ್ನು ಖುಷಿಯಿಂದ ಆಚರಿಸುವುದರ ಜೊತೆಗೆ ಪವಿತ್ರ ಕುರಾನಿನಲ್ಲಿ ಹೇಳಿದ ಎಲ್ಲಾ ವ್ರತಗಳು, ಆಚಾರ ವಿಚಾರಗಳು, ರೀತಿ-ನೀತಿಗಳು ಮಾನವನಿಗೆ ತನ್ನ ನೈತಿಕ ಮಟ್ಟ ಸುಧಾರಿಸುವ ಸಾಧನೆಗಳಾಗಿವೆ ಎಂದರು.ಬೆ‍ಳಗ್ಗೆ ಇಲ್ಲಿನ ಜಾಮೀಯಾ ಮಸೀದಿಯಿಂದ ಅಲ್ಲಾಹನ ನಾಮ ಸ್ಮರಣೆ ಮಾಡುತ್ತಾ ಪಟ್ಟಣದ ಬಸವೇಶ್ವರ ವೃತ್ತ ದುರ್ಗಾವೃತ್ತ, ಕೆ.ಕೆ. ವೃತ್ತ ಮಾರ್ಗವಾಗಿ ಕಾಲನಡಿಗೆಯೊಂದಿಗೆ ಸಂಚರಿಸುವ ಮೂಲಕ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಈ ವೇಳೆ ಖಲೀಲ್ ಅಹ್ಮದ ಖಾಜಿ, ಮಹ್ಮದ್ ಯಾಸಿನ್ ಮೌಲಾನ್, ಮಹ್ಮದ ರಫೀಕ್ ಹಾಳಗಿ, ಹಜರತ್ ನಿಜಾಮುದ್ದಿನ್‌ಶಾ ಅಶ್ರಫಿ ಮಕನಾದರ, ಅಂಜುಮನ್ ಇಸ್ಲಾಂ ಸಂಸ್ಥೆಯ ಚೇರಮನ್ ನೂರಲ್ ಹಸನ ತಟಗಾರ, ಹೆಚ್.ಎಂ. ಹಿರೇಹಾಳ, ಫಯಾಜ್ ತೋಟದ, ಆಶ್ರಫಲಿ ಗೋಡೆಕಾರ, ದಾವಲ ತಾಳಿಕೋಟಿ, ಎಸ್.ಎಂ. ಆರಗಿದ್ದಿ, ಎಂ.ಎಚ್. ಕೋಲಕಾರ, ಎ.ಡಿ. ಕೋಲಕಾರ, ಪುರಸಭೆ ಸದಸ್ಯರಾದ ರಾಜು ಸಾಂಗ್ಲಿಕರ, ಮುರ್ತುಜಾ ಡಾಲಾಯತ್ ಹಾಗೂ ಶಾಮಿದ್ ಮಾಲ್ದಾರ, ಮಾಸುಮಲಿ ಮದಗಾರ, ನಾಸೀರಅಲಿ ಸುರಪುರ, ದಾದು ಹಣಗಿ, ಎಂ.ಬಿ.ಕಂದಗಲ್ಲ, ಇಮ್ರಾನ್ ಅತ್ತಾರ, ಬಾಷಾ ಮುದಗಲ್, ಮುರ್ತುಜಾ ವಂಟಿ, ರಾಜು ನಿಶಾನದಾರ, ಮಹಮ್ಮದ ನಾಲಬಂದ, ಮರ್ದನಸಾಬ ಹುನಗುಂದ ಸೇರಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮದ ಮುಸ್ಲಿಂ ಬಾಂಧವರು ಪ್ರಾಥನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''