ಕನ್ನಡಪ್ರಭ ವಾರ್ತೆ ಯಮಕನಮರಡಿ
ಪ್ರತಿಯೊಬ್ಬರೂ ಜೀವನದಲ್ಲಿ ಗುರಿ ಮುಟ್ಟಲು ಕನಸು ಕಾಣುವುದು ಸಹಜ. ಆದರೆ, ಆ ಕನಸು ನನಸಾಗಬೇಕಾದರೆ ನಿರಂತರ ಪರಿಶ್ರಮ, ಶ್ರದ್ಧೆ ನಿಷ್ಠೆಯಿಂದ ಕಾರ್ಯ ಮಾಡಬೇಕೆಂದು ಖ್ಯಾತ ಹಿರಿಯ ಸಾಹಿತಿ ಎಸ್.ಎಂ. ಶಿರೂರ್ ಹೇಳಿದರು.ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್‌ನ ಶ್ರೀ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ 2023-24ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರಂಭ, ಬಿ.ಎ ಹಾಗೂ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯ ಬೆಳೆಸಿಕೊಂಡು ಆದರ್ಶ ಬದುಕು ಕಟ್ಟಿಕೊಳ್ಳಬೇಕೆಂದು ಹೇಳಿದರು
ಬಿಜೆಪಿ ಹುಕ್ಕೇರಿ ಮಂಡಲದ ಅಧ್ಯಕ್ಷ ರಾಚಯ್ಯ ಗುರುಪಾದಯ್ಯ ಹಿರೇಮಠ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಕಲಿಯಬೇಕೆಂಬ ಸದುದ್ದೇಶದಿಂದ ಶಿಕ್ಷಣ ಪ್ರೇಮಿಗಳಾದ ಗುರಪ್ಪ ತಳವಾರ ಹಿಡಕಲ್ ಜಲಾಶಯದ ಪರಿಸರದಲ್ಲಿ ಬಸವೇಶ್ವರ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸುತ್ತಿರುವ ಅವರ ಶೈಕ್ಷಣಿಕ ಸೇವೆಯು ಶ್ಲಾಘನೀಯ ಎಂದು ಹೇಳಿದರುಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗುರಪ್ಪ ತಳವಾರ ಅವರು ನಮ್ಮ ಮಹಾವಿದ್ಯಾಲಯದಲ್ಲಿ ನವಿದ್ಯಾರ್ಥಿಗಳು ಉತ್ತಮ ರೀತಿಯ ಫಲಿತಾಂಶ ತಂದು ಸಮಾಜಕ್ಕೆ ಹಾಗೂ ಪಾಲಕ ಪೋಷಕರಿಗೆ ಒಳ್ಳೆಯ ಹೆಸರು ತರಬೇಕೆಂದು ಹೇಳಿದರು.
ಈ ವೇಳೆಯಲ್ಲಿ ಘೋಡಗೇರಿ ಪಿಕೆಪಿಎಸ್ ನಿರ್ದೇಶಕ ಬಾಬಾಲಾಲ ಮೋಕಾಶಿ, ಘೋಡಗೇರಿ ಗ್ರಾಪಂ ಸದಸ್ಯ ಟಿ.ಎ. ಬಸ್ತವಾಡಿ, ಆಸ್ಪಾಕ್ ಮೋಕಾಶಿ ಇದ್ದರು.ಕಾರ್ಯಕ್ರಮ ಉದ್ದೇಶಿಸಿ ಮಹಾವಿದ್ಯಾಲಯದ ಪ್ರಾಚಾರ್ಯ ಮಹೇಶ್ ಅಂಗಡಿ ಮಾತನಾಡಿದರು. ಅರ್ಥಶಾಸ್ತ್ರ ಉಪನ್ಯಾಸಕರಾ ಎ.ವೈ. ಸೋನ್ಯಾಗೋಳ ವಾರ್ಷಿಕ ವರದಿ ವಾಚಿಸಿದರು. ಕನ್ನಡ ಉಪನ್ಯಾಸಕರಾದ ಎಂ.ಕೆ. ಹಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕರಾದ ಎಸ್.ಕೆ. ಸಣ್ಣಕ್ಕಿ, ಎಸ್ ಟಿ. ವಡ್ಡರ, ಜೆ.ಎ. ಹೊಸಮನಿ ಅನಿಸಿಕೆ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳಾದ ಸಾವಿತ್ರಿ ಶೆಗುಣಸಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಭಾಗ್ಯಶ್ರೀ ಗೂಳಪ್ಪಗೋಳ ಸ್ವಾಗತ ಗೀತೆ ಹಾಡಿದರು. ಲಕ್ಷ್ಮೀ ಶಿಂಗೇ ಪರಿಚಯಿಸಿದರು. ಉಮಾ ಮುಗಳಿ ಹಾಗೂ ವಿಜಯಲಕ್ಷ್ಮಿ ಚೌಗಲಾ ನಿರೂಪಿಸಿದರು.