ಯಾರ ಮನಸ್ಸುಗಳಿಗೆ ನೋವುಂಟು ಮಾಡುವ ಕಾರ್ಯ ಎಂದಿಗೂ ಮಾಡಬಾರದು, ನಾವು ಶುದ್ಧ ಮನಸ್ಸಿನಿಂದ ಉತ್ತಮ ಕಾರ್ಯ ಮಾಡಬೇಕು
ಕುಷ್ಟಗಿ: ಶುದ್ಧ ಮನಸ್ಸಿನಿಂದ ಕಾಯಕ ಮಾಡಿದಾಗ ಮಾತ್ರ ನಮ್ಮ ಶ್ರಮಕ್ಕೆ ದೇವರು ಫಲ ಕೊಡುತ್ತಾನೆ ಎಂದು ಭೋವಿ ಸಮಾಜದ ಗುರು ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಮಾದಾಪೂರು ಗ್ರಾಮದಲ್ಲಿ ಭೋವಿ ಸಮಾಜದಿಂದ ನಡೆದ ಶ್ರೀಸಿದ್ಧರಾಮೇಶ್ವರ ಸ್ವಾಮೀಜಿಗಳಿಗೆ ತುಲಾಭಾರ, ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯಾರ ಮನಸ್ಸುಗಳಿಗೆ ನೋವುಂಟು ಮಾಡುವ ಕಾರ್ಯ ಎಂದಿಗೂ ಮಾಡಬಾರದು, ನಾವು ಶುದ್ಧ ಮನಸ್ಸಿನಿಂದ ಉತ್ತಮ ಕಾರ್ಯ ಮಾಡಬೇಕು ಎಂದರು.
ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದ ಅವರು, ಭೋವಿ ಸಮಾಜವು ಒಗ್ಗಟ್ಟಾಗುವ ಮೂಲಕ ಸಮಾಜದಲ್ಲಿನ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಸದೃಢ ಸಮಾಜ ಕಟ್ಟುವ ಜತೆಗೆ ಶೈಕ್ಷಣಿಕ,ರಾಜಕೀಯ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ತಿಳಿಸಿದರು.
ಇಮ್ಮಡಿ ಸಿದ್ಧರಾಮೇಶ್ವರ ವೃತ್ತಕ್ಕೆ ಪೂಜೆ ಸಲ್ಲಿಸಲಾಯಿತು, ನಂತರದಲ್ಲಿ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಭೋವಿ ಸಮಾಜದ ಮುಖಂಡ ಕೊಳ್ಳಪ್ಪ, ಹನುಮಪ್ಪ ಗೌಂಡಿ, ಚಿದಾನಂದಪ್ಪ, ರಾಜಪ್ಪ, ಯಲ್ಲಪ್ಪ, ಶರಣಗೌಡ ಪಾಟೀಲ, ನಾಗನಗೌಡ ಪಾಟೀಲ, ರಾಮಣ್ಣ ಬೋದುರು, ಸಿದ್ದಲಿಂಗೇಶ್ವರ, ಮಹಾಂತೇಶ ಹುನಕುಂಟಿ, ಯಮನೂರಪ್ಪ ಕಟಗಿ, ಹನಮಂತಪ್ಪ ಗಡಾದ ಸೇರಿದಂತೆ ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.