ಭಕ್ತಿಗೆ ದೇವರ ಮನೆ, ಜ್ಞಾನಕ್ಕೆ ಪುಸ್ತಕ ಮನೆ: ಡಾ. ಮಾನಸ

KannadaprabhaNewsNetwork |  
Published : May 24, 2026, 02:45 AM IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮನೆಗೊಂದು ಗ್ರಂಥಾಲಯವನ್ನು ಡಾ. ಮಾನಸ ಅವರು ಉದ್ಘಾಟಿಸಿದರು | Kannada Prabha

ಸಾರಾಂಶ

ಭಕ್ತಿಯ ಸಂಕೇತವಾಗಿ ಎಲ್ಲರ ಮನೆಯಲ್ಲೂ ದೇವರ ಮನೆ ಇರುವಂತೆಯೇ ಜ್ಞಾನದ ಸಂಕೇತವಾಗಿ ಪ್ರತಿ ಮನೆಯಲ್ಲೂ ಪುಸ್ತಕ ಮನೆ ಅಂದರೇ ಗ್ರಂಥಾಲಯ ಇರಬೇಕು. ಪುಸ್ತಕಗಳ ಓದಿನಿಂದ ಬದುಕಿನಲ್ಲಿ ಎಂತಹ ಸವಾಲು ಬಂದರೂ ಎದುರಿಸಿ ಗೆಲ್ಲುವ ಮನೋಸ್ಥೈರ್ಯ ಬರುತ್ತದೆ ಎಂದು ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಭಿಪ್ರಾಯಪಟ್ಟರು.

ಉಡುಪಿ: ಭಕ್ತಿಯ ಸಂಕೇತವಾಗಿ ಎಲ್ಲರ ಮನೆಯಲ್ಲೂ ದೇವರ ಮನೆ ಇರುವಂತೆಯೇ ಜ್ಞಾನದ ಸಂಕೇತವಾಗಿ ಪ್ರತಿ ಮನೆಯಲ್ಲೂ ಪುಸ್ತಕ ಮನೆ ಅಂದರೇ ಗ್ರಂಥಾಲಯ ಇರಬೇಕು. ಪುಸ್ತಕಗಳ ಓದಿನಿಂದ ಬದುಕಿನಲ್ಲಿ ಎಂತಹ ಸವಾಲು ಬಂದರೂ ಎದುರಿಸಿ ಗೆಲ್ಲುವ ಮನೋಸ್ಥೈರ್ಯ ಬರುತ್ತದೆ ಎಂದು ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಉಡುಪಿ ಶ್ರೀಕೃಷ್ಣ ಮಠ ಸಮೀಪದ ವಾದಿರಾಜ ರಸ್ತೆ ಮಾರ್ಗದಲ್ಲಿರುವ ಉಡುಪಿ ಟೆಂಪಲ್ ಇನ್ ಹೋಮ್ ಸ್ಟೇಯಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ‘ಮನೆಗೊಂದು ಗ್ರಂಥಾಲಯ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಉಡುಪಿ ತಾಲೂಕು ಕಸಾಪ ಅಧ್ಯಕ್ಷ ಹಾಗೂ ಮನೆಗೊಂದು ಗ್ರಂಥಾಲಯ ಅಭಿಯಾನದ ಉಡುಪಿ ಜಿಲ್ಲಾ ಸಹಸಂಚಾಲಕ ರವಿರಾಜ್ ಎಚ್.ಪಿ. ಮಾತನಾಡಿ, ತಾಲೂಕು ಕಸಾಪ ವತಿಯಿಂದ 2 ವರ್ಷದ ಹಿಂದೆಯೇ ‘ಮನೆಯೇ ಗ್ರಂಥಾಲಯ’ ಅಭಿಯಾನ ಆರಂಭಗೊಂಡಿದ್ದು ಮುಂದುವರಿದಿದೆ. ಬಸ್ ನಿಲ್ದಾಣ, ಆಸ್ಪತ್ರೆ, ಐಸ್ಕ್ರೀಮ್ ಅಂಗಡಿಗಳಲ್ಲೂ ಸಹ ಗ್ರಂಥಾಲಯ ತೆರೆದಿದ್ದೇವೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ 210 ಮನೆಗಳಲ್ಲಿ ಗ್ರಂಥಾಲಯ ನಿರ್ಮಾಣವಾಗಿದೆ ಎಂದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಯು. ವಿಶ್ವನಾಥ್ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ್ ಶೆಟ್ಟಿ ಎಕ್ಕಾರು, ಕಸಾಪ ತಾಲೂಕು ಘಟಕದ ರಂಜಿನಿ ವಸಂತ್, ದೀಪಾ ಕರ್ಕಿ, ಸತೀಶ್ ಕೊಡವೂರು, ರಾಜೇಶ್ ಭಟ್ ಪಣಿಯಾಡಿ ಉಪಸ್ಥಿತರಿದ್ದರು.

ಮನೆಗೊಂದು ಗ್ರಂಥಾಲಯ ಉಡುಪಿ ಜಿಲ್ಲಾ ಜಾಗೃತಿ ಸಮಿತಿ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರನ್ನು ಉಡುಪಿ ತಾಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು.ಜನಾರ್ದನ್ ಕೊಡವೂರು ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಜನಾರ್ದನ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಹ್ಮಾವರ ಜಿ ಎಮ್ ಶಾಲೆಯಲ್ಲಿ ರಾಜ್ಯ ತ್ರೋಬಾಲ್ ಆಯ್ಕೆ ಶಿಬಿರ
ಮೂಲ್ಕಿ: ನೂತನ ಪ್ಲಾಟ್‌ಫಾರ್ಮ್ ಲೋಕಾರ್ಪಣೆಗೆ ಸಿದ್ಧ