ಇಂದಿನಿಂದ ವೈಭವದ ಉಚ್ಚಿಲ ದಸರಾ - 2023

KannadaprabhaNewsNetwork |  
Published : Oct 15, 2023, 12:46 AM IST
ಉಚ್ಚಿಲ ದಸರಾ ವಿದ್ಯುತ್ ದೀಪಾಲಂಕಾರವನ್ನು ಪ್ರಕಾಶ್ ಶೆಟ್ಟಿ ಬಂಜಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಬೆಳಿಗ್ಗೆ 9.30ಕ್ಕೆ ಶ್ರೀ ಶಾರದೆ ಮತ್ತು ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಲಿದೆ. 10 ಗಂಟೆಗೆ ಉಚ್ಚಿಲ ದಸರೆ ಉದ್ಘಾಟನೆಗೊಳ್ಳಲಿದೆ. 10.30ರಿಂದ 3ರವರೆಗೆ ವಿವಿಧ ಭಜನಾ ತಂಡಗಳಿಂದ ಸಂಕೀರ್ತನೆ, 12 ಗಂಟೆಗೆ ನವದುರ್ಗೆಯವರಿಗೆ ಮಹಾಮಂಗಳಾರತಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕಾಪು ಅತ್ಯಂತ ವೈಭವದಿಂದ ಇಲ್ಲಿನ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯಲಿರುವ ಉಚ್ಚಿಲ ದಸರಾ - 2023ಕ್ಕೆ ಇಂದು ಭಾ ವಿದ್ಯುಕ್ತ ಚಾಲನೆ ದೊರೆಯಲಿದೆ. ಇಂದು ಬೆಳಿಗ್ಗೆ 9.30ಕ್ಕೆ ಶ್ರೀ ಶಾರದೆ ಮತ್ತು ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಲಿದೆ. 10 ಗಂಟೆಗೆ ಉಚ್ಚಿಲ ದಸರೆ ಉದ್ಘಾಟನೆಗೊಳ್ಳಲಿದೆ. 10.30ರಿಂದ 3ರವರೆಗೆ ವಿವಿಧ ಭಜನಾ ತಂಡಗಳಿಂದ ಸಂಕೀರ್ತನೆ, 12 ಗಂಟೆಗೆ ನವದುರ್ಗೆಯವರಿಗೆ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಮತ್ತು ರಾತ್ರಿ 8ರಿಂದ 10.30ರವರೆಗೆ ಯುವ ನೃತ್ಯೋತ್ಸವ - ನೃತ್ಯ ಸ್ಪರ್ಧೆ, 5.30ರಿಂದ ಸಾವಿರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ. 6.15.ರಿಂದ 7 ಗಂಟೆವರೆಗೆ ಯುವ ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಂತರ ಮಂಗಳೂರಿನ ಜರ್ನಿ ಥಿಯೇಟರ್ ಗ್ರೂಪ್‌ನಿಂದ ರಂಗಗೀತೆಗಳು ಮತ್ತು ಜನಪದ ಗೀತೆ ಗಾಯನ ನಡೆಯಲಿದೆ. 7.30ಕ್ಕೆ ನವದುರ್ಗೆಯವರಿಗೆ ಮಹಾಪೂಜೆ ನಡೆಯುತ್ತದೆ. ಝಗಮಗಿಸುತ್ತಿರುವ ಉಚ್ಚಿಲ: ಉಚ್ಚಿಲ ದಸರೆಯ ಪ್ರಯುಕ್ತ ಉಚ್ಚಿಲ ಮಹಾಲಕ್ಷ್ಮೀ ದೇವಾಲಯದ ಪರಿಸರವನ್ನು ವಿದ್ಯುತ್ ದೀಪಗಳಿಂದ ಭವ್ಯವಾಗಿ ಅಲಂಕರಿಸಲಾಗಿದ್ದು, ಈ ಅಲಂಕಾರವನ್ನು ಎಂ.ಆರ್.ಜಿ. ಗ್ರೂಪ್‌ನ ಅಧ್ಯಕ್ಷ ಬಂಜಾರ ಪ್ರಕಾಶ್ ಶೆಟ್ಟಿ ಅವರು ಶನಿವಾರ ಸಂಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಜಿ. ಶಂಕರ್, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಸುವರ್ಣ, ದೇವಳದ ಪ್ರಮುಖರಾದ ಗುಂಡು ಬಿ. ಅಮೀನ್, ಆನಂದ್ ಸಿ. ಕುಂದರ್, ಸತೀಶ್ ಅಮೀನ್ ಪಡುಕರೆ, ವಾಸುದೇವ ಸಾಲ್ಯಾನ್, ರಾಘವೇಂದ್ರ ಉಪಾದ್ಯಾಯ, ಮೋಹನ್ ಬೆಂಗ್ರೆ, ಸುಧಾಕರ ಕುಂದರ್, ಶ್ರೀಪತಿ ಭಟ್, ಉಷಾರಾಣಿ, ಶಂಕರ್ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಕ್ಷೇತ್ರಕ್ಕೆ ಭೇಟಿ ನೀಡಿದರು, ಅವರನ್ನು ನಾಡೋಜ ಜಿ.ಶಂಕರ್ ಬರ ಮಾಡಿಕೊಂಡರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’