ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮುಕ್ತ ಟೇಕ್ವಾಂಡೋ ಸ್ಪರ್ಧೆಯಲ್ಲಿ ಯಲಹಂಕದ ಬಾಲಕಿ ಪ್ರತ್ಯೂಷಾ ಭಾರತದ ಪರವಾಗಿ ಭಾಗವಹಿಸಿ, ಯುಎಸ್ಎ, ಜಪಾನ್, ಚೀನಾ, ನೇಪಾಳ ಹಾಗೂ ಶ್ರೀಲಂಕಾ ದೇಶಗಳ ಸ್ಪರ್ಧಿಗಳನ್ನು ಮಣಿಸಿ, ಎರಡು ವಿಭಾಗಗಳಲ್ಲೂ ಚಿನ್ನದ ಪದಕ ಗೆದ್ದು ಯಲಹಂಕಕ್ಕೆ ಕೀರ್ತಿ ತಂದಿದ್ದಾರೆ.
ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮುಕ್ತ ಟೇಕ್ವಾಂಡೋ ಸ್ಪರ್ಧೆಯಲ್ಲಿ ಯಲಹಂಕದ ಬಾಲಕಿ ಪ್ರತ್ಯೂಷಾ ಭಾರತದ ಪರವಾಗಿ ಭಾಗವಹಿಸಿ, ಯುಎಸ್ಎ, ಜಪಾನ್, ಚೀನಾ, ನೇಪಾಳ ಹಾಗೂ ಶ್ರೀಲಂಕಾ ದೇಶಗಳ ಸ್ಪರ್ಧಿಗಳನ್ನು ಮಣಿಸಿ, ಎರಡು ವಿಭಾಗಗಳಲ್ಲೂ ಚಿನ್ನದ ಪದಕ ಗೆದ್ದು ಯಲಹಂಕಕ್ಕೆ ಕೀರ್ತಿ ತಂದಿದ್ದಾರೆ.
ಯಲಹಂಕದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ ಪ್ರತ್ಯೂಷಾ ಸಾಧನೆ ಕುರಿತು ಶಾಸಕ ಎಸ್‌ಆರ್ ವಿಶ್ವನಾಥ್ ಪ್ರಶಂಸೆ ವ್ಯಕ್ತಪಡಿಸಿದರು. ಯಲಹಂಕ ನಗರ ಮಂಡಲ ಬಿಜೆಪಿ ಒಬಿಸಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಯಲಹಂಕ ನಗರ ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷ ವಿ.ಎಂ.ಚಂದ್ರಯ್ಯ, ಪದಾಧಿಕಾರಿಗಳಾದ ಸಂದೀಪ್, ಧನಂಜಯ್, ರೂಪ, ಸತೀಶ್, ಶರತ್, ಮುರಳಿ, ಅನಿಲ್, ಭಾಗ್ಯ, ಮಂಜು, ಸುಗುಣ, ರಾಜಪುಷ್ಪ ರಾಘವೇಂದ್ರ, ಹರಿ, ರಾಜಶ್ರೀ ಸೇರಿದಂತೆ ಇನ್ನಿತರರಿದ್ದರು.
-----ಕಿರಿಯ ವಯಸ್ಸಿಗೆ ಹಿರಿಯ ಸಾಧನೆ
ಪ್ರತ್ಯೂಷಾ ಪ್ರಸ್ತುತ ಯಲಹಂಕದ ಕೊಗಿಲುವಿನ ಪ್ರೆಸಿಡೆನ್ಸಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಅತ್ಯಂತ ಕಿರಿಯ ವಯಸ್ಸಿಗೆ ಡಾನ್ 2 ಪ್ರಮಾಣೀಕೃತ ಕರಾಟೆ ತರಬೇತುದಾರರಾಗಿದ್ದು, ಬ್ಲ್ಯಾಕ್ ಬೆಲ್ಟ್ ಹೊಂದಿರುವ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಮರ ಕಲೆಗಳ ತರಬೇತಿಯಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರು ಶಶಿ ಮಾರ್ಷಲ್ ಅಕಾಡೆಮಿ ಎಂಬ ಸಂಸ್ಥೆ ಸ್ಥಾಪಿಸಿ, ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಮರ ಕಲೆಗಳ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ 4 ಚಿನ್ನದ ಪದಕಗಳು, ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ 17 ಚಿನ್ನದ ಪದಕಗಳು ಹಾಗೂ 1 ಬೆಳ್ಳಿ ಪದಕ ಗಳಿಸಿರುವ ಹೆಗ್ಗಳಿಕೆ ಹೊಂದಿದ್ದು, ಇತರ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿ ಹೊರಹೊಮ್ಮಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.